Bigg Boss Kannada 12 ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡ್ತಿರೋ ಕಾಂತಾರ ಸಿನಿಮಾ ನಟ ಯಾರು?

Published : Oct 19, 2025, 09:53 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೂರನೇ ವಾರದೊಳಗಡೆ ಐವರು ಎಲಿಮಿನೇಟ್‌ ಆಗಿದ್ದಾರೆ. ಮೂರನೇ ವಾರಕ್ಕೆ ಮೊದಲ ಫಿನಾಲೆ ಕೂಡ ನಡೆಯುತ್ತಿದ್ದು, ವೈಲ್ಡ್‌ ಕಾರ್ಡ್‌ ಎಂಟ್ರಿಗಳು ಕೂಡ ಆಗಲಿವೆ. ಹಾಗಾದರೆ ಯಾರು? 

PREV
15
ಮೊದಲು ಎಲಿಮಿನೇಟ್‌ ಆಗಿದ್ದು ಯಾರು?

ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಮೊದಲ ವಾರ ಆರ್‌ಜೆ ಅಮಿತ್‌, ಕರಿಬಸಪ್ಪ ಅವರು ಎಲಿಮಿನೇಟ್‌ ಆಗಿದ್ದರು. ಎರಡನೇ ವಾರ ಯಾರೂ ಕೂಡ ಎಲಿಮಿನೇಟ್‌ ಆಗಿರಲಿಲ್ಲ. ಈಗ ಮೂರನೇ ವಾರಕ್ಕೂ ಮೊದಲು ಒಂದು ಎಲಿಮಿನೇಟ್‌ ಆಗಿತ್ತು.

25
ಮಿಡ್‌ ವೀಕ್‌ ಎಲಿಮಿನೇಶನ್‌

ಮಿಡ್‌ ವೀಕ್‌ ಎಲಿಮಿನೇಶನ್‌ ನಡೆದಿದ್ದು, ಸತೀಶ್‌ ಕ್ಯಾಡಬಮ್ಸ್‌ ಅವರು ಎಲಿಮಿನೇಟ್‌ ಆಗಿದ್ದರು. ರಾತ್ರೋ ರಾತ್ರಿ ಎಲಿಮಿನೇಶನ್‌ ಆಗಿರೋದು ಅನೇಕರಿಗೆ ಶಾಕ್‌ ನೀಡಿತ್ತು. ನಾಯಿಗಳ ವ್ಯಾಪಾರ ಮಾಡಿ ಸತೀಶ್‌ ಅವರು ಫೇಮಸ್‌ ಆಗಿದ್ದರು.

35
ಮಂಜುಭಾಷಿಣಿ, ಅಶ್ವಿನಿ ಔಟ್‌

ಅಂದಹಾಗೆ ಮೂರನೇ ವಾರ ಮಂಜುಭಾಷಿಣಿ, ಅಶ್ವಿನಿ ಎಸ್‌ ಎಸ್‌ ಅವರು ಕೂಡ ಎಲಿಮಿನೇಟ್‌ ಆಗಿದ್ದಾರೆ. ಮಾಸ್‌ ಎಲಿಮಿನೇಶನ್‌ ಇರಲಿದೆ ಎಂದು ಮೊದಲೇ ಕಿಚ್ಚ ಸುದೀಪ್‌ ಸುಳಿವು ನೀಡಿದ್ದರು. ಅದರಂತೆ ಆಗಿದೆ.

45
ವೈಲ್ಡ್‌ ಕಾರ್ಡ್‌ ಎಂಟ್ರಿ ಯಾರು?

ಅಂದಹಾಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಕಾಂತಾರ ಚಾಪ್ಟರ್‌ 1, ಕ್ರಾಂತಿ, ಕಾಟೇರ ಸಿನಿಮಾ ನಟ ರಾಘವೇಂದ್ರ ಎಸ್‌ ಹೊಂಡದಕೇರಿ ಅವರು ಬಿಗ್‌ ಬಾಸ್‌ ಮನೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗ್ತಿದೆ. ಕೇವಲ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರ ಚರ್ಚೆ ಆಗ್ತಿದೆ. ಇಂದಿನ ಎಪಿಸೋಡ್‌ನಲ್ಲಿ ಸತ್ಯಾಸತ್ಯತೆ ಗೊತ್ತಾಗಲಿದೆ. 

55
ರಘು ಯಾರು?

ಈ ಹಿಂದೆ ಅವರು ಕ್ವಾಟ್ಲೆ ಕಿಚನ್‌ ಶೋನಲ್ಲಿ ಭಾಗವಹಿಸಿದ್ದರು. ಸೆಲೆಬ್ರಿಟಿ ಕೋಚ್‌ ಕೂಡ ಹೌದು, 5x ಪವರ್‌ಲಿಫ್ಟಿಂಗ್‌ನಲ್ಲಿ ಅವರು ವಿಶ್ವ ಚಾಂಪಿಯನ್‌ ಕೂಡ ಆಗಿದ್ದಾರೆ.

Read more Photos on
click me!

Recommended Stories