ಅವರು ಖಾಲಿ ಪುಲಾವ್, ಇವರು ಕೊಳೆತ ಟೊಮೆಟೋ: ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಗಾಸಿಪ್

Published : Sep 08, 2026, 03:54 PM IST

ಬಿಗ್‌ಬಾಸ್ ಸೀಸನ್ 13ರ ಮನೆ ಎರಡು ತಂಡಗಳಾಗಿ ವಿಂಗಡನೆಯಾಗಿದ್ದು, ವಿಮಾನದಲ್ಲಿರುವ ತಂಡವು ಮನೆಯೊಳಗಿನ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡಲು ಆರಂಭಿಸಿದೆ. ಪ್ರಥಮಾ ಪ್ರಸಾದ್ ನೇತೃತ್ವದಲ್ಲಿ ಈ ಗಾಸಿಪ್ ನಡೆದಿದೆ.

PREV
15
ಶುರುವಾಯ್ತು ಗಾಸಿಪ್

ಬಿಗ್‌ಬಾಸ್ ಮನೆ ಅಂದ್ರೆ ಗಾಸಿಪ್ ಎಂಬ ಮಾತಿದೆ. ಸ್ಪರ್ಧಿಗಳು ತಮ್ಮೊಳಗೆ ಯಾರು ಹೇಗೆ ಎಂಬುದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಆಡಿದ ಮಾತುಗಳೇ ಮುಂದೆ ಅವರ ಆಟಕ್ಕೆ ತೊಡಕಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸೀಸನ್ 13ರ ಮನೆ ಸದ್ಯ ಎರಡು ಭಾಗಗಳಾಗಿ ವಿಂಗಡನೆಯಾಗಿವೆ.

25
ಗಾಸಿಪ್ ಮಾಡೋಣ ಬನ್ನಿ ಎಂದ ಪ್ರಥಮಾ ಪ್ರಸಾದ್

ಒಂದು ತಂಡ ಬಿಗ್‌ಬಾಸ್ ಮನೆಯೊಳಗೆ ಸೇರಿದ್ದು, ಮತ್ತೊಂದು ತಂಡ ವಿಮಾನದಲ್ಲಿಯೇ ಉಳಿದುಕೊಂಡಿದೆ. ವಿಮಾನದಲ್ಲಿರುವ ಸದಸ್ಯರು ಮನೆಯೊಳಗೆ ಹೋಗಿರುವ ಸ್ಪರ್ಧಿಗಳ ಬಗ್ಗೆ ಗಾಸಿಪ್ ಮಾಡುತ್ತಿದ್ದಾರೆ. ಸ್ಪರ್ಧಿ ಪ್ರಥಮಾ ಪ್ರಸಾದ್ ಗಾಸಿಪ್ ಮಾಡೋಣ ಬನ್ನಿ ಎಂದು ಎಲ್ಲರನ್ನು ಕರೆಯತ್ತಾರೆ. ನಂತರ ಒಂದೊಂದಾಗಿಯೇ ಸದಸ್ಯರ ಹೆಸರುಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ.

35
ತಾಂಡವ್ ರಾಮ್

ಕಿರುತೆರೆ ನಟ ತಾಂಡವ್ ರಾಮ್ ಸದ್ಯ ಬಿಗ್‌ಬಾಸ್ ಮನೆ ಸೇರಿದ್ದಾರೆ. ವಿಮಾನದಲ್ಲಿರೋ ಸದಸ್ಯರ ಪೈಕಿ ಕಿರಣ್ ಶಾಸ್ತ್ರಿ, ಸಹಸ್ಪರ್ಧಿಯಾಗಿರೋ ತಾಂಡವ್ ರಾಮ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಾಂಡವ್ ರಾಮ್ ತಮ್ಮನ್ನು ತಾವು ಪುಲಾವ್ ಅಂದ್ಕೊಂಡಿದ್ದಾರೆ. ತಮಗೆ ಬೇಕಾದವರ ಜೊತೆ ಮಾತ್ರ ಮಾತನಾಡುತ್ತಾರೆ. ಯಾರ ಜೊತೆಯಲ್ಲಿಯೂ ಹೊಂದಿಕೊಳ್ಳದ ಕಾರಣ ಅವರು ಖಾಲಿ ಪುಲಾವ್ ಎಂದು ಹೇಳಿದರು

45
ಗಗನ್ ಚಿನ್ನಪ್ಪ

ಇನ್ನು ಗಗನ್ ಚಿನ್ನಪ್ಪ ಅವರ ಹೆಸರು ಬಂದಾಗ ಅವರನ್ನು ಕೊಳೆತ ಟೊಮೆಟೋ ಎಂದು ಲಿಖಿತ್ ಹೇಳುತ್ತಾರೆ. ಯಾಕೆ ಎಂದು ಪ್ರಶ್ನೆ ಮಾಡಿದಾಗ ಉತ್ತರಿಸಿದ ಕಿರಣ್ ಶಾಸ್ತ್ರಿ, ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವೇ ಇಲ್ಲ. ನಾನೇ ಮಾತನಾಡ್ತೀನಿ ಅಂತಾರೆ. ತಾಂಡವ್ ಮತ್ತು ಗಗನ್ ಚಿನ್ನಪ್ಪ ಒಬ್ಬರಿಗೊಬ್ಬರು ಸೇವ್ ಮಾಡಿಕೊಂಡರು. ಒಂದು ರೀತಿ ಕಡಲೆಬೀಜ ಇಲ್ಲದ ಚಿತ್ರನ್ನಾ ಎಂದು ಗಗನ್ ಚಿನ್ನಪ್ಪ ಬಗ್ಗೆ ಗಾಸಿಪ್ ಮಾಡಲಾಗಿದೆ.

55
ಎರಡು ತಂಡ

ಬಿಗ್‌ಬಾಸ್ ಮನೆಯಲ್ಲಿರೋ ಸದಸ್ಯರು: ಆಸಿಯಾ ಫಿರ್ಧೋಸ್, ಗಗನ್ ಚಿನ್ನಪ್ಪ, ಜಗದೀಶ್, ಸಂಗೀತಾ ಭಟ್, ಕಾವ್ಯಾ ಗೌಡ, ಯಶಸ್ ಕೃಷ್ಣ, ಓಂಪ್ರಕಾಶ್ ರಾವ್

ವಿಮಾನದಲ್ಲಿಯೇ ಉಳಿದುಕೊಂಡ ಸದಸ್ಯರು: ವೈಷ್ಣವಿ ಕೌಂಡಿನ್ಯ, ಕಿರಣ್ ಶಾಸ್ತ್ರಿ, ಧನುಷ್, ಪ್ರಥಮಾ ಪ್ರಸಾದ್, ಸೌಂದರ್ಯ ಶೆಟ್ಟಿ, ಅವಿನಾಶ್, ಮಾಡರ್ನ್ ಮಹಾಕವಿ ಮಂಜ, ಲಿಖಿತ್ ಗೋಂಧಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories