BBK 12: ಬಿಗ್‌ ಬಾಸ್‌ ಮಾಳು ನಿಪನಾಳ ಪತ್ನಿ ಕೂಡ ಗಾಯಕಿ! ಅವರು ಯಾರು? ಲವ್‌ ಹುಟ್ಟಿದ್ದೇಗೆ? ಭಾರೀ ರೋಚಕ ಕಥೆ

Published : Oct 13, 2025, 12:25 AM IST

Bigg Boss Malu Nipanal Wife Megha: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಮಾಳು ನಿಪನಾಳ ಅವರು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದವರು. ಇವರ ಪತ್ನಿ ಮೇಘಾ ಕೂಡ ಗಾಯಕಿ ಎನ್ನೋದು ಅನೇಕರಿಗೆ ಗೊತ್ತೇ ಇಲ್ಲ.  

PREV
15
ಮನೆಯಿಂದ ದೂರ ಇದ್ದವರೇ ಅಲ್ಲ

“ನಾನು ಮನೆಯಿಂದ ದೂರ ಇದ್ದವನೇ ಅಲ್ಲ, ಎಷ್ಟೇ ದೂರ ಹೋದರೂ ಡ್ರೈವರ್‌ ಜೊತೆಗೆ ಮನೆಗೆ ಬರುತ್ತಿದ್ದೆ” ಎಂದು ಅವರು ಬಿಗ್‌ ಬಾಸ್‌ ಮನೆಯಲ್ಲಿ ಹೇಳಿಕೊಂಡಿದ್ದರು.

25
ಮಕ್ಕಳ ಹೆಸರು ಹಚ್ಚೆ ಹಾಕಿಸಿಕೊಂಡಿದ್ರು

ಮಾಳು ನಿಪನಾಳ ಅವರು ಕೈಮೇಲೆ ಮಕ್ಕಳ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಎಲ್ಲೇ ಹೋದರೂ ಕೂಡ, ಅವರಿಗೆ ಮಕ್ಕಳ ನೆನಪಾಗುವುದಂತೆ. ಹೀಗಾಗಿ ಬಿಗ್‌ ಬಾಸ್‌ ಮನೆಯಲ್ಲಿ ಇರೋದು ಕಷ್ಟ ಎಂದು ಹೇಳಿದ್ದರು.

35
ಲವ್‌ ಮ್ಯಾರೇಜ್

ಮಾಳು ನಿಪನಾಳ ಹಾಗೂ ಮೇಘಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಮೇಘಾ ಅವರು ಸ್ಟುಡಿಯೋವೊಂದರಲ್ಲಿ ಹಾಡು ಹಾಡುತ್ತಿದ್ದರು. ಆಗ ಮಾಳು ನಿಪನಾಳ ಅವರು ಸಾಹಿತ್ಯ ಬರೆಯೋಕೆ ಅಲ್ಲಿಗೆ ಬರುತ್ತಿದ್ದರು.

45
ಲವ್‌ ಮ್ಯಾರೇಜ್

ಹೀಗೆ ಮಾಳು ನಿಪನಾಳ ಹಾಗೂ ಮೇಘಾ ಅವರ ಮಧ್ಯೆ ಸ್ನೇಹ ಶುರುವಾಗಿ ಪ್ರೀತಿ ಹುಟ್ಟಿದೆ. ಕುಟುಂಬದವರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.

55
ಇಬ್ಬರು ಮಕ್ಕಳು

ಮಾಳು ಹಾಗೂ ಮೇಘಾ ಅವರಿಗೆ ಇಬ್ಬರು ಮಕ್ಕಳಿದ್ದು, ಮೊದಲ ಮಗನಿಗೆ ಶ್ರೇಯಸ್‌, ಎರಡನೇ ಮಗನಿಗೆ ಭಜರಂಗಿ ಎಂದು ಹೆಸರಿಟ್ಟಿದ್ದಾರೆ.

Read more Photos on
click me!

Recommended Stories