ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಹಳೆಯ ವ್ಲಾಗ್ ವಿಡಿಯೋವೊಂದು ವೈರಲ್ ಆಗಿದೆ. ಆಟೋ ಚಾಲಕನೊಂದಿಗೆ 'ನಮಗ್ಯಾಕೆ ಕನ್ನಡ' ಎಂದು ಪ್ರಶ್ನಿಸಿರುವ ಅವರ ಮಾತುಗಳು, ಅವರು ಕನ್ನಡ ವಿರೋಧಿಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ತನ್ನ ತುಳು ಮಿಶ್ರಿತ ಕನ್ನಡದಿಂದ ಫೇಮಸ್ ಆಗಿರುವ ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಹಳೆಯ ವಿಡಿಯೋಗಗಳು ಮುನ್ನಲೆಗೆ ಬರುತ್ತಿವೆ. ಮತ್ತೊಂದೆಡೆ ರಕ್ಷಿತಾ ಮಾತುಗಳು Rap Song ಬದಲಾಗಿವೆ. ವ್ಲಾಗ್ ಮೂಲಕವೇ ರಕ್ಷಿತಾ ಶೆಟ್ಟಿ ಜನಪ್ರಿಯತೆ ಪಡೆದುಕೊಂಡು ಬಿಗ್‌ಬಾಸ್ ಮನೆಗೆ ಬಂದಿದ್ದರು. ಈ ಹಿಂದೆ ರಕ್ಷಿತಾ ಶೆಟ್ಟಿಯವರ ರಸಗುಲ್ಲಾ ವಿಡಿಯೋ ಸಹ ವೈರಲ್ ಆಗಿತ್ತು.
25
ಚರ್ಚೆಗೆ ಗ್ರಾಸವಾದ ರಕ್ಷಿತಾ ಮಾತು
ಇದೀಗ ರಕ್ಷಿತಾ ಶೆಟ್ಟಿ ಬೆಂಗಳೂರಿಗೆ ಬಂದಾಗಿನ ವ್ಲಾಗ್ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಮುನ್ನಲೆಗೆ ಬಂದಿದ್ದು, ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ರಕ್ಷಿತಾ ಶೆಟ್ಟಿ ಕನ್ನಡ ವಿರೋಧಿನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆಟೋದಲ್ಲಿ ಪ್ರಯಾಣಿಸುತ್ತಾ ಚಾಲಕನೊಂದಿಗೆ ರಕ್ಷಿತಾ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.
35
ವೈರಲ್ ವಿಡಿಯೋದಲ್ಲಿ ಏನಿದೆ?
ಬೆಂಗಳೂರಿನಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಾ ಚಾಲಕನಿಗೆ ನಿಮಗೆ ತುಳು ಬರಲ್ಲವಾ? ತುಳು ನಾಡಿನ ಮಂಗಳೂರಿನಲ್ಲಿ ನಮಗೆ ತುಳು ರಾಜ್ಯಭಾಷೆ. ನಮಗ್ಯಾಕೆ ಕನ್ನಡ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡುತ್ತಾರೆ. ರಕ್ಷಿತಾ ಶೆಟ್ಟಿ ಮಾತುಗಳಿಗೆ ಪ್ರತಿಕ್ರಿಯಿಸುವ ಆಟೋ ಚಾಲಕ, ಕರ್ನಾಟಕದ ರಾಜ್ಯ ಭಾಷೆ ಕನ್ನಡ ಎಂದು ತಿರುಗೇಟು ನೀಡುತ್ತಾರೆ.
ಹಲವು ಸಾಮಾಜಿಕ ಖಾತೆಗಳಲ್ಲಿ ರಕ್ಷಿತಾ ಶೆಟ್ಟಿಯವರ ಈ ವಿಡಿಯೋ ತುಣುಕನ್ನ ವಿವಿಧ ಬರಹಗಳೊಂದಿಗೆ ಶೇರ್ ಮಾಡಿಕೊಳ್ಳಲಾಗುತ್ತಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಈ ವಿಡಿಯೋ ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ ಅಂತಾ ಕೆಲವರು ಹೇಳಿದ್ರೆ, ರಕ್ಷಿತಾ ಅವರದ್ದು ಕನ್ನಡ ವಿರೋಧಿ ನಡೆ ಎಂದು ಟೀಕಿಸಿದ್ದಾರೆ. ಮನೆಯಿಂದ ಹೊರಬಂದ ಬಳಿಕ ರಕ್ಷಿತಾ ತಮ್ಮ ಈ ಮಾತುಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ರಕ್ಷಿತಾ ಶೆಟ್ಟಿಯವರನ್ನು ಬಿಗ್‌ಬಾಸ್‌ಗೆ ಬರುವಂತೆ ಮಾಡಿದ್ದು ಆಕೆಯ ತಪ್ಪು ತಪ್ಪಾದ ಕನ್ನಡ ಮಾತುಗಳು. ಬಿಗ್‌ಬಾಸ್ ಮನೆಗೆ ಬಂದಾಗಲೂ ಕನ್ನಡ ಕಲಿಯೋಕೆ ಬಂದಿದ್ದೀನಿ ಎಂದು ಹೇಳಿಕೊಂಡಿದ್ದರು. ಇದೀಗ ಈ ವಿಡಿಯೋ ಮೂಲಕ ಆಕೆಯ ಜನಪ್ರಿಯತೆಗೆ ಧಕ್ಕೆಯುಂಟು ಮಾಡುವ ಪ್ರಯತ್ನ ಎಂದು ರಕ್ಷಿತಾ ಶೆಟ್ಟಿ ಅಭಿಮಾನಿಗಳು ವಾದಿಸಿದ್ದಾರೆ.