ಶೂ ಒಳಗಡೆ ಊಟ ಇಟ್ಟು ತಿಂತೀನಿ ಎನ್ನೋನಿಗೆ Bigg Boss ಸ್ಟ್ಯಾಂಡರ್ಡ್ ಗೊತ್ತಾ? ಧ್ರುವಂತ್‌ ಚಳಿ ಬಿಡಿಸಿದ ರಜತ್

Published : Dec 10, 2025, 03:07 PM IST

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈಗಾಗಲೇ ಧ್ರುವಂತ್‌ ಹಾಗೂ ರಜತ್‌ ಮಧ್ಯೆ ಸಾಕಷ್ಟು ಜಗಳ ಆಗಿದೆ. ಹೀಗಿರುವಾಗ ನಾಮಿನೇಶನ್‌ ಟಾಸ್ಕ್‌ ವೇಳೆ ಇನ್ನೊಂದಿಷ್ಟು ಜಗಳ ಆಗಿದೆ. 

PREV
15
ನಾಮಿನೇಟ್‌ ಮಾಡಿದ ಧ್ರುವಂತ್

ಮನೆಯ ಕ್ಯಾಪ್ಟನ್‌ ಆಗಿರುವ ಚೈತ್ರಾ ಕುಂದಾಪುರ ಅವರು ಧ್ರುವಂತ್‌ಗೆ ಮೂರು ಜನರನ್ನು ನಾಮಿನೇಟ್‌ ಮಾಡುವ ಅಧಿಕಾರ ಕೊಟ್ಟಿದ್ದರು. ಆ ವೇಳೆ ಧ್ರುವಂತ್‌ ಅವರು, ರಜತ್‌, ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ನಾಮಿನೇಟ್‌ ಮಾಡಿದ್ದರು.

25
ಧ್ರುವಂತ್‌ ಹೇಳಿದ್ದೇನು?

ಧ್ರುವಂತ್ ಅವರು “ರಜತ್‌ ಅವರು ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟು, ಇಡೀ ಸೀಸನ್‌ ಹಾಳು ಮಾಡುತ್ತಿದ್ದಾರೆ. ಇಡೀ ಶೋನ ಸ್ಟ್ಯಾಂಡರ್ಸ್‌ ಹಾಳು ಮಾಡುತ್ತಿದ್ದಾರೆ, ರೌಡಿ ಥರ ಬಿಹೇವ್‌ ಮಾಡುತ್ತಿದ್ದಾರೆ. ಮನೆಯ ಊಟದ ಬಗ್ಗೆ ವಿಚಾರ ಬಂದಾಗ, ಮನೆಗೆ ದಿನಸಿ ಸಿಗೋ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ನಿಮಗೆ ಬೇಕಾದಾಗ ತಿನ್ನಿ, ಆಗಲ್ಲ ಅಂದರೆ ಮನೆಗೆ ಹೋಗಿ ಎಂದು ಹೇಳಿದರು” ಎಂದಿದ್ದಾರೆ.

35
ಕಿವಿ ಮುಚ್ಚಿಕೊಳ್ಳಿ ಎಂದ್ರು

“ನಮ್ನನ್ನು ಟಾರ್ಗೆಟ್‌ ಮಾಡಿ ಮಾತನಾಡುತ್ತಾರೆ. ನಾವು ನಿದ್ದೆ ಮಾಡುವಾಗ ಕಿಚನ್‌ನಲ್ಲಿ ಸೌಂಡ್‌ ಬಂದರೆ, ಅದನ್ನು ಪ್ರಶ್ನೆ ಮಾಡ್ತೀವಿ. ನಮಗೆ ಇಷ್ಟ ಬಂದಾಗ ಮಾತಾಡ್ತೀವಿ, ಕಿವಿ ಮುಚ್ಚಿಕೊಳ್ಳಿ ಎಂದು ಹೇಳುತ್ತಾರೆ. ಹೀಗಾಗಿ ನಾನು ನಾಮಿನೇಟ್‌ ಮಾಡ್ತೀನಿ” ಎಂದು ಧ್ರುವಂತ್ ಹೇಳಿದ್ದಾರೆ.

45
ಬಾತ್‌ರೂಮ್‌ನಲ್ಲಿ ಇಟ್ಟು ತಿಂತೀನಿ

ಇದಕ್ಕೆ ರಜತ್‌ ಉತ್ತರ ಕೊಟ್ಟಿದ್ದಾರೆ. “ನಾನು ಗಾಂಚಾಲಿ ಇನ್ನೆಂದೆನೋ ಮಾತಾಡಿಲ್ಲ. ನಾನು ಊಟವನ್ನು ಬೆಡ್‌ ಕೆಳಗಡೆ ಇಟ್ಟು ತಿಂತೀನಿ, ಬಾತ್‌ರೂಮ್‌ನಲ್ಲಿ ಇಟ್ಟು ತಿಂತೀನಿ, ಶೂವೊಳಗಡೆ ಇಟ್ಟು ತಿಂತೀನಿ ಅಂತ ಹೇಳಿದವನು ಇವನು, ಆದರೆ ನನಗೆ ಶೋ ಸ್ಟ್ಯಾಂಡರ್ಡ್‌ ಬಗ್ಗೆ ಮಾತಾಡ್ತಾನೆ. ನಾನು ಗಂಡಸಾಗಿಯೇ ಬದುಕ್ತೀನಿ ಎಂದು ರಜತ್‌ ಅವರು ಹೇಳಿದ್ದಾರೆ.

55
ಊಟದ ಬಗ್ಗೆ ಅಷ್ಟು ಕೇವಲವಾಗಿ ಮಾತು

“ಊಟದ ಬಗ್ಗೆ ಅಷ್ಟು ಕೇವಲವಾಗಿ ಮಾತನಾಡಿದ್ದು ನನಗೆ ಸರಿ ಇಲ್ಲ. ಧ್ರುವಂತ್‌ ಜೊತೆ ಮಾತನಾಡಿದರೆ ಫುಟೇಜ್‌ ಸಿಗುತ್ತದೆ ಎಂದು ಅವರು ಅಂದುಕೊಂಡಿದ್ದಾರೆ. ಇದರಿಂದ ಯಾವುದೇ ಪುಟಗೋಸಿ ಕೂಡ ಸಿಗೋದಿಲ್ಲ. ನನಗೆ ಇವರು ಪ್ರತಿಸ್ಪರ್ಧಿ ಎಂದು ಅನಿಸಲೇ ಇಲ್ಲ. ಹೀಗಾಗಿ ಇವರು ಮನೆಗೆ ಹೋಗೋದು ಒಳ್ಳೆಯದು” ಎಂದು ರಜತ್‌ ಹೇಳಿದ್ದಾರೆ.

Read more Photos on
click me!

Recommended Stories