ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಆಕೆಯನ್ನು ಹುಡುಕಲು ಮಾಸ್ಕ್ ಧರಿಸಿ ಚಿತ್ರಮಂದಿರಕ್ಕೆ ಬರುತ್ತಾನೆ. ಅಲ್ಲಿ ಜಾಹ್ನವಿಯನ್ನು ನೋಡಿದಾಗ, ಈ ವಿಷಯ ವಿಶ್ವನಿಗೆ ತಿಳಿದು ಆತಂಕಗೊಳ್ಳುತ್ತಾನೆ. ವಿಶ್ವನು ಜಾಹ್ನವಿಯನ್ನು ರಕ್ಷಿಸುತ್ತಾನಾ ಎಂಬುದು ಕಥೆಯ ರೋಚಕ ತಿರುವು.
ಲಕ್ಷ್ಮೀ ನಿವಾಸ (Lakshmi Nivasa) ಇದೀಗ ಭಾರಿ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿಯುತ್ತಲೇ ಜಯಂತ್ ಆಕೆಯನ್ನು ಹುಡುಕಲು ಜನರನ್ನು ಬಿಟ್ಟಿದ್ದ. ಅವಳ ಬಳೆ ಮನೆಯಲ್ಲಿ ಸಿಕ್ಕಿದ್ದರಿಂದ ಜಾಹ್ನವಿ ಬದುಕಿದ್ದಾಳೆ ಎನ್ನುವುದು ಅವನಿಗೆ ತಿಳಿದಿತ್ತು.
26
ಜಯಂತ್ಗೆ ಸತ್ಯದ ಅರಿವು
ಅದೇ ರೀತಿ ವಿಶ್ವ ಆಕೆಯನ್ನು ರಕ್ಷಿಸ್ತಿರೋ ವಿಷಯವೂ ಜಯಂತ್ಗೆ ಅರಿವಾಗಿತ್ತು. ವಿಶ್ವನನ್ನು ಮನೆಗೆ ಕರೆಸಿ ಬಾಯಿ ಬಿಡಿಸಲು ನೋಡಿದ್ದ. ಆದರೆ ವಿಶ್ವ ಜಯಂತ್ಗೇ ಚಾಲೆಂಜ್ ಹಾಕಿ ಹೋಗಿದ್ದ.
36
ವಿಶ್ವನ ಚಾಲೆಂಜ್
ಜಾಹ್ನವಿ ಬದುಕಿದ್ದಾಳೆ. ತಾಕತ್ತು ಇದ್ದರೆ ನೀನೇ ಹುಡುಕು ನೋಡುವ ಎಂದು ಚಾಲೆಂಜ್ ಹಾಕಿದ್ದ. ಹೇಳಿಕೇಳಿ ಸೈಕೋ ಈತ, ಬಿಡ್ತಾನಾ? ಪತ್ನಿಯನ್ನು ಹುಡುಕಿಸಲು ಏನೇನು ಬೇಕೋ ಎಲ್ಲವನ್ನೂ ಮಾಡಿದ್ದ.
ಇದೀಗ ಸಿನಿಮಾ ಒಂದನ್ನು ನೋಡಲು ಜಾಹ್ನವಿ ಮತ್ತು ವಿಶ್ವ ಬರುವ ಸುದ್ದಿ ತಿಳಿಯುತ್ತಲೇ ಶಾಂತಮ್ಮನ ಜೊತೆ ಮಾಸ್ಕ್ಮ್ಯಾನ್ ಆಗಿ ಬಂದಿದ್ದಾನೆ ಜಯಂತ್. ಅಷ್ಟರಲ್ಲಿ ಜಾಹ್ನವಿ ಎದ್ದು ಹೋದಾಗ ಜಯಂತ್ ಆಕೆಯನ್ನು ನೋಡಿದ್ದಾನೆ.
56
ವಿಶ್ವನಿಗೆ ವಿಷಯ
ಇತ್ತ ಶಾಂತಮ್ಮ ಓಡಿ ಹೋಗಿ ವಿಶ್ವನಿಗೆ ವಿಷಯ ತಿಳಿಸಿದ್ದಾಳೆ. ಜಾಹ್ನವಿಯನ್ನು ಹುಡುಕಿ ಜಯಂತ್ ಬಂದಿರುವುದಾಗಿ ಅವಳು ಹೇಳಿದ್ದಾಳೆ. ವಿಶ್ವನಿಗೆ ಗಾಬರಿಯಾಗಿದೆ.
66
ರಕ್ಷಿಸ್ತಾನಾ ವಿಶ್ವ?
ಜಯಂತ್ ಕಣ್ಣಿನಿಂದ ಜಾಹ್ನವಿಯನ್ನು ರಕ್ಷಿಸ್ತಾನಾ ವಿಶ್ವ? ಜಯಂತ್ ಅಂತೂ ಚಿನ್ನುಮರಿಯನ್ನು ನೋಡಿಯಾಗಿದೆ. ಅವನು ಸುಮ್ನೆ ಬಿಡ್ತಾನಾ? ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