ಬಿಗ್‌ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆ ಟಿಕೆಟ್‌ಗಾಗಿ ಹೊಸ ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳು ಜೋಡಿಯಾಗಿ ಆಡಿದ್ದಾರೆ. ಸುರಂಗ ಮಾರ್ಗದ ಈ ಆಟದ ವೇಳೆ, ಉಸ್ತುವಾರಿ ವಹಿಸಿದ್ದ ಕಾವ್ಯಾ ಮತ್ತು ಆಟಗಾರ ಧ್ರುವಂತ್ ನಡುವೆ ಮಾತಿನ ಚಕಮಕಿ ನಡೆದಿದೆ.
ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗುವ ಸ್ಪರ್ಧಿ ನೇರವಾಗಿ ಗ್ರ್ಯಾಂಡ್ ಫಿನಾಲೆಯ ಟಿಕೆಟ್ ಪಡೆದುಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಗಿಲ್ಲಿ ನಟ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಮತ್ತು ಧನುಷ್ ಆಯ್ಕೆಯಾಗಿದ್ದಾರೆ. ಇದೀಗ ಇನ್ನುಳಿದ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮತ್ತೊಂದು ಅವಕಾಶ ನೀಡಿದ್ದಾರೆ. ಅದು ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ತೋರಿಸಲಾಗಿದೆ.
25
ಕಾವ್ಯಾ ಉಸ್ತುವಾರಿ
ಈ ಆಟವನ್ನು ಸ್ಪರ್ಧಿಗಳು ಜೋಡಿಯಾಗಿ ಆಡಿದ್ದಾರೆ. ಆದರೆ ಯಾರು ಯಾರ ಜೊತೆ ಆಟವಾಡಿದ್ದಾರೆ ಎಂಬುವುದು ಪ್ರೋಮೋದಲ್ಲಿ ಸ್ಪಷ್ಟವಾಗಿಲ್ಲ. ಗಿಲ್ಲಿ ನಟ ಆಟದ ಭಾಗವಾಗಿರುವ ಕಾರಣ ಕಾವ್ಯಾ ಉಸ್ತುವಾರಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಆಟಗಾರ ಧ್ರುವಂತ್ ಮತ್ತು ಕಾವ್ಯಾ ನಡುವೆ ಸಣ್ಣದಾದ ಮಾತಿನ ಚಕಮಕಿ ಉಂಟಾಗಿದೆ.
35
ಏನು ಟಾಸ್ಕ್?
ನೀಡಲಾಗಿರುವ ಕಂಬಿಗಳ ಸುರಂಗ ಮಾರ್ಗವನ್ನು ಸರಿಪಡಿಸಿಕೊಂಡು ಸ್ಪರ್ಧಿಗಳು ಹೊರಗೆ ಬರಬೇಕು ಮತ್ತು ನೀಡಲಾಗಿರುವ ಗಂಟೆಯನ್ನು ಬಾರಿಸಬೇಕು. ಈ ಆಟವನ್ನು ರಾಶಿಕಾ, ಗಿಲ್ಲಿ ನಟ, ಧ್ರುವಂತ್ ಮತ್ತು ಅಶ್ವಿನಿ ಗೌಡ ಆಡಿದ್ದಾರೆ. ಕಾವ್ಯಾ ಉಸ್ತುವಾರಿ ಮಾಡಿದ್ದಾರೆ. ಆಟದ ಮಧ್ಯೆ ಉಸ್ತುವಾರಿಯದ್ದು ತಪ್ಪು ಎಂದು ರಕ್ಷಿತಾ ಹೇಳುತ್ತಾರೆ. ಇತ್ತ ಬಾಯಿ ಮುಚ್ಕೊಂಡು ಕುಳಿತುಕೊ ನಾನು ಆಡುತ್ತೇನೆ ಎಂದು ಧ್ರುವಂತ್ ಹೇಳುತ್ತಾರೆ.
ಈ ವಾರ ಯಾವುದೇ ಮಿಡ್‌ವೀಕ್ ಎಲಿಮಿನೇಷನ್ ಇಲ್ಲ ಎಂದು ಹೇಳಲಾಗುತ್ತಿದೆ. 13ನೇ ವಾರದ ಅಂತ್ಯಕ್ಕೆ ಸೂರಜ್ ಸಿಂಗ್ ಮತ್ತು ಮಾಳು ನಿಪನಾಳ ಮನೆಯಿಂದ ಹೊರ ಬಂದಿದ್ದರು. ಇದೀಗ 14ನೇ ವಾರದ ಅಂತ್ಯದಲ್ಲಿಯೂ ಇಬ್ಬರು ಸದಸ್ಯರು ಮನೆಯಿಂದ ಹೊರಗೆ ಬರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗಿಲ್ಲಿ ನಟ, ರಘು, ರಕ್ಷಿತಾ ಶೆಟ್ಟಿ ಮತ್ತು ಕಾವ್ಯಾ ಈ ವಾರ ಸೇಫ್ ಆಗಿದ್ದಾರೆ. ಇನ್ನುಳಿದ ಸ್ಪರ್ಧಿಗಳಾದ ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್, ಸ್ಪಂದನಾ ಸೋಮಣ್ಣ ಮತ್ತು ಧನುಷ್ ಮನೆಯಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಯಾರು ಹೊರಗೆ ಹೋಗ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.