BBK 12: ಈ ವಾರ ಮಾತ್ರ ಕಿಚ್ಚ ಸುದೀಪ್‌ ಈ ವಿಷ್ಯ ಮಾತಾಡ್ಬೇಕು; ಇಲ್ಲ ಅಂದ್ರೆ ಸಮಸ್ಯೆ ತಪ್ಪಿದ್ದಲ್ಲ!

Published : Dec 20, 2025, 08:31 AM IST

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಯಾವ ವಿಷಯವನ್ನು ಚರ್ಚೆ ಮಾಡುತ್ತಾರೆ? ಕಿಚ್ಚ ಸುದೀಪ್‌ ಅವರು ಯಾರಿಗೆ ಕ್ಲಾಸ್‌ ತಗೊಳ್ತಾರೆ ಎಂಬ ಪ್ರಶ್ನೆ ಇರುತ್ತದೆ. ಹಾಗಾದರೆ ಯಾವ ವಿಷಯದ ಬಗ್ಗೆ ಮಾತನಾಡಬೇಕು?

PREV
16
ರಾಶಿಕಾ ಶೆಟ್ಟಿ ಸೋತರು
  • ಅಶ್ವಿನಿ ಗೌಡ ಅವರಿಗೆ ಏಕವಚನ, ಆವಮ್ಮ, ಈವಮ್ಮ ಅಂದ್ರೆ ಆಗೋದಿಲ್ಲ
  • ರಾಶಿಕಾ ಶೆಟ್ಟಿ ಕ್ಯಾಪ್ಟನ್ಸಿ ಟಾಸ್ಕ್‌ ಆಡೋಕೆ ಸಿಕ್ಕಿಲ್ಲ ಅಂದಾಗ ಅತ್ತರು, ಕ್ಯಾಪ್ಟನ್‌ ಆದ್ಮೇಲೆ ಸೋತರು
  • ರಾಶಿಕಾ ಶೆಟ್ಟಿಗೆ ಸೂರಜ್‌ ಮಾತ್ರ ಗೆಲ್ಲಬೇಕು, ಉಳಿದವರು ಲೆಕ್ಕಕ್ಕಿಲ್ಲ
26
ಟಾಸ್ಕ್‌ ಬುಕ್‌ ಓದಿ ಇಲ್ಲಿಗೆ ಬಂದ್ರು?
  • ಎಲ್ಲರೂ ಟಾಸ್ಕ್‌ ಆಡಿ ಇಲ್ಲಿಗೆ ಬಂದರೆ, ಟಾಸ್ಕ್‌ ಬುಕ್‌ ಓದಿಕೊಂಡು ಸ್ಪಂದನಾ ಸೋಮಣ್ಣ ಇಲ್ಲಿಯವರೆಗೆ ಬಂದರು?
  • ಗಿಲ್ಲಿ ನಟನ ಟಾಸ್ಕ್‌ ಬಗ್ಗೆ ಸ್ಪಂದನಾ ಸೋಮಣ್ಣ ಪ್ರಶ್ನೆ ಮಾಡ್ತಾರೆ. ಆದರೆ ಸ್ಪಂದನಾ ಎಷ್ಟು ಟಾಸ್ಕ್‌ ಗೆದ್ದಿದ್ದಾರೆ?
  • ಸ್ಪಂದನಾ ಸೋಮಣ್ಣ ನಿಜಕ್ಕೂ ಲಕ್‌ನಿಂದಲೇ ಇಲ್ಲಿ ಇರೋದು?
36
ಕಾವ್ಯ ಶೈವಗೆ ಬೇಸರ ಆಗಲಿಲ್ಲ?
  • ಕಾವ್ಯ ಶೈವ ಎಷ್ಟೇ ಬೇಸರ ಮಾಡಿದ್ರೂ, ಗಿಲ್ಲಿ ನಟ ಮಾತ್ರ ಅವರನ್ನು ಯಾಕೆ ಬಿಟ್ಟು ಕೊಡೋದಿಲ್ಲ?
  • ಗಿಲ್ಲಿ ನಟನ ಜೊತೆ ಬಿಟ್ಟು ಕಾವ್ಯ ಶೈವ ಎಲ್ಲಿ ಕಾಣಿಸುತ್ತಿದ್ದಾರೆ?
  • ಆಟಕ್ಕೋಸ್ಕರ, ಗೆಲ್ಲೋದಿಕ್ಕೋಸ್ಕರ ಗಿಲ್ಲಿ ನಟನನ್ನು ಕಾವ್ಯ ಸೈಡ್‌ಲೈನ್‌ ಮಾಡುತ್ತಾರಾ?
  • ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆದಾಗ ಕಾವ್ಯ ಶೈವಗೆ ಬೇಸರ ಆಗಲಿಲ್ಲ, ಅಳು ಬರಲಿಲ್ಲ
46
ಕಾಮಿಡಿ ಮಾಡಲು ಯಾರಾದರೂ ಬೇಕು
  • ಗಿಲ್ಲಿ ನಟ ಅವರೇ ಹೇಳಿಕೊಂಡಂತೆ ಒಬ್ಬರಲ್ಲ ಒಬ್ಬರು ಅವರಿಗೆ ಕೆಣಕೋದಿಕ್ಕೆ ಬೇಕೆ ಬೇಕು
  • ಗಿಲ್ಲಿ ನಟ ಅವರಿಗೆ ಕಂಟೆಂಟ್‌ಗೋಸ್ಕರ ರಿಷಾ ಗೌಡ ಹೋದ್ಮೇಲೆ, ಚೈತ್ರಾ ಕುಂದಾಪುರ ಸಿಕ್ಕಿದ್ದಾರೆ.
  • ಬೇರೆಯವರಿಗೆ ನೋವಾಗತ್ತೆ ಎಂದು ಗೊತ್ತಿದ್ದರೂ ಕೂಡ ಗಿಲ್ಲಿ ನಟ ಯಾಕೆ ಬೇರೆಯವರ ಬಗ್ಗೆ ಕಾಮಿಡಿ ಮಾಡ್ತಾರೆ?
56
ರಜತ್‌ ಮಾತು ಮರೆತರಾ?

ಗಿಲ್ಲಿ ನಟನನ್ನು ಮನೆಗೆ ಕಳಿಸಿ ಹೊರಗಡೆ ಹೋಗೋದು ಎಂದಿದ್ದ ರಜತ್‌, ಈಗ ಗಿಲ್ಲಿ ಜೊತೆ ಇರೋದು ಯಾಕೆ?

ರಜತ್‌ಗೆ ಚೈತ್ರಾ ಕುಂದಾಪುರ ಜೊತೆ ಏನು ಸಮಸ್ಯೆ ಆಗ್ತಿದೆ?

66
ಚೈತ್ರಾ ಕುಂದಾಪುರ
  • ಆಟದ ವಿಚಾರದಲ್ಲಿ ಮಾತನಾಡಿ, ಜಗಳ ಆಡಿ ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಹೋಗೋದು ಯಾಕೆ?
  • ಮದುವೆಯಲ್ಲಿ ರಜತ್‌ ಆಶೀರ್ವಾದ ತಗೊಂಡಿದ್ದ ಚೈತ್ರಾ ಕುಂದಾಪುರ, ಆಮೇಲೆ ಅವರ ಫ್ಯಾಮಿಲಿ ಸರ್‌ನೇಮ್‌ ಬಗ್ಗೆ ಮಾತನಾಡಿದ್ದು ಸರಿಯೇ?
  • ಚೈತ್ರಾ ಕುಂದಾಪುರ ಅವ್ರನ್ನು ಉಳಿದವರು ಯಾಕೆ ಅಷ್ಟು ಇಷ್ಟಪಡ್ತಿಲ್ಲ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories