Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ ಅವರ ಬಗ್ಗೆ ವಾರ ಪೂರ್ತಿ ಒಂದಲ್ಲ ಒಂದು ಆರೋಪ ಇರುತ್ತದೆ. ಈ ಬಾರಿ ಬಹುಮುಖ್ಯವಾದ ವಿಚಾರವನ್ನು ಕಿಚ್ಚ ಸುದೀಪ್ ಅವರು ಮಾತನಾಡಿಲ್ಲ, ಅದಕ್ಕೂ ಕಾರಣ ಇದೆ.
ಕಳೆದ ವಾರ ಮಸಿ ಬಳಿಯೋ ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಕ್ಯಾರೆಕ್ಟರ್ ಬಗ್ಗೆ ಅಶ್ವಿನಿ ಗೌಡ ಮಾತನಾಡಿದ್ದರು. ಇದರ ಬಗ್ಗೆ ಹೊರಗಡೆ ಕೂಡ ಮಾತು ಕೇಳಿ ಬಂದಿತ್ತು. ದೊಡ್ಮನೆಯಲ್ಲಿ ಈ ವಿಚಾರ ಚರ್ಚೆಯಾಗಲಿಲ್ಲ, ಕಿಚ್ಚ ಸುದೀಪ್ ಕೂಡ ಮಾತನಾಡಲಿಲ್ಲ.
26
ಅಶ್ವಿನಿ ಗೌಡ ಹೇಳಿದ್ದ ಆರೋಪ ಏನು?
ಅಶ್ವಿನಿ ಗೌಡ ಅವರು ರಕ್ಷಿತಾ ಶೆಟ್ಟಿಗೆ, “ನೀನು ಮುಗ್ಧೆ ಅಲ್ಲ, ಬೇರೆಯವರಿಗೆ ಡ್ರಾಮಾ ಹೇಳುವ ರಕ್ಷಿತಾ ಶೆಟ್ಟಿ, ಡ್ರಾಮಾ ಕಂಪೆನಿಗೆ ಮುತ್ತಾತ. ಬೇರೆಯವರ ಕೈ ಹಿಡಿದುಕೊಂಡು, ಅಂಟಿಕೊಳ್ಳೋದು, ಕೂತ್ಕೊಳ್ತಾರೆ. 25ನೇ ವಯಸ್ಸಿನಲ್ಲಿ ನಾವಂತೂ ಈ ರೀತಿ ಮಾಡಲಿಲ್ಲ. ನಿನ್ನ ವಯಸ್ಸಿನ ಮಕ್ಕಳು ಕೂಡ ಈ ಶೋವನ್ನು ನೋಡ್ತಾರೆ. ನಾನು 100 ಸಿನಿಮಾ ಮಾಡಿ, ಇಲ್ಲಿಗೆ ಬಂದಿದ್ದೀನಿ, ಆದರೆ ನೀನು ಒಂದೇ ಒಂದು ಯುಟ್ಯೂಬ್ ಚಾನೆಲ್ ಮಾಡಿ, ಇಲ್ಲಿಗೆ ಬಂದಿದ್ದೇವೆ” ಎಂದು ಹೇಳಿದ್ದರು.
36
100 ಸಿನಿಮಾ ಮಾಡು
“ಮೂರನೇ ವಾರದಲ್ಲಿ ನಿನ್ನ ಕಾರ್ಡ್ ವರ್ಕ್ ಆಯ್ತು. ಆದರೆ ನಮ್ಮ ವ್ಯಕ್ತಿತ್ವವನ್ನು ಡಸ್ಟ್‌ಬಿನ್ಗೆ ಹಾಕೋ ಯೋಗ್ಯತೆ ನಿನಗಿಲ್ಲ. ನೀನು ಆಟ ಆಡುವಾಗ ಏನೇನೋ ಮಾತಾಡಿದ್ದೀಯಾ. ನೀವು ಧಾರಾವಾಹಿಯವರು, ನಾಟಕ ಮಾಡ್ತೀರಾ ಅಂತ ಹೇಳಿದೆ. ನಾನು ನಿನ್ನಂಥ 100 ಯುಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡ್ತೀನಿ, ಆದರೆ ನನ್ನ ವಯಸ್ಸಿಗೆ 40 ನೇ ವರ್ಷದಲ್ಲಿ 100 ಸಿನಿಮಾ ಮಾಡು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಅಶ್ವಿನಿ ಗೌಡ ಅವರು “ರೂಮ್‌ವೊಳಗಡೆ ಹೋಗಿ ಕೈ ಹಿಡಿದುಕೊಂಡು ನಾನು, ಬಕೆಟ್ ಹಿಡಿಯೋ ಕೆಲಸವನ್ನು ಮಾಡಿಲ್ಲ. ನಾನು ಬೇಕಿದ್ದರೆ ನಾಟಕ ಮಾಡಿ ಎಲ್ಲರ ಮನಸ್ಸನ್ನು ಗೆಲ್ಲಬಹುದಿತ್ತು” ಎಂದು ಹೇಳಿದ್ದಾರೆ.
56
ರಕ್ಷಿತಾ ಶೆಟ್ಟಿ ರಿಯಾಕ್ಟ್ ಮಾಡಲೇ ಇಲ್ಲ.
ಅಶ್ವಿನಿ ಗೌಡ ಅವರು ತನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾರೆ ಎಂದು ರಕ್ಷಿತಾಗೆ ಅರ್ಥವೇ ಆಗಿಲ್ಲ ಎಂದು ಕಾಣುತ್ತದೆ. ಹೀಗಾಗಿ ಅವರು ಈ ಬಗ್ಗೆ ರಿಯಾಕ್ಟ್ ಮಾಡಲೇ ಇಲ್ಲ, ದೊಡ್ಡ ವಿಷಯವನ್ನು ಮಾಡಲಿಲ್ಲ. ಇದೇ ಜಾಗದಲ್ಲಿ ಬೇರೆಯವರು ಇದ್ದಿದ್ದರೆ, ಮಾತ್ರ ಸಮಸ್ಯೆ ಆಗುತ್ತಿತ್ತು.
66
ಕಿಚ್ಚ ಸುದೀಪ್ ಮಾತನಾಡಲಿಲ್ಲ
ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮಧ್ಯೆ ಜಗಳ ಆಯ್ತು, ಆಮೇಲೆ ಕ್ಷಮೆಯಲ್ಲಿ ಎಲ್ಲವೂ ಮುಗೀತು, ಆಮೇಲೆ ಮತ್ತೆ ಜಗಳ ಶುರು ಯಾಕೆ ಆಯ್ತು ಎಂದು ಕೇಳಿದಾಗ, ರಕ್ಷಿತಾಗೆ ಏನು ಹೇಳಬೇಕು ಎಂದು ಗೊತ್ತಾಗಲೇ ಇಲ್ಲ. ಪದೇ ಪದೇ ಕಿಚ್ಚ ಸುದೀಪ್ ಅವರು ಈ ಬಗ್ಗೆ ಪ್ರಶ್ನೆ ಮಾಡಿದಾಗಲೂ ರಕ್ಷಿತಾ ಮಾತನಾಡಲಿಲ್ಲ. ಮುಂದಿನ ವಾರ ಕೂಡ ನಾನು ಈ ಟಾಪಿಕ್ ಬಗ್ಗೆ ಮಾತಾಡೋಕೆ ರೆಡಿ ಇದ್ದೇನೆ, ನೆನಪು ಮಾಡಿಕೊಂಡು ಹೇಳಿ ಎಂದಿದ್ದಾರೆ. ಬಹುಶಃ ರಕ್ಷಿತಾ ಅವರೇ ಹೇಳಲಿ ಎಂದು ಕೂಡ ಇರಬಹುದು.