Amruthadhaare Serial Actor Rajesh Nataranga ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯಲ್ಲಿ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿರುವ ನಟ ರಾಜೇಶ್ ನಟರಂಗ ಅವರು ಇತ್ತೀಚೆಗೆ ತಮ್ಮ ಕನಸಿನ ಹೊಸ ಕಾರನ್ನು ಖರೀದಿಸಿದ್ದಾರೆ. ಕಾರ್ ಶೋರೂಮ್ ಈ ವಿಡಿಯೋವನ್ನು ಹಂಚಿಕೊಂಡಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ಅಮೃತಧಾರೆ ಧಾರಾವಾಹಿಯಲ್ಲಿ ನಾಯಕ ಗೌತಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಒಡೆಯ ಗೌತಮ್ ದಿವಾನ್ ಈಗ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಪಾತ್ರವನ್ನು ರಾಜೇಶ್ ನಟರಂಗ ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ.
25
ಮಾರುತಿ ಸುಜುಕಿ ಅವರ ಕಾರ್ ಖರೀದಿ
ಅಂದಹಾಗೆ ರಾಜೇಶ್ ನಟರಂಗ ಅವರು ಮಾರುತಿ ಸುಜುಕಿ ಅವರ ಕಾರ್ ಖರೀದಿ ಮಾಡಿದ್ದಾರೆ. ಇದರ ಬೆಲೆ 13-14 ಲಕ್ಷ ರೂಪಾಯಿ ಎನ್ನಲಾಗಿದೆ. ಮಗಳು ಹಾಗೂ ಪತ್ನಿ ಜೊತೆ ಬಂದು ಅವರು ಕಾರ್ ಖರೀದಿ ಮಾಡಿದ್ದಾರೆ. ಹೊಸ ಕಾರ್ ಬಂದಿರೋದಿಕ್ಕೆ ಇಡೀ ಕುಟುಂಬ ಖುಷಿಯಾಗಿದೆ. ಅನೇಕರು ಇವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
35
ಮೊಗ್ಗಿನ ಮೊನಸು ಸಿನಿಮಾದ ಪ್ರೊಫೆಸರ್
ಮೊಗ್ಗಿನ ಮೊನಸು ಸಿನಿಮಾದಲ್ಲಿ ಪ್ರೊಫೆಸರ್ ಆಗಿ ಗಮನ ಸೆಳೆದಿದ್ದ ರಾಜೇಶ್ ನಟರಂಗ ಅವರು ಕನ್ನಡ ಚಿತ್ರರಂಗದ ಸ್ಪುರದ್ರೂಪಿ ನಟ ಎನ್ನೋದರಲ್ಲಿ ಎರಡು ಮಾತಿಲ್ಲ. ಇವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಅಂದಹಾಗೆ ಕನ್ನಡ ಸಿನಿಮಾ, ಕಿರುತೆರೆ ಎರಡರಲ್ಲೂ ಇವರು ಹೆಸರು ಮಾಡಿದ್ದಾರೆ.
ಈ ಹಿಂದೆ ಗುಪ್ತಗಾಮಿನಿ ಧಾರಾವಾಹಿ, ತ್ರಿವೇಣಿ ಸಂಗಮ ಧಾರಾವಾಹಿಗಳಲ್ಲಿ ನಟಿಸಿದ್ದ ರಾಜೇಶ್ ನಟರಂಗ ಅವರು ಈಗ ಅಮೃತಧಾರೆ ಧಾರಾವಾಹಿಯಲ್ಲಿ ಅದ್ಭುತವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅತಿ ಶ್ರೀಮಂತನಿಗೆ ವಯಸ್ಸು 45 ಆದರೂ ಮದುವೆ ಆಗೋದಿಲ್ಲ, ಆಮೇಲೆ 35 ವರ್ಷದ ಭೂಮಿಕಾ ಜೊತೆ ಮದುವೆ ಆಗುವುದು. ಮನೆಯವರ ಖುಷಿಗೋಸ್ಕರ ಮದುವೆಯಾದ ಈ ಜೋಡಿ ಆಮೇಲೆ ಅನ್ಯೋನ್ಯ ದಂಪತಿಗಳಾಗಿ ಬದುಕುತ್ತಾರೆ.
55
ಸಿನಿಮಾದಲ್ಲಿ ಹೆಸರು ಮಾಡುತ್ತಿದ್ದರು
ರಾಜೇಶ್ ನಟರಂಗ ಅವರು ಕಿರುತೆರೆ ಒಂದೇ ಅಲ್ಲದೆ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಅದ್ಯ ಅವರು ಹೀರೋ ತಂದೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಹೆಚ್ಚು. ಇವರ ‘ಒಂದು ಸರಳ ಪ್ರೇಮಕಥೆʼ ಸಿನಿಮಾದಲ್ಲಿನ ತಂದೆ ಪಾತ್ರ ಸಾಕಷ್ಟು ಜನರ ಮನಸ್ಸು ಕದ್ದಿತ್ತು.