Bigg Boss ಮನೇಲಿ ಆ ವಿಷಯ ಹೇಳೋಕೆ ಧೈರ್ಯ ಇರೋ ಪ್ರಪಂಚದ ಮೊದಲ ಗಂಡ ಅಂದ್ರೆ ವಿ ರವಿಚಂದ್ರನ್!‌ ಡೌಟ್‌ ಬೇಡ

Published : Dec 18, 2025, 01:34 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮನೆಯೊಳಗಡೆ ವಿ ರವಿಚಂದ್ರನ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಪ್ಯಾರ್‌ ಸಿನಿಮಾದಲ್ಲಿ ರಾಶಿಕಾ ಶೆಟ್ಟಿ ಅವರ ತಂದೆ ಪಾತ್ರದಲ್ಲಿ ರವಿಚಂದ್ರನ್‌ ನಟಿಸುತ್ತಿದ್ದಾರೆ. ಪ್ಯಾರ್‌ ಎಂದರೆ ಲವ್‌ ಎಂದರ್ಥ. ಈಗ ರವಿಚಂದ್ರನ್‌ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. 

PREV
16
ಆ ನಗುವನ್ನು ಮರೆತಿಲ್ಲ

“ನಾ ನಿನ್ನ ಮರೆಯಲಾರೆ ಸಿನಿಮಾದಲ್ಲಿ ಡಾ ರಾಜ್‌ಕುಮಾರ್‌ ಓಡಿಸಿದ್ದ ಬೈಕ್‌ ತಗೊಂಡು ಕಾಲೇಜಿಗೆ ಬಂದೆ.  ಆ ಬೈಕ್‌ ಸೌಂಡ್‌ಗೆ ಒಂದು ಹುಡುಗಿ ನನ್ನ ತಿರುಗಿ ನೋಡಿದಳು. ನಾನು ಕಾಲೇಜಿನಲ್ಲಿ ಆ ಹುಡುಗಿಯನ್ನು ನೋಡಿದೆ, ಆ ಹುಡುಗಿ ನಕ್ಕಳು. ಆ ನಗುವನ್ನು ನಾನು ಇಂದಿಗೂ ಕೂಡ ಮರೆತಿಲ್ಲ” ಎಂದು ವಿ ರವಿಚಂದ್ರನ್‌ ಹೇಳಿದ್ದಾರೆ.

26
ಒಂದು ವರ್ಷ ಟೈಮ್‌ ತಗೊಂಡೆ

“ನಾನು ಆ ಹುಡುಗಿ ಹುಡುಕೋಕೆ ಐ ಲವ್‌ ಯು ಎಂದು ಹೇಳೋಕೆ ಒಂದು ವರ್ಷ ಸಮಯ ತಗೊಂಡೆ. ಒಂದು ವರ್ಷ ನಾವಿಬ್ಬರೂ ಕಣ್ಣಿನಲ್ಲಿ ಲವ್‌ ಮಾಡಿದೆ. ಆಮೇಲೆ ಕಾರ್‌ ತಗೊಂಡು ಹೋಗಿದ್ದೆ, “ಎಕ್ಸ್‌ಕ್ಯೂಸ್‌ ಮೀ, ಡ್ರಾಪ್‌ ಮಾಡಲಾ?” ಎಂದು ಕೇಳಿದೆ. ಆಗ ಅವಳು, “ನೋ ಥ್ಯಾಂಕ್ಸ್”‌ ಎಂದು ಹೇಳಿದಳು. ಆಮೇಲೆ ನಾನು ಒಂದು ವಾರ ಕಾಲೀಜ್‌ಗೆ ಹೋಗಲಿಲ್ಲ” ಎಂದು ಹೇಳಿದ್ದಾರೆ.

36
ಫೋನ್‌ ಮಾಡಿದಳು

“ಅದಾದಮೇಲೆ ಅವಳೇ ಫೋನ್‌ ನಂಬರ್‌ ತಗೊಂಡು, ಮನೆಗೆ ಫೋನ್‌ ಮಾಡಿದಳು. ಅಲ್ಲಿಂದ ನಮ್ಮಿಬ್ಬರ ಮಾತುಕತೆ ಶುರುವಾಯ್ತು. ಆಮೇಲೆ ನನ್ನ ತಂದೆ ಹುಡುಗಿ ಹುಡುಕಿದರು. ಹೀಗಾಗಿ ನಾನು ಪ್ರೀತಿಸಿದ ಹುಡುಗಿ ಬಗ್ಗೆ ಅಪ್ಪನಿಗೆ ಹೇಳಲೇ ಇಲ್ಲ. ಅಪ್ಪನ ಪ್ರೀತಿ ಮುಂದೆ ನನ್ನ ಪ್ರೀತಿ ಏನೂ ಇಲ್ಲ” ಎಂದು ವಿ ರವಿಚಂದ್ರನ್‌ ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಕೂಡ ಈ ಬಗ್ಗೆ ಅವರು ಮಾತನಾಡಿದ್ದರು.

46
ಕುಟುಂಬಕ್ಕೆ ಸಮಯ ಕೊಡಲಿಲ್ಲ

“1986ರಲ್ಲಿ ಮದುವೆಯಾದೆ. ಕರಿಯರ್‌ ಉತ್ತುಂಗದಲ್ಲಿದ್ದ ಸಮಯದಲ್ಲಿ ಮದುವೆಯಾದರು. ಕುಟುಂಬಕ್ಕೆ 10% ಕೂಡ ಟೈಮ್‌ ಕೊಡಲಿಲ್ಲ. ಮದುವೆಯಾಗಿ ಹೆಂಡ್ತಿಗೆ ಸಮಯ ಕೊಡಬೇಕು ಎಂದು ಅಂದುಕೊಳ್ಳುವ ಟೈಮ್‌ನಲ್ಲಿ, ಹೆಂಡ್ತಿಗೆ ಹೆರಿಗೆ ಆಗುವ ಸಂದರ್ಭದಲ್ಲಿ ನಾನು ಇರಲಿಲ್ಲ. ಈಗ ನಾನು ಹೆಂಡ್ತಿ, ಕುಟುಂಬಕ್ಕೆ ಸಮಯ ಕೊಡ್ತೀನಿ, ಈಗಲೂ ಅವಳಿಗೆ ಕ್ಷಮೆ ಕೇಳ್ತೀನಿ” ಎಂದು ರವಿಚಂದ್ರನ್‌ ಹೇಳಿದ್ದಾರೆ.

56
ನನ್ನ ಬಗ್ಗೆ ಏನೇ ಹೇಳಿದ್ರೂ ಹೆಂಡ್ತಿ ಯೋಚನೆ ಮಾಡಲಿಲ್ಲ

“ನಾನು ಸಿನಿಮಾ ಮಾಡ್ತೀನಿ, ನನ್ನ ಬಗ್ಗೆ ಜನರು ಏನೇನೋ ಹೇಳ್ತಾರೆ, ಸಿನಿಮಾದಲ್ಲಿ ಹೀರೋಯಿನ್‌ಗೆ ಕಿಸ್‌ ಕೊಟ್ಟಿರ್ತೀನಿ. ಆದರೆ ನನ್ನ ಹೆಂಡ್ತಿ ಮನೆಯಲ್ಲಿದ್ದುಕೊಂಡು ಪರಿಸ್ಥಿತಿ ನಿಭಾಯಿಸೋದು ಸುಲಭ ಅಲ್ಲ, ಆದರೆ ನನ್ನ ತಂದೆ ಅವಳಿಗೆ ನನ್ನ ಮಗ ಒಳ್ಳೆಯವನು, ಸಿನಿಮಾಕ್ಕೋಸ್ಕರ ಏನೇನೋ ಮಾಡ್ತಾನೆ, ಆದರೆ ನಿನಗೆ ಮೋಸ ಮಾಡೋದಿಲ್ಲ ಎಂದು ಹೇಳಿದ್ದರು. ಅವಳು ನನ್ನಂಥವನನ್ನು ನಿಭಾಯಿಸುತ್ತಾಳೆ ಅಂದ್ರೆ ಗ್ರೇಟ್”‌ ಎಂದು ವಿ ರವಿಚಂದ್ರನ್‌ ಹೇಳಿದ್ದಾರೆ.

66
ಫಸ್ಟ್‌ ಲವ್‌ ಬಗ್ಗೆ ಮಾತು

ಮದುವೆಯಾಗಿದೆ, ಮೂವರು ಮಕ್ಕಳಿವೆ. ಈಗಲೂ ರವಿಚಂದ್ರನ್‌ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಈ ಧೈರ್ಯ ರವಿಮಾಮನಿಗೆ ಮಾತ್ರ ಇದೆ ಎಂದು ಕಾಣುತ್ತದೆ.

Read more Photos on
click me!

Recommended Stories