BBK 12: ರಾ.. ರಾ.. ಹಾಡಿಗೆ ಡಾನ್ಸ್​ ಮಾಡುತ್ತಾ ನಾಗವಲ್ಲಿಯಾದ Rakshita Shetty: ಬೆಚ್ಚಿಬಿದ್ದ Ashwini Gowda

Published : Dec 31, 2025, 02:57 PM IST

ಬಿಗ್​ಬಾಸ್​ 12ರ ಫೈನಲಿಸ್ಟ್‌ಗಳೆಂದು ಬಿಂಬಿತರಾಗಿರುವ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ತಮ್ಮ ಜಗಳಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಆದರೆ, ಇದೀಗ ಇಬ್ಬರೂ 'ರಾ...ರಾ...' ಹಾಡಿಗೆ ಒಟ್ಟಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ರಕ್ಷಿತಾ ಡಾನ್ಸ್ ನೋಡಿ ಅಶ್ವಿನಿ ಸುಸ್ತಾಗಿ ಕುಳಿತಿದ್ದಾರೆ.

PREV
15
ಜಗಳ, ಪ್ರೀತಿ

ಬಿಗ್​ಬಾಸ್​ 12 (Bigg Boss 12) ಫೈನಲಿಸ್ಟ್​ ಎಂದೇ ಬಿಂಬಿತರಾಗಿರುವ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಆಗಾಗ್ಗೆ ಜಗಳ ಮಾಡುತ್ತಲೇ ಇರುತ್ತಾರೆ. ಬಿಗ್​ಬಾಸ್​ ವಿನ್​ ಆಗಬೇಕು ಎಂದರೆ ಕೆಲವೊಮ್ಮೆ ಇದು ಅನಿವಾರ್ಯವೂ ಆಗುತ್ತದೆ.

25
ರಾ...ರಾ... ಡಾನ್ಸ್​

ಜಗಳದ ಜೊತೆಜೊತೆಗೆನೇ ಬಿಗ್​ಬಾಸ್​​ನಲ್ಲಿ ಎಲ್ಲ ಸ್ಪರ್ಧಿಗಳು ಆಗಾಗ್ಗೆ ಕಾಮಿಡಿ, ಡಾನ್ಸ್​ ಮಾಡುತ್ತಾ ಇರುವುದು ಉಂಟು. ಅದೇ ರೀತಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ (Bigg Boss Ashwini Gowda and Rakshita Shetty) ಇದೀಗ ರಾ...ರಾ... ಹಾಡಿಗೆ ಡಾನ್ಸ್​ ಮಾಡಿದ್ದಾರೆ.

35
ಭರ್ಜರಿ ಸ್ಟೆಪ್​

ಇಬ್ಬರೂ ಭರ್ಜರಿ ಸ್ಟೆಪ್​ ಹಾಕುತ್ತಲೇ ಮುಂದುವರೆದಿದ್ದಾರೆ. ಒಂದು ಹಂತದಲ್ಲಿ ಅಶ್ವಿನಿ ಗೌಡ ಸಾಕು ಎಂದರೂ, ರಕ್ಷಿತಾ ಶೆಟ್ಟಿ ಅದನ್ನು ಮುಂದುವರೆಸಿದರು. ಆಕೆಯ ಡಾನ್ಸ್​ ನೋಡಿ ಅಶ್ವಿನಿ ಅಬ್ಬಬ್ಬಾ ಎಂದು ಕುಳಿತು ಬಿಟ್ಟರು.

45
ಅಶ್ವಿನಿ ಗೌಡ ಸುಸ್ತು

ರಕ್ಷಿತಾ ಬನ್ನಿ ಬನ್ನಿ ಎಂದರೂ ಅಶ್ವಿನಿ ಸುಸ್ತಾಗಿ ಕುಳಿತರು. ಕೊನೆಗೆ ರಕ್ಷಿತಾ ಡಾನ್ಸ್​ ಮುಂದುವರೆಸಿದರು. ಇದನ್ನು ನೋಡಿ ಅಶ್ವಿನಿ ಅಬ್ಬಬ್ಬಾ ಎಂದರು.

55
ಕೆಲವೇ ದಿನ ಬಾಕಿ

ಒಟ್ಟಿನಲ್ಲಿ ಬಿಗ್​ಬಾಸ್​ ಮನೆಯಲ್ಲಿ ಆಗಾಗ್ಗೆ ಇಂಥ ದೃಶ್ಯಗಳು ಕಾಣಿಸುತ್ತಲೇ ಇರುತ್ತವೆ. ಒಮ್ಮೊಮ್ಮೆ ಜಗಳ, ಮುನಿಸು, ಮತ್ತೆ ಕೆಲವೊಮ್ಮೆ ಪ್ರೀತಿ, ಡಾನ್ಸ್​ ಹೀಗೆ ಇನ್ನೊಂದು ತಿಂಗಳಾಗುವಷ್ಟರಲ್ಲಿಯೇ ಎಲ್ಲದಕ್ಕೂ ತೆರೆ ಬೀಳಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories