Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗಾಗಲೇ ಹತ್ತು ವಾರಗಳು ಕಳೆದಿವೆ. ರಘು, ಸೂರಜ್ ಸಿಂಗ್, ರಿಷಾ ಗೌಡ ಬಳಿ ಮತ್ತೆರಡು ವೈಲ್ಡ್‌ಕಾರ್ಡ್ ಎಂಟ್ರಿಯಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಇರುವವರ ಮಧ್ಯೆ ಇಬ್ಬರು ಸ್ಪರ್ಧಿಗಳೇ ಅಲ್ಲ ಎನ್ನಲಾಗುತ್ತಿದೆ.
ಆರಂಭದಲ್ಲಿ ರಘು, ಸೂರಜ್ ಸಿಂಗ್, ರಿಷಾ ಗೌಡ ಅವರು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಇವರ ಮಧ್ಯೆ ರಿಷಾ ಗೌಡ ಎಲಿಮಿನೇಟ್ ಆಗಿದ್ದಾರೆ. ಬೇರೆಯವರ ಮುಖವಾಡ ಕಳಚುವೆ ಎಂದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿ ಒಳಗಡೆ ಹೋಗಿದ್ದ ರಿಷಾ, ಸಾಕಷ್ಟು ಬಾರಿ ಕಿಚ್ಚ ಸುದೀಪ್ ಅವರ ಬಳಿ ಕಿವಿ ಹಿಂಡಿಸಿಕೊಂಡಿದ್ದರು.
25
ಆದಷ್ಟು ಬೇಗ ಮನೆಯಿಂದ ಹೊರಬರ್ತಾರೆ
ಅಂದಹಾಗೆ ಸೂರಜ್ ಸಿಂಗ್ ಅವರು ಟಾಸ್ಕ್‌ಗಳನ್ನು ಚೆನ್ನಾಗಿ ಆಡುತ್ತಾರೆ, ಮನೆ ಕೆಲಸ ಮಾಡುತ್ತಾರೆ, ಆದರೆ ರಾಶಿಕಾ ಶೆಟ್ಟಿ ಜೊತೆಗೆ ಸ್ನೇಹ ಜಾಸ್ತಿ ಆಗಿದೆ. ಹೀಗಾಗಿ ಇವರು ಕೂಡ ಆದಷ್ಟು ಬೇಗ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.
35
ಎಲಿಮಿನೇಶನ್ ಆದವರು ಯಾರು?
ಈಗಾಗಲೇ ಕರಿಬಸಪ್ಪ, ಸತೀಶ್ ಕ್ಯಾಡಬಮ್ಸ್, ಆರ್‌ಜೆ ಅಮಿತ್, ರಿಷಾ ಗೌಡ, ಕಾಕ್ರೋಚ್ ಸುಧಿ, ಜಾಹ್ನವಿ, ಮಂಜು ಭಾಷಿಣಿ, ಅಶ್ವಿನಿ ಎಸ್‌ಎನ್ ಅವರು ಔಟ್ ಆಗಿದ್ದಾರೆ.
ಮ್ಯಾಕ್ಸ್ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ರಜತ್ ಕಿಶನ್ ಅವರು ದೊಡ್ಮನೆಯೊಳಗಡೆ ಎಂಟ್ರಿ ಕೊಟ್ಟಿದ್ದರು. ಒಂದು ವಾರಗಳ ಬಳಿಕ ಇವರು ಹೊರಗಡೆ ಬಂದಿದ್ದಾರೆ. ಆ ಬಳಿಕ ರಜತ್, ಚೈತ್ರಾ ಕುಂದಾಪುರ ಅವರು ಸ್ಪರ್ಧಿಗಳು ಎಂದು ಘೋಷಣೆ ಮಾಡಲಾಗಿತ್ತು.
55
ಈಗ ಹೊರಬರೋರು ಯಾರು?
ಈಗ ಚೈತ್ರಾ ಕುಂದಾಪುರ, ರಜತ್ ಅವರು ಸ್ಪರ್ಧಿಗಳಲ್ಲ, ಅತಿಥಿಗಳು ಗುರುವಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಒಟ್ಟಿನಲ್ಲಿ ಇವರು ಔಟ್ ಆಗ್ತಾರಾ ಎಂದು ಕಾದು ನೋಡಬೇಕಿದೆ.