ಅಮೃತಧಾರೆ ಧಾರಾವಾಹಿಯಲ್ಲಿ, ಅನಿರೀಕ್ಷಿತವಾಗಿ ಒಂದೇ ದೇವಸ್ಥಾನದಲ್ಲಿ ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ ಸೇರುತ್ತಾರೆ. ಅಲ್ಲಿ ಜೈದೇವ್, ಆಕಾಶ್‌ನನ್ನು ಹಿಡಿದು ಮಲ್ಲಿಯ ಬಗ್ಗೆ ಸತ್ಯ ಹೇಳುವಷ್ಟರಲ್ಲಿ, ಮಲ್ಲಿ ಹಿಂದಿನಿಂದ ಬಂದು ಅವನ ತಲೆಗೆ ಹೊಡೆದು ಕೆಳಗೆ ಬೀಳಿಸುತ್ತಾಳೆ.
ಅಮೃತಧಾರೆಯಲ್ಲಿ (Amruthadhaare) ಇನ್ನೇನು ಎಲ್ಲರೂ ಒಂದಾಗುವ ಟೈಮ್ ಬಂದೇ ಬಿಟ್ಟಿದೆ. ಮಲ್ಲಿ ಮತ್ತು ಮಗ ಆಕಾಶ್‌ನನ್ನು ಕರೆದುಕೊಂಡು ಭೂಮಿಕಾ ದೇವಾಲಯಕ್ಕೆ ಹೋಗಿದ್ದರೆ, ಅದೇ ದೇವಾಲಯಕ್ಕೆ ಗೌತಮ್ನೂ ಬಂದಿದ್ದಾನೆ.
27
ಮನೆಬಿಟ್ಟ ಭಾಗ್ಯಮ್ಮ
ಮಗ-ಸೊಸೆ ಬೆಂಗಳೂರಿನಲ್ಲಿಯೇ ಇರುವುದು ತಿಳಿದು ಅವರನ್ನು ಹುಡುಕಿ ಮನೆಬಿಟ್ಟ ಭಾಗ್ಯಮ್ಮ ಕೂಡ ಅದೇ ದೇವಾಲಯಕ್ಕೆ ಬಂದಿದ್ದಾಳೆ. ಆಟೊದಲ್ಲಿ ಭೂಮಿಕಾ ಹೋಗುವುದನ್ನು ನೋಡಿದ್ದ ಅವಳು ಅದರ ಹಿಂದೆನೇ ಬಂದು ದೇವಾಲಯ ಸೇರಿದ್ದಾಳೆ.
37
ಶಕುಂತಲಾ ಮಾತು
ಅದೇ ಇನ್ನೊಂದೆಡೆ, ಗ್ರಹಚಾರ ಸರಿಯಿಲ್ಲ, ಪೂಜೆ ಮಾಡಿಸಿಕೊಂಡು ಬಾ ಎಂದು ಜೈದೇವ್ ಮತ್ತು ದಿಯಾಳನ್ನು ಶಕುಂತಾ ಒತ್ತಾಯಪೂರ್ವಕವಾಗಿ ಕಳುಹಿಸಿದ್ದಾಳೆ.
ಮನಸ್ಸಿಲ್ಲದ ಮನಸ್ಸಿನಿಂದ ಜೈದೇವ ಬಂದಿದ್ದಾನೆ. ಫುಲ್ ಟೈಟ್ ಆಗಿ ಕಾರಿನಲ್ಲಿ ಆತ ಕುಳಿತಿದ್ದರೆ, ದಿಯಾ ದೇವಸ್ಥಾನದ ಒಳಗೆ ಹೋಗಿದ್ದಾಳೆ.
57
ಭಾಗ್ಯಮ್ಮ ಪ್ರತ್ಯಕ್ಷ
ಕಾರಿನ ಕುಳಿತ ಜೈದೇವ್ಗೆ ಭಾಗ್ಯಮ್ಮ ಕಾಣಿಸಿದ್ದಾಳೆ. ಭಾಗ್ಯಮ್ಮ ದೇವಸ್ಥಾನ ಒಳ ಹೊಕ್ಕಿದ್ದನ್ನು ನೋಡಿದ ಆತ ಅವಳ ಹಿಂದೆಯೇ ಬಂದಿದ್ದಾನೆ. ಅದಕ್ಕೂ ಮೊದಲು ಭೂಮಿಕಾ, ಮಲ್ಲಿ ಹೋಗಿದ್ದನ್ನು ಆತ ಗಮನಿಸಿರಲಿಲ್ಲ.
67
ಆಕಾಶ್‌ನನ್ನು ಕಂಡ ಜೈದೇವ
ಅಲ್ಲಿ ಜೈದೇವ್ಗೆ ಆಕಾಶ್ ಕಾಣಿಸಿದ್ದಾನೆ. ಇವನನ್ನು ನೋಡಿ ಆಕಾಶ್ ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಆತ ಹಿಡಿದುಕೊಂಡು ಬಿಟ್ಟಿದ್ದಾನೆ. ಆಕಾಶ್ ಅವರನನ್ನು ನೋಡಿ ಗುರುತೇ ಇಲ್ಲದ ಹಾಗೆ ಮಾಡಿದರೂ, ಜೈದೇವ ತನ್ನ ಗುರುತು ಹೇಳಿದ್ದಾನೆ.
77
ಜೈದೇವ್ ತತ್ತರ
ಕೊನೆಗೆ ಮಲ್ಲಿಯ ಫೋಟೋ ಬಗ್ಗೆ ಪ್ರಶ್ನಿಸಿದ್ದಾನೆ. ಅವರು ನಿಮಗೆ ಏನಾಗಬೇಕು ಎಂದು ಆಕಾಶ್ ಕೇಳಿದ್ದಾನೆ. ಆ ಬಗ್ಗೆ ಜೈದೇವ್ ಎಲ್ಲಾ ಸತ್ಯ ನುಡಿಯುವುದರಲ್ಲಿ ಇದ್ದ. ಅದನ್ನು ಮರೆಯಿಂದಲೇ ಕೇಳಿಸಿಕೊಳ್ಳುತ್ತಿದ್ದ ಮಲ್ಲಿ ಅಲ್ಲೇ ಇದ್ದ ಕೋಲಿಯಿಂದ ಜೈದೇವನ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಆ ಹೊಡೆತಕ್ಕೆ ಜೈದೇವ ತತ್ತರಿಸಿ ಹೋಗಿದ್ದಾನೆ.