BBK 12: ಸಾಕ್ಷಿ ಸಮೇತ ಗಿಲ್ಲಿ ನಟನ ತಪ್ಪನ್ನು ಎತ್ತಿ ತೋರಿಸಿದ ಅಶ್ವಿನಿ ಗೌಡ; ಯಾಕೆ ಹೀಗೆ ಮಾಡ್ತಾರೆ?

Published : Nov 20, 2025, 05:34 PM IST

Bigg Boss Kannada Season 12 Show Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನ ವಿರುದ್ಧ ಧ್ರುವಂತ್‌ ಒಂದು ಆರೋಪ ಮಾಡಿದ್ದರು. ಈಗ ಈ ಆರೋಪ ಮತ್ತೆ ಸಾಬೀತಾದಂತಿದೆ. ಹೌದು, ಅಶ್ವಿನಿ ಕೂಡ ಅದೇ ಆರೋಪ ಮಾಡಿದ್ದಾರೆ. ಹಾಗಾದರೆ ಏನದು? ನಿಜಕ್ಕೂ ಏನಾಯ್ತು?

PREV
15
ಪ್ರಿಂಟೆಡ್‌ ಶರ್ಟ್‌ ಕೊಟ್ಟಿದ್ದರಂತೆ

ಗಿಲ್ಲಿ ನಟ ಅವರು ಬಟ್ಟೆ ಬೇಕು, ಊರಿಂದ ಬಟ್ಟೆ ಕಳಿಸಿಲ್ಲ ಎಂದು ಹೇಳಿದ್ದರಂತೆ. ಎಲ್ಲರ ಬಳಿಯೂ ಅವರು ಬಟ್ಟೆ ತಗೊಂಡಿದ್ದಾರಂತೆ. ಧ್ರುವಂತ್‌ ಕೂಡ ಗಿಲ್ಲಿ ನಟನಿಗೆ ಪ್ರಿಂಟೆಡ್‌ ಶರ್ಟ್‌ ಕೊಟ್ಟಿದ್ದರು. ಇದನ್ನು ಕಿಚ್ಚ ಸುದೀಪ್‌ ಕೂಡ ಮೆಚ್ಚಿದ್ದರು.

25
ಧ್ರುವಂತ್‌ಗೆ ಬೇಸರ ಆಯ್ತು

ಧ್ರುವಂತ್‌ ಕೊಟ್ಟ ಶರ್ಟ್‌ನ್ನು ಗಿಲ್ಲಿ ನಟ ಅವರು ಕೊಳೆಯಾದ ಜಾಗದಲ್ಲಿ ಎಸೆದಿದ್ದಾರಂತೆ. ಇದು ಧ್ರುವಂತ್‌ ಅವರಿಗೆ ಬೇಸರ ಬಂದಿತ್ತು. ಈ ಬಗ್ಗೆ ಅವರು ಎಲ್ಲರ ಬಳಿಯೂ ಹೇಳಿಕೊಂಡಿದ್ದರು. ನಾನು ನನ್ನ ದುಡಿಮೆಯಲ್ಲಿ ಖರೀದಿ ಮಾಡಿದ ಶರ್ಟ್‌ ಹಾಗೆ ಬಿದ್ದಿದ್ದು ನೋಡಿ ಬೇಸರ ಆಗಿದೆ ಎಂದು ಅವರು ಹೇಳಿದ್ದರು.

35
ಅಶ್ವಿನಿ ಟೀ ಶರ್ಟ್‌ ತಗೊಂಡ್ರು

ಗಿಲ್ಲಿ ನಟ ಅವರು ನನ್ನ ಟೀ ಶರ್ಟ್‌ ತಗೊಂಡಿದ್ದರು. ಅದನ್ನು ವಾಶ್‌ ಕೂಡ ಮಾಡಿ ಕೊಟ್ಟಿಲ್ಲ. ಟೆರೆಟ್‌ನಲ್ಲಿ ಹಾಗೆಯೇ ಬಿದ್ದಿದೆ. ನಾವು ಕೊಟ್ಟಿರೋದಿಕ್ಕೆ ಸ್ವಲ್ಪವೂ ಕೃತಜ್ಞತೆ ಅನ್ನೋದು ಇಲ್ಲ ಎಂದು ಅಶ್ವಿನಿ ಬೇಸರ ಹೊರಹಾಕಿದ್ದಾರೆ.

45
ಗಿಲ್ಲಿ ನಟ ಏನೂ ಹೇಳಲಿಲ್ಲ

ಗಿಲ್ಲಿ ನಟ ಅವರಿಗೆ ಕೇಳಿಸುವಂತೆ ಅಶ್ವಿನಿ ಗೌಡ ಅವರು ಈ ಮಾತು ಹೇಳಿದ್ದಾರೆ. ಈ ಮಾತು ಕೇಳಿ ಗಿಲ್ಲಿ ನಟ ಏನೂ ಹೇಳಿಲ್ಲ. ಒಟ್ಟಿನಲ್ಲಿ ಬಟ್ಟೆ ವಿಚಾರ ಮಾತ್ರ ಹಾಗೆಯೇ ಉಳಿದುಕೊಂಡಿದೆ.

55
ಗಿಲ್ಲಿ ನಂ ಒನ್‌

ಮನೆ ಕೆಲಸ ಮಾಡೋದಿಲ್ಲ, ಟಾಸ್ಕ್‌ ಆಡೋದಿಲ್ಲ, ಗಿಲ್ಲಿ ಯಾವ ಟೀಂನಲ್ಲಿ ಇದ್ದಾರೋ ಆ ಟೀಂ ಸೋಲುತ್ತದೆ ಎಂದು ಮನೆಯವರು ದೂರುತ್ತಿದ್ದಾರೆ. ಮನರಂಜನೆಯಲ್ಲಿ ಮಾತ್ರ ಗಿಲ್ಲಿ ನಂ ಒನ್‌ ಎನ್ನಬಹುದು. ವೀಕ್ಷಕರು ಇವರ ಆಟವನ್ನು ಮೆಚ್ಚಿದ್ದಾರೆ.

Read more Photos on
click me!

Recommended Stories