BBK 12: ಭೇಷ್... ಆರಂಭದಿಂದ ಕೊನೇವರೆಗೂ... Gilli Nata ಈ ಗುಣವನ್ನು ಬದಲಾಯಿಸಿಕೊಳ್ಳಲೇ ಇಲ್ಲ!

Published : Jan 18, 2026, 05:01 PM IST

BBK 12 Episode Gilli Nata And Kavya: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಇಂದು ತೆರೆ ಬೀಳಲಿದೆ. ಯಾರು ವಿನ್ನರ್?‌ ಯಾರು ರನ್ನರ್‌ ಎನ್ನುವ ಕುತೂಹಲ ಇದ್ದೇ ಇದೆ. ಹೀಗಿರುವಾಗ ಪ್ರಿ ಫಿನಾಲೆಯಲ್ಲಿ ಗಿಲ್ಲಿ ನಟ ಮಾತನಾಡಿದ್ದು, ಕೊನೆಗೂ ಅವರು ಕಾವ್ಯರನ್ನು ಬಿಟ್ಟು ಕೊಡಲೇ ಇಲ್ಲ. 

PREV
15
ಕಾವ್ಯಗೆ ಯಾವ ಸ್ಥಾನ?

ನಾನು ಕಾವ್ಯಳನ್ನು ಫಿನಾಲೆಗೆ ಕರೆದುಕೊಂಡು ಹೋಗ್ತೀನಿ ಎಂದು ಗಿಲ್ಲಿ ನಟ ಹೇಳಿದ್ದರು. ಅದರಂತೆ ಈಗ ಟಾಪ್‌ 6 ನಲ್ಲಿ ಕಾವ್ಯ ಶೈವ ಕೂಡ ಇದ್ದಾರೆ. ಕಾವ್ಯ ಶೈವ ಈ ಬಾರಿ ಯಾವ ಸ್ಥಾನ ಪಡೆಯಲಿದ್ದಾರೆ ಎಂದು ಕಾದು ನೋಡಬೇಕಿದೆ.

25
ಆಟ ಆಡೋಕೆ ಬಿಡಿ

ಗಿಲ್ಲಿ ನಟ ನನ್ನ ರೇಗಿಸ್ತಾರೆ, ಅದು ನನಗೆ ಇಷ್ಟ ಇಲ್ಲ, ಗಿಲ್ಲಿ ಆಟದಿಂದ ನನಗೆ ಸಮಸ್ಯೆ ಆಗ್ತಿದೆ ಎಂದು ಕಾವ್ಯ ಶೈವ ಅವರು ಧನುಷ್‌ ಗೌಡ ಬಳಿ ಹೇಳಿದ್ದುಂಟು. ಕಾವ್ಯಗೆ ಅವರ ಆಟವನ್ನು ಆಡೋಕೆ ಬಿಡಿ ಎಂದು ಕೂಡ ಕಿಚ್ಚ ಸುದೀಪ್‌ ಹೇಳಿದ್ದುಂಟು.

35
ಕಾವ್ಯ, ಗಿಲ್ಲಿಯನ್ನು ಬಿಟ್ಟುಕೊಟ್ಟರು

ಅಂದಹಾಗೆ ಕಾವ್ಯ ಶೈವ ಅವರು ಗಿಲ್ಲಿ ನಟನನ್ನು ನಾಮಿನೇಟ್‌ ಮಾಡಿದ್ದರು, ಬೇರೆಯವರ ಬಳಿ ಗಿಲ್ಲಿಯನ್ನು ದೂರಿದ್ದುಂಟು, ಬಿಟ್ಟುಕೊಟ್ಟಿದ್ದುಂಟು. ಇದನ್ನು ಅವರು ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಗಿಲ್ಲಿ ಹಾಗೆ ಮಾಡಲಿಲ್ಲ.

45
ಆಟ ಆಡಿದ್ದೀನಿ

ಪ್ರಿ ಫಿನಾಲೆಯಲ್ಲಿ ಕೂಡ ಗಿಲ್ಲಿ ನಟ ಅವರು, “ನಾನು ಇಲ್ಲಿ ಸರಿಯಾಗಿ ಸ್ವಲ್ಪ ಆಟ ಆಡಿದ್ದೀನಿ ಎಂದರೆ ಅದಿಕ್ಕೆ ಕಾವ್ಯ ಶೈವ ಕಾರಣ” ಎಂದು ಹೇಳಿದ್ದಾರೆ.

55
ಆಗ ಕಾವ್ಯ ನನ್ನ ಜೊತೆಗಿದ್ದರು

ಗಿಲ್ಲಿ ನಟ ಅವರು ಈ ಹಿಂದೆಯೇ, “ಆರಂಭದಲ್ಲಿ ಹೇಗೆ ಆಟ ಆಡಬೇಕು? ಏನು ಮಾಡಬೇಕು ಎಂಬ ಗೊಂದಲ ಇತ್ತು. ಅಶ್ವಿನಿ ಗೌಡ ಅವರ ಕಾಲಿಗೆ ಬೀಳೋಕೆ ಹೋಗಿದ್ದುಂಟು, ಆಗ ನನ್ನ ಜೊತೆಗೆ ಕಾವ್ಯ ಅವರೇ ನಿಂತಿದ್ದು” ಎಂದು ಕೂಡ ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories