BBK 12: ಬಿಗ್‌ ಬಾಸ್‌ ಮನೆಗೆ ಬಂದ ಸ್ಪರ್ಧಿಗಳ ಉದ್ದೇಶ ಕೊನೆಗೂ ಬಯಲು; ಇದೇ ಸತ್ಯ, ಇದೇ ನಿತ್ಯ

Published : Sep 28, 2025, 08:37 PM ISTUpdated : Sep 28, 2025, 09:20 PM IST

Bigg Boss Kannada Season 12: ನಾನು ಬಿಗ್‌ ಬಾಸ್‌ ಮನೆಗೆ ಹೋಗಲ್ಲ ಎಂದು ಕೆಲವರು ಬಿಗ್‌ ಬಾಸ್‌ ಮನೆಗೆ ಬಂದಿದ್ದಿದೆ. ಹಾಗಾದರೆ ಯಾರೆಲ್ಲ ಸ್ಪರ್ಧಿಗಳು ದೊಡ್ಮನೆ ಬಂದಿದ್ದಾರೆ?ಇವರು ಬಿಗ್‌ ಬಾಸ್‌ ಮನೆಗೆ ಬರಲು ಕಾರಣ ಏನು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
112
ಸ್ಪರ್ಧಿಗಳು ಯಾರು?

ಈ ಬಾರಿ ವಿಭಿನ್ನವಾದ ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಅವರು ಯಾರು? 

212
ಮಂಜುಭಾಷಿಣಿ

ಬಿಗ್‌ ಬಾಸ್‌ ಮನೆ ಬಗ್ಗೆ ಅನೇಕರು ನೆಗೆಟಿವ್‌ ಮಾತನಾಡಿದ್ದುಂಟು. ನಾನು ಸ್ಟ್ರಾಂಗ್‌, ನಾನು ಹಾಗೆ ಹೀಗೆ ಎಂದುಕೊಳ್ಳೋದುಂಟು. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ನಾವು ಹೇಗೆ ಎನ್ನೋದು ಗೊತ್ತಾಗುತ್ತದೆ ಎಂದು ಮಂಜುಭಾಷಿಣಿ ಅವರು ಹೇಳಿದ್ದಾರೆ.

312
ಚಂದ್ರಪ್ರಭ

ನಾನು ಡಬಲ್‌ ಮೀನಿಂಗ್‌ ಮಾತಾಡ್ತೀನಿ ಅಂತ ಕೆಲವರು ಹೇಳಿರುತ್ತಾರೆ. ತಮಗೆ ಹೇಳೋಕೆ ಆಗ ಮಾತನ್ನು ಡೈರೆಕ್ಟರ್‌ ನನ್ನ ಬಳಿ ಮಾತನಾಡಿಸೋದುಂಟು. ಆದರೆ ನಾನು ಪರಿಶುದ್ಧ, ನನ್ನ ಹೆಸರೇ ಪರಿಶುದ್ಧ ಎಂದು ಚಂದ್ರಪ್ರಭ ಹೇಳಿದ್ದಾರೆ.

412
ಧನುಷ್‌ ಗೌಡ

ಗೀತಾ ಧಾರಾವಾಹಿ ಮೂಲಕ ವಿಜಯ್‌ ಆಗಿ ನಾನು ಜನರಿಗೆ ಹತ್ತಿರ ಆಗಿದ್ದೇನೆ. ಧನುಷ್‌ ಗೌಡ ಆಗಿ ಜನರಿಗೆ ಹತ್ತಿರ ಆಗಿರಬೇಕು ಎಂದು ಧನುಷ್‌ ಅವರು ಹೇಳಿದ್ದಾರೆ.

512
ಕಾಕ್ರೋಚ್‌ ಸುಧಿ

ನನ್ನನ್ನು ಅರಿತುಕೊಳ್ಳೋಕೆ, ನಾನು ಹೇಗೆ ಅಂತ ಅರ್ಥ ಮಾಡಿಕೊಳ್ಳೋಕೆ ಬಿಗ್‌ ಬಾಸ್‌ ಮನೆಗೆ ಬಂದಿಲ್ಲ. ನನ್ನನ್ನು ನಾನು ತೋರಿಸಿಕೊಳ್ಳೋಕೆ ಈ ಮನೆಗೆ ಬಂದಿದ್ದೇನೆ. ನಮಗೆ ಕ್ಯಾಮರಾ ಸಿಕ್ಕರೆ ಸಾಕು, ಸಂಭಾವನೆಯನ್ನು ಹೊರಗಡೆಯೂ ಪಡೆಯುತ್ತೇನೆ. ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲೆಲ್ಲೂ ಕ್ಯಾಮರಾ ಇರುತ್ತದೆ. ಅದೇ ಖುಷಿ ನನಗೆ. ನನ್ನ ಮೇಲೆ 24/7 ಕ್ಯಾಮರಾ ಕಣ್ಣು ಬೀಳುತ್ತೆ ಎಂದರೆ ಸುಮ್ಮನೆ ಇರುತ್ತೀನಾ? ಬಂದೇ ಬರ್ತೀನಿ.

612
ಕಾವ್ಯ ಶೈವ

ನಾನು ಮನೆಯಲ್ಲಿ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ತೀನಿ. ಸಿಟ್ಟು ಬಂದರೆ ನಾನು ಮನೆಯಲ್ಲಿರೋ ವಸ್ತುಗಳನ್ನೆಲ್ಲ ಒಡೆದು ಹಾಕ್ತೀನಿ. ಕೆಲಸ ಮಾಡೋ ಸ್ಥಳದಲ್ಲಿ ನಾನು ಈ ರೀತಿ ಇರೋದಿಲ್ಲ, ಅಳುತ್ತೀನಿ ಅಷ್ಟೇ. ಇಲ್ಲಿ ಹೇಗೆ ಇರ್ತೀನಿ ಅಂತ ಕಾದು ನೋಡಬೇಕಿದೆ.

