Dance Karnataka Dance Show: ‘ಚಲಿಸುವ ಮೋಡಗಳು’ ಸಿನಿಮಾದ ‘ಚಂದಿರ ತಂದ ಹುಣ್ಣಿಮೆ ರಾತ್ರಿ’ ಹಾಡು ಇಂದಿಗೂ ಕೂಡ ಪ್ರಸ್ತುತವಾಗಿದೆ. ಎಲ್ಲರೂ ಈ ಹಾಡಿಗೆ ಡ್ಯಾನ್ಸ್ ಮಾಡೋದುಂಟು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ರಚಿತಾ ರಾಮ್, ಶಿವರಾಜ್‌ಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
‘ಚಲಿಸುವ ಮೋಡಗಳು’ ಸಿನಿಮಾದ ‘ಚಂದಿರ ತಂದ ಹುಣ್ಣಿಮೆ ರಾತ್ರಿ’ ಹಾಡು ಇಂದಿಗೂ ಕೂಡ ಪ್ರಸ್ತುತವಾಗಿದೆ. ಎಲ್ಲರೂ ಈ ಹಾಡಿಗೆ ಡ್ಯಾನ್ಸ್ ಮಾಡೋದುಂಟು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ರಚಿತಾ ರಾಮ್, ಶಿವರಾಜ್‌ಕುಮಾರ್ ಮತ್ತೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
25
ದೊಡ್ಡ ಮಟ್ಟದಲ್ಲಿ ಮೆಚ್ಚುಗೆ
ಹೌದು, ‘ಚಂದಿರ ತಂದ ಹುಣ್ಣಿಮೆ ರಾತ್ರಿ’ ಹಾಡಿಗೆ ಶಿವರಾಜ್‌ಕುಮಾರ್, ರಚಿತಾ ರಾಮ್ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಜೀ ಕನ್ನಡ ವಾಹಿನಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
35
ದೊಡ್ಡ ಹಿಟ್ ಆದ ಸಿನಿಮಾ
ಚಲಿಸುವ ಮೋಡಗಳು ಸಿನಿಮಾವನ್ನು ಸಿಂಗಿತಂ ಶ್ರೀನಿವಾಸ್ ರಾವ್ ಅವರು ನಿರ್ದೇಶನ ಮಾಡಿದ್ದರು. ರಾಜ್‌ಕುಮಾರ್, ಸರಿತಾ, ಅಂಬಿಕಾ, ಕೆ ಎಸ್ ಅಶ್ವತ್ಥ್, ಪುನೀತ್ ರಾಜ್‌ಕುಮಾರ್ ಕೂಡ ನಟಿಸಿದ್ದರು. ರಾಜನ್ ನಾಗೇಂದ್ರ ಅವರು ಸಂಗೀತ ಸಂಯೋಜನೆ ನೀಡಿದ್ದರು. 1982ರಲ್ಲಿ ರಿಲೀಸ್ ಆದ ಸಿನಿಮಾವು, ದೊಡ್ಡ ಹಿಟ್ ಆಯ್ತು. ಆ ಬಳಿಕ ಈ ಸಿನಿಮಾವನ್ನು 1983ರಲ್ಲಿ ತೆಲುಗಿನಲ್ಲಿ ರಿಮೇಕ್ ಆಯ್ತು.
ಚಂದಿರ ತಂದೆ ಹುಣ್ಣಿಮೆ ರಾತ್ರಿ ಹಾಡನ್ನು ಡಾ ರಾಜ್‌ಕುಮಾರ್, ಎಸ್ ಜಾನಕಿ ಅವರು ಹಾಡು ಹಾಡಿದ್ದರು.
ರಾಜ್ ಕುಮಾರ್ ಸರಿತಾ ಜೋಡಿ ಮರೆಯೋಕೆ ಸಾಧ್ಯವೇ? ಎಷ್ಟು ಬಾರಿ ನೋಡಿದರು ಖುಷಿಯೇ?
ಅಣ್ಣಾವ್ರ ಚಿತ್ರ ಯಾವುದಾದರೂ ಒಂದು ರಿಮೆಕ್ ಮಾಡಿ
ಶಿವಣ್ಣ, ರಚಿತಾ ರಾಮ್ ನೃತ್ಯ ನೋಡಿ ಒಂದು ಕ್ಷಣ ಚಲಿಸುವ ಮೋಡಗಳು ಕೂಡ ಮೌನವಾದವು
55
ಹೋಲಿಕೆ ಮಾಡೋಕಾಗಲ್ಲ
ಎನರ್ಜಿ ಕಿಂಗ್ ಕರುನಾಡ ಕುವರ ಡಾ. ಶಿವಣ್ಣ ಎವರ್ ಗ್ರೀನ್ ಸೂಪರ್
ಏನೇ ಆದ್ರೂ ರಾಜ್‌ಕುಮಾರ್ ಅವರನ್ನು ಯಾರು ಹೋಲಿಕೆ ಮಾಡಲು ಸಾಧ್ಯವಿಲ್ಲ, ಮಗನಾದರು ಸರಿ
ಜಡ್ಜಸ್ ಆಗಿ ಬಂದು ಜಡ್ಜ್ ಮಾಡೋದಲ್ಲದೆ ಸ್ಟೇಜ್ ಮೇಲೆ ಬಂದು ಕುಣಿದು ಕರ್ನಾಟಕ ಜನತೆಯನ್ನು ಹುರಿದುಂಬಿಸುವುದು ನೋಡಿದರೆ ತುಂಬಾ ಖುಷಿಯಾಗ್ತಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.