ಒಮ್ಮೆ ಬಿಗ್ ಬಾಸ್ ತೊರೆಯುವುದಾಗಿ ಹೇಳಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದ ಕಿಚ್ಚ ಸುದೀಪ್, ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಇತ್ತೀಚೆಗೆ, ತಮಗಾದ ಅಪಘಾತದಿಂದ ತೀವ್ರ ಕಾಲುನೋವಿದ್ದರೂ, ಅದನ್ನು ಲೆಕ್ಕಿಸದೆ 'ಸೂಪರ್ ಸಂಡೆ ವಿತ್ ಕಿಚ್ಚ' ಸಂಚಿಕೆಯನ್ನು ನಿಂತುಕೊಂಡೇ ನಿರೂಪಣೆ ಮಾಡಿದೆ ಎಂದಿದ್ದಾರೆ.
ಬಿಗ್ಬಾಸ್ ಕನ್ನಡದಲ್ಲಿ ಇಷ್ಟೊಂದು ಫೇಮಸ್ ಆಗಲು ಹಲವು ಕಾರಣ ಇದ್ದರೂ ಅದರಲ್ಲಿ ಮೊದಲ ಕಾರಣ ಬರೋದು ಸುದೀಪ್ ಅವರ ನಿರೂಪಣೆಯಿಂದ. ಬಿಗ್ಬಾಸ್ 11 ಮುಕ್ತಾಯ ಆದಾಗ, 12ನೇ ಸೀಸನ್ಗಾಗಿ ಬಿಗ್ಬಾಸ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸೋ ಸಂಗತಿಯೊಂದು ಹೊರ ಬಂತು. ಅದು ರಾತ್ರೋರಾತ್ರಿ ಕಿಚ್ಚ ಸುದೀಪ್ ಮಾಡಿದ ಟ್ವೀಟ್. ತಮ್ಮದು ಇದೇ ಕೊನೆಯ ಬಿಗ್ಬಾಸ್ ನಿರೂಪಣೆ ಎಂದು ಹೇಳಿದರು. ಮುಂದಿನ ಷೋನಲ್ಲಿ ಸುದೀಪ್ ಅವರು ತಾವು ಹೋಸ್ಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
28
ಇದೇ ಕೊನೆ ಸೀಸನ್
'ಬಿಗ್ ಬಾಸ್ ಕಾರ್ಯಕ್ರಮವನ್ನು ಸುಮಾರು 11 ವರ್ಷಗಳಿಂದ ಎಂಜಾಯ್ ಮಾಡಿದ್ದೀನಿ. ನೀವು ತೋರಿಸಿರುವ ಪ್ರೀತಿಗೆ ಧನ್ಯವಾದಗಳು. ಸೀಸನ್ 11ರ ಫಿನಾಲೆ ನನ್ನ ಕೊನೆ ಹೋಸ್ಟ್ ಆಗಿರಲಿದೆ. ನಿಮ್ಮನ್ನು ಆದಷ್ಟು ಮನೋರಂಜಿಸುವ ಪ್ರಯತ್ನ ಮಾಡುತ್ತೀನಿ. ಖಂಡಿತಾ ಮರೆಯಲಾಗದ ಜರ್ನಿ ಇದು. ಅದ್ಭುತವಾಗಿ ಹ್ಯಾಂಡಲ್ ಮಾಡಿದ್ದೀನಿ. ಧನ್ಯವಾದಗಳು ಕಲರ್ಸ್ ಕನ್ನಡ ಈ ಅವಕಾಶವನ್ನು ಕೊಟ್ಟಿದ್ದಕ್ಕೆ' ಎಂದು ಸುದೀಪ್ ಬರೆದುಕೊಂಡಿದ್ದರು.
38
ಬಿಗ್ಬಾಸ್ ಬೈಕಾಟ್!
ಅದು ಯಾವ ಪರಿಯಲ್ಲಿ ಕಿಚ್ಚನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತು ಎಂದರೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಕ್ರಾಂತಿಯ ರೀತಿಯೇ ಆಗಿಹೋಯಿತು. ನಾವು ಇನ್ನುಮುಂದೆ ಬಿಗ್ಬಾಸ್ ನೋಡೋದೇ ಇಲ್ಲ ಎಂದು ಹಲವರು ಹೇಳಿದರು ಕೂಡ.
ಕೊನೆಗೆ, ಆದರೆ ಅದಾದ ಕೆಲವೇ ದಿನಗಳಲ್ಲಿ ಸುದೀಪ್ ಅವರು ನಿರೂಪಣೆಗೆ ಒಪ್ಪಿಕೊಂಡಿದ್ದಾರೆ ಎನ್ನುವ ವಿಷಯ ತಿಳಿಸಿದರು. ಅಭಿಮಾನಿಗಳು ಫುಲ್ ಖುಷ್ ಆದರು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ.
58
ಕೆಲಸದಲ್ಲಿ ಕಮಿಟ್ಮೆಂಟ್
ಅಷ್ಟಕ್ಕೂ ಸುದೀಪ್ ಅವರು ಕೆಲಸದ ವಿಷಯದಲ್ಲಿ ಎಷ್ಟು ಕಮಿಟ್ ಆಗಿದ್ದಾರೆ ಎನ್ನುವುದನ್ನು ಇದಾಗಲೇ ಅವರ ಬಳಿ ಕೆಲಸ ಮಾಡಿದ ಹಲವು ಸಹ ನಟರು, ನಿರ್ದೇಶಕರು ಹೇಳಿದ್ದಾರೆ. ಬಿಗ್ಬಾಸ್ ನಡೆಸಿಕೊಡುವುದು ಕೂಡ ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಅದರದ್ದೇ ಆದ ಕಮಿಟ್ಮೆಂಟ್ ಇರುತ್ತದೆ. ಏನೇ ಕಷ್ಟ ಬಂದರೂ ಅದನ್ನು ನಿರ್ವಹಿಸಿಕೊಂಡು ಹೋಗುವುದು ಸುದೀಪ್ ಅವರ ಸ್ಟೈಲ್.
68
ಶಾಕಿಂಗ್ ವಿಷ್ಯ
ಇದೀಗ ಅಂಥದ್ದೇ ಒಂದು ಶಾಕಿಂಗ್ ವಿಷಯವೊಂದನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ. ಅವತ್ತು ಚಿಕ್ಕ ಆ್ಯಕ್ಸಿಡೆಂಟ್ ಆಯ್ತು. ನಿಂತುಕೊಳ್ಳಲೂ ಆಗ್ತಿರಲಿಲ್ಲ. ಅವತ್ತಷ್ಟೇ ಈ ಘಟನೆ ನಡೆದಿತ್ತು. ಆದರೆ ವೀಕೆಂಡ್ ಬಿಗ್ಬಾಸ್ ನಡೆಸಿಕೊಡಲೇಬೇಕಿತ್ತು. ಸೂಪರ್ ಸಂಡೆ ವಿತ್ ಕಿಚ್ಚ ಎಪಿಸೋಡ್ ದಿನವೇ ಈ ಘಟನೆಯಾಗಿತ್ತು ಎಂದಿದ್ದಾರೆ.
78
ತುಂಬಾ ಕಾಲು ನೋವು
ಅಂದು ಎಪಿಸೋಡ್ ನಡೆಯಬೇಕಿತ್ತು. ಅಲ್ಲಿ ಎಸಿ ಜಾಸ್ತಿಯಾಗಿ ತುಂಬಾ ಕಾಲು ನೋಯ್ತಿತ್ತು. ಹಾಗೆಂದು ನಾನು ಅಂದು ಮಾಡಲು ಆಗಲ್ಲ ಎನ್ನಲಿಲ್ಲ. ಅದೇ ನೋವಿನ ನಡುವೆಯೂ ಸಂಡೆ ಎಪಿಸೋಡ್ ನಡೆಸಿಕೊಟ್ಟೆ ಎಂದಿದ್ದಾರೆ.
88
ಖುರ್ಚಿ ಹಾಕೋದು..
ಸುಮ್ಮನೇ ಖುರ್ಚಿ ಹಾಕಿ ಕುಳಿತುಕೊಂಡು ಮಾಡಿಕೊಡ್ತೇನೆ ಎಂದರೆ ಅದು ಬಿಗ್ಬಾಸ್ ಷೋ ಆಗಿರಲ್ಲ ಅಲ್ವಾ? ಬಿಗ್ಬಾಸ್ನಲ್ಲಿ ನಿಂತು ನಡೆಸಿಕೊಟ್ಟರೇನೇ ಗತ್ತು. ಸೋಫಾ ಹಾಕಿ ಮಾತನಾಡಿದರೆ ಅದು ಚೆನ್ನಾಗಿ ಇರಲ್ಲ. ಆದ್ದರಿಂದ ಒಮ್ಮೆ ಕಮಿಟ್ ಆದ್ರೆ ಏನಾದರೂ ಆ ಕೆಲಸ ಮಾಡುತ್ತೇನೆ ಎಂದಿದ್ದಾರೆ ಸುದೀಪ್