712
ಡಾಗ್‌ ಸತೀಶ್‌

ಮುಂದಿನ ತಿಂಗಳು ಒಂದೇ ದಿನಕ್ಕೆ 67 ಲಕ್ಷ ರೂಪಾಯಿ ಆದಾಯ ಬರಬೇಕಿತ್ತು. ಆದರೆ ಬಿಗ್‌ ಬಾಸ್‌ ಮೇಲಿನ ಆಸೆಗೆ ಅದನ್ನು ಬಿಟ್ಟು ಬಿಗ್‌ ಬಾಸ್‌ ಮನೆಗೆ ಬಂದಿದ್ದೇನೆ. ಈ ಶೋಗೋಸ್ಕರ 25 ಲಕ್ಷ ರೂಪಾಯಿ ಬಟ್ಟೆ ಖರೀದಿ ಮಾಡಿದ್ದೇನೆ ಎಂದು ಡಾಗ್ ಸತೀಶ್‌ ಹೇಳಿದ್ದಾರೆ.

812
ಗಿಲ್ಲಿ ನಟ

ಆರು ತಿಂಗಳುಗಳಿಂದ ನನಗೆ ಹಣ ಇರಲಿಲ್ಲ. ಹೀಗಾಗಿ ಬಿಗ್‌ ಬಾಸ್‌ ಮನೆಗೆ ಬಂದಿದ್ದೇನೆ. ನನಗೆ ದುಡ್ಡು ಬೇಕು, ಟ್ರೋಫಿ ಬೇಕು, ಅದಿಕ್ಕೆ ಬಂದಿರುವೆ ಎಂದು ಅವರು ಹೇಳಿದ್ದಾರೆ.

912
ಜಾಹ್ನವಿ ಆರ್‌

ಸುದ್ದಿ ನಿರೂಪಕಿ ನಟಿ ಜಾಹ್ನವಿ ಅವರು ಡಿವೋರ್ಸ್‌ ಪಡೆದಿದ್ದಾರೆ. ಅನೇಕರು ಈ ಬಗ್ಗೆ ಕೊಂಕು ನುಡಿದಿದ್ದಾರೆ. ಆದರೆ ಸಂದರ್ಶನದಲ್ಲಿ ಡಿವೋರ್ಸ್‌ ಪಡೆದ ಕಾರಣ, ಹೋರಾಟದ ಜೀವನದ ಬಗ್ಗೆ ಮಾತನಾಡಿದಾಗ ಅನೇಕರು ಸ್ಪೂರ್ತಿಯಾಯ್ತು ಎಂದು ಹೇಳಿದ್ದುಂಟು. ಬಿಗ್‌ ಬಾಸ್ ಶೋನಂತಹ ದೊಡ್ಡ ವೇದಿಕೆಯಲ್ಲಿ ನಮ್ಮನ್ನು ನಾವು ಗುರುತಿಸಿಕೊಂಡಾಗ, ಅನೇಕರಿಗೆ ಸ್ಫೂರ್ತಿ ಆಗುವುದು. ಅಷ್ಟೇ ಅಲ್ಲದೆ ಹೆಣ್ಣು ಈ ಬಾರಿ ಟ್ರೋಫಿ ಪಡೆಯಬೇಕು ಎನ್ನೋದು ನನ್ನ ಆಸೆ ಎಂದಿದ್ದಾರೆ.

1012
ರಾಶಿಕಾ ಶೆಟ್ಟಿ

‘ಮನದ ಕಡಲು’ ಸಿನಿಮಾದಲ್ಲಿ ನಟಿಸಿರುವ ರಾಶಿಕಾ ಶೆಟ್ಟಿ ಅವರಿಗೆ ತಿನ್ನೋದು ಅಂದರೆ ತುಂಬ ಇಷ್ಟ. ಬಿಗ್‌ ಬಾಸ್‌ ಮನೆ ಹೇಗಿರುತ್ತದೆ? ಇಲ್ಲಿ ಹೇಗಿರಲಿದ್ದೇನೆ ಎನ್ನುವ ಕುತೂಹಲ ಇದೆಯಂತೆ. 

1112
ಮಲ್ಲಮ್ಮ

ಕಳೆದ ಬಾರಿಯಿಂದ ಬಿಗ್‌ ಬಾಸ್‌ ಮನೆಗೆ ಹೋಗಬೇಕು, ಕಿಚ್ಚ ಸುದೀಪ್‌ ಅವರನ್ನು ನೋಡಬೇಕು ಎನ್ನೋದು ಮಲ್ಲಮ್ಮನ ಆಸೆಯಂತೆ. 

1212
ಅಭಿಷೇಕ್‌ ಶ್ರೀಕಾಂತ್

‌'ಲಕ್ಷಣ' ಹಾಗೂ ʼವಧುʼ ಧಾರಾವಾಹಿ ನಟ ಅಭಿಷೇಕ್‌ ಶ್ರೀಕಾಂತ್‌ ಅವರಿಗೆ ಸಿನಿಮಾದಲ್ಲಿ ನಟಿಸುವ ಆಸೆ. ಅದಕ್ಕೂ ಮುನ್ನ ಬಿಗ್‌ ಬಾಸ್‌ ಆಫರ್‌ ಬಂದಿದೆ. ಹೀಗಾಗಿ ಅವರು ದೊಡ್ಮನೆಗೆ ಹೋಗಲು ಜೈ ಎಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories