Bigg Boss Kannada Season 12: ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ನನ್ನ ಜರ್ನಿಯಲ್ಲಿ ಯಾರು ಹಾವಾಗಿದ್ದಾರೆ, ಏಣಿಯಾಗಿದ್ದಾರೆ ಎನ್ನೋದನ್ನು ಹೇಳಬೇಕು ಎಂದು ಕಿಚ್ಚ ಸುದೀಪ್ ಹೇಳಿದ್ದರು. ಆಗ ಬಹುತೇಕರು ಗಿಲ್ಲಿಗೆ ಹಾವಿನ ಸ್ಥಾನವನ್ನು ಕೊಟ್ಟಿದ್ದಾರೆ. ಅದರಲ್ಲಿ ಕಾವ್ಯ ನೀಡಿರೋದು ವಿಶೇಷ.
ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಗಿಲ್ಲಿ ನನಗೆ ತೇಜೋವಧೆ ಮಾಡಿದ್ದಾನೆ, ನನಗೆ ಏಕವಚನದಲ್ಲಿ ಮಾತನಾಡಿಸಿದರು, ನನ್ನ ವ್ಯಕ್ತಿತ್ವ ತಿರುಚಿದರು ಎಂದು ಅಶ್ವಿನಿ ಆರೋಪ ಮಾಡಿದ್ದರು.
25
ನನ್ನ ವ್ಯಕ್ತಿತ್ವ ಬದಲಾಯಿಸುತ್ತಿದ್ದಾನೆ
ನಾನು ಬಂದಾಗಿನಿಂದ ಗಿಲ್ಲಿ ನಟ, ನನ್ನ ವ್ಯಕ್ತಿತ್ವವನ್ನು ಬದಲಾಯಿಸೋಕೆ ಟ್ರೈ ಮಾಡ್ತಿದ್ದಾನೆ ಎಂದು ರಘು ಅವರು ಹೇಳಿದ್ದಾರೆ. ಈ ಹಿಂದೆ ಕ್ವಾಟ್ಲೆ ಕಿಚನ್ ಶೋನಲ್ಲಿ ರಘು, ಗಿಲ್ಲಿ ನಟ ಭಾಗಿಯಾಗಿದ್ದರು. ಈಗ ಈ ಮನೆಯಲ್ಲಿ ರಘು ಅಣ್ಣ ಎಂದು ಯಾವಾಗಲೂ ಅವರ ಜೊತೆ ಇರುತ್ತ, ಗೇಲಿ ಮಾಡುತ್ತ, ತಮಾಷೆ ಮಾಡುತ್ತಿದ್ದ ಗಿಲ್ಲಿ ಕಂಡ್ರೆ ಈಗ ರಘುಗೆ ಆಗುತ್ತಿಲ್ಲ. ಇವರಿಬ್ಬರು ದೂರ ದೂರ ಆಗಿದ್ದಾರೆ.
35
ನನ್ನ ಕಾವು ಅಂತ ಕರೆಯುತ್ತಾನೆ
ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಹಾವು ಪಟ್ಟ ಕೊಟ್ಟಿದ್ದಾರೆ. “ಪದೇ ಪದೇ ನನ್ನ ಕಾವು ಅಂತ ಕರೆಯೋದು, ಬೇರೆಯವರ ಕಣ್ಣಿಗೆ ಬೇರೆ ಥರ ಕಾಣಿಸ್ತಿದೆ. ಇದರಿಂದ ನನಗೆ ಹರ್ಟ್ ಆಗ್ತಿದೆ ಎಂದಾಗ ಅರ್ಥ ಮಾಡಿಕೊಂಡು ನಿಲ್ಲಿಸುತ್ತಾನೆ ಎಂದುಕೊಂಡಿದ್ದೆ. ಆ ರೀತಿ ಮಾಡಿಲ್ಲ” ಎಂದು ಹೇಳಿದ್ದಾರೆ.
ಕಾವ್ಯ ಶೈವ ಹಾಗೂ ಗಿಲ್ಲಿ ನಟ ಈ ಹಿಂದೆ ಡ್ಯಾನ್ಸ್ ಶೋವೊಂದರಲ್ಲಿ ಭಾಗಿಯಾಗಿದ್ದರು. ಈ ಮನೆಯಲ್ಲಿ ಜಂಟಿಯಾಗಿ ಆಟ ಶುರು ಮಾಡಿದ ಇವರ ಮಧ್ಯೆ ಸ್ನೇಹ ಇದೆ. ಗಿಲ್ಲಿ ನಟನಿಂದಲೇ ಕಾವ್ಯ ಇಲ್ಲಿರೋದು ಎಂದು ರಿಷಾ ಗೌಡ ಕೂಡ ಹೇಳಿದ್ದುಂಟು. ಗಿಲ್ಲಿ ಇಲ್ಲ ಅಂದರೆ ಕಾವ್ಯ ಜೀರೋ ಎಂದು ಕೂಡ ಹೇಳಿದ್ದರು.
55
ಅಣ್ಣಾ ಎಂದ ಕಾವ್ಯ
ಗಿಲ್ಲಿ ನಟ ಅವರು ಕಾವ್ಯ ಶೈವ ಅಂಥ ಹುಡುಗಿಯೇ ಬೇಕು, ಇವರನ್ನು ಮದುವೆ ಆಗ್ತೀನಿ ಎಂದು ಕಿಚ್ಚ ಸುದೀಪ್ ಮುಂದೆ ಹೇಳಿದ್ದುಂಟು. ಪದೇ ಪದೇ ಕಾವ್ಯ ಅವರು ಗಿಲ್ಲಿಗೆ ಅಣ್ಣಾ ಎಂದು ಕರೆದಿದ್ದುಂಟು. ಈ ಸ್ನೇಹ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.