BBK 12: ಮಸ್ಕಾ ಹೊಡಿತಿದ್ದ ಗಿಲ್ಲಿ ನಟ; ಅದೊಂದು ಪ್ರಶ್ನೆಯಿಂದ ಮತ್ತೆ ಮಾತೇ ಆಡದಂತೆ ಮಾಡಿದ ರಕ್ಷಿತಾ

Published : Nov 20, 2025, 03:11 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನ ಬಳಿ ಕೆಲಸ ಮಾಡಿಸೋಕೆ ಎಲ್ಲರೂ ಒದ್ದಾಡುತ್ತಾರೆ. ಕಿಚ್ಚ ಸುದೀಪ್‌ ಅವರು ಹೇಳಿದರೂ ಕೂಡ ಗಿಲ್ಲಿ ನಟ ಕೆಲಸ ಮಾಡುತ್ತಿಲ್ಲ. ಗಿಲ್ಲಿ ನಟನ ಬಳಿ ಮಾತಿನಲ್ಲಿ ಗೆಲ್ಲೋಕೆ ಆಗೋದಿಲ್ಲ. ಹೀಗಿರುವಾಗ ರಕ್ಷಿತಾ ಅವರ ಬಾಯಿ ಮುಚ್ಚಿಸಿದ್ದಾರೆ.

PREV
15
ಗಿಲ್ಲಿ ನಟ ಕೆಲಸ ಮಾಡಲಿಲ್ಲ

ಗಿಲ್ಲಿ ನಟನ ಬಳಿ ವೈಯಕ್ತಿಕ ಕೆಲಸವನ್ನು ಬೇಕಿದ್ರೂ ಮಾಡಿಸಿಕೊಳ್ಳಿ ಎಂದು ಕಿಚ್ಚ ಸುದೀಪ್‌ ಹೇಳಿದ್ದರೂ ಕೂಡ ಗಿಲ್ಲಿ ಮಾತ್ರ ಕೆಲಸವನ್ನೇ ಮಾಡಲಿಲ್ಲ. ಇಡೀ ಮನೆಯನ್ನು, ಮನೆಯವರನ್ನು ಅವರು ಆಟ ಆಡಿಸಿದ್ದರು.

25
ಗಿಲ್ಲಿ ನಟ ಬಟ್ಟೆ ಒಗೆಯೋದಿಲ್ಲ

ಗಿಲ್ಲಿ ನಟನ ಬಳಿ ಕೆಲಸ ಮಾಡಿಸಿಕೊಳ್ಳೋಣ ಎಂದು ಮನೆಯಲ್ಲಿದ್ದವರು ಎಷ್ಟೇ ಪ್ರಯತ್ನಪಟ್ಟರೂ ಆಗಿರಲಿಲ್ಲ. ಗಿಲ್ಲಿ ನಟ ಬಟ್ಟೆ ಒಗೆಯೋದಿಲ್ಲ, ಬಕೆಟ್‌ನೊಳಗಡೆ ಬಟ್ಟೆ ಹಾಕಿ ಅದನ್ನು ಕಾಲಿನಿಂದ ತುಳಿಯುತ್ತಾರೆ. ಬಾತ್‌ರೂಮ್‌ ಏರಿಯಾದಲ್ಲಿ ಸ್ಪ್ರೇ ಹೊಡೆದು ಮುಗಿಸುತ್ತಾರೆ. ಇದನ್ನು ಸೂರಜ್‌ ಅವರೇ ಹೇಳಿದ್ದರು.

35
ಗಿಲ್ಲಿ ಮಾತು ಕೇಳೋ ರಕ್ಷಿತಾ

ಗಿಲ್ಲಿ ನಟ ಅವರ ಮಾತನ್ನು ರಕ್ಷಿತಾ ಕೇಳುತ್ತಾರೆ. ರಕ್ಷಿತಾ ಪರ ಗಿಲ್ಲಿ ಇರುತ್ತಾರೆ. ಗಿಲ್ಲಿ ಎಂದರೆ ನನಗೆ ಇಷ್ಟ ಎಂದು ರಕ್ಷಿತಾ ಹೇಳಿದ್ದುಂಟು. ಅಂದಹಾಗೆ ಗಿಲ್ಲಿ ಕಾಮಿಡಿಗೆ ರಕ್ಷಿತಾ ಬಿದ್ದು ಬಿದ್ದು ನಕ್ಕಿದ್ದುಂಟು.

45
ರಕ್ಷಿತಾ ಪ್ರಶ್ನೆಗೆ ಗಿಲ್ಲಿ ಸ್ತಬ್ಧ

ಗಿಲ್ಲಿ ನಟ ಅವರಿಗೆ ಕಿಚನ್‌ ಏರಿಯಾ ಬಳಿ ಕಸ ಗುಡಿಸಿ ಎಂದು ಹೇಳಲಾಗಿತ್ತು. ಆದರೆ ಅವರು ಮಾತ್ರ ರಕ್ಷಿತಾಗೆ, “ನನ್ನ ವಂಶದ ಕುಡಿ ನೀನು. ಕೆಲಸ ಮಾಡು” ಎಂದಿದ್ದಾರೆ. ಆಗ ರಕ್ಷಿತಾ ಅವರು, “ನಿಮ್ಮ ವಂಶದ ಕುಡಿಗೆ ಏನು ಮಾಡಿದ್ದೀರಾ?” ಎಂದು ಪ್ರಶ್ನೆ ಕೇಳಿದ್ದಾರೆ. ಇದನ್ನು ಕೇಳಿ ಗಿಲ್ಲಿ ಅವಕ್ಕಾಗಿದ್ದಾರೆ.

55
ಸ್ಪಂದನಾ, ರಘುಗೆ ಖುಷಿ

ಗಿಲ್ಲಿ ನಟನಿಗೆ ಸರಿಯಾಗಿ ಪ್ರಶ್ನೆ ಕೇಳಿದರು ಎಂದು ಸ್ಪಂದನಾ ಸೋಮಣ್ಣ, ರಘು ಕೂಡ ಮೆಚ್ಚಿದ್ದಾರೆ. ಕೊನೆಗೂ ರಕ್ಷಿತಾ ಅವರ ಮಾತಿಗೆ ಒಪ್ಪಿ ಕಸ ಗುಡಿಸಿದ್ದಾರೆ, ಎಷ್ಟೋ ಬಾರಿ ಪಾತ್ರೆಯನ್ನು ಕೂಡ ತೊಳೆದಿದ್ದಾರೆ. ಇವರಿಬ್ಬರನ್ನು ನೋಡಿದ ವೀಕ್ಷಕರು ಅಣ್ಣ-ತಂಗಿ ಎಂದು ಕರೆಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories