Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅರ್ಧ ಇಂಗ್ಲಿಷ್, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಿರೋದು ದೊಡ್ಡ ಚರ್ಚೆ ಆಗಿತ್ತು. ರಕ್ಷಿತಾ ನಾಟಕ ಮಾಡುತ್ತಿದ್ದಾರೆ ಎಂದು ಧ್ರುವಂತ್ ಹೇಳಿದ್ದರು. ಈಗ ಈ ಬಗ್ಗೆ ಬಿಗ್ ಬಾಸ್ ಕನ್ನಡ 9 ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ.
Asianet Suvarna News ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅರು “ನಾನು ಸಿನಿಮಾ ಕೆಲಸ ಇದ್ದಿದ್ದರಿಂದ ಟಿವಿಯಲ್ಲಿ ನೋಡಿಲ್ಲ. ಆದರೆ ಬಿಗ್ ಬಾಸ್ ಶೋ ಸಂಬಂಧಿತ ವಿಡಿಯೋಗಳು, ಪ್ರೋಮೋಗಳನ್ನು ನೋಡ್ತಾ ಇದ್ದೀನಿ, ಅಪ್ಡೇಟ್‌ಗಳೆಲ್ಲ ಬರುತ್ತಿರುತ್ತದೆ. ಈ ಸೀಸನ್ ಅಲ್ಲಿ ಏನ್ ಆಗ್ತಿದೆ ಎಂದು ನನಗೆ ಗೊತ್ತಿದೆ” ಎಂದು ಹೇಳಿದ್ದಾರೆ.
27
ಆ ಮನೆಯಲ್ಲಿ ನನಗೆ ಪರಿಚಯ ಇರೋರಿದ್ದಾರೆ
“ನನಗೆ ಜಾನ್ವಿ, ರಾಶಿಕಾ ಶೆಟ್ಟಿ ಪರಿಚಯ ಇದ್ದಾರೆ. ಬೇರೆ ಯಾರು ಅಷ್ಟಾಗಿ ಪರಿಚಯ ಇಲ್ಲ. ರಕ್ಷಿತಾ ಶೆಟ್ಟಿ ನಮ್ಮ ಊರವರು, ಆದರೆ ನನಗೆ ಪರಿಚಯ ಇಲ್ಲ. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದೀನಿ. ನಮ್ಮ ಊರವರು ಸೋ ಅವರು ಪರಿಚಯ ಅಂತನೇ ಹೇಳಬಹುದಲ್ವ?” ಎಂದು ಹೇಳಿದ್ದಾರೆ.
37
ಅಂದು ನಾನು ಹೇಳಿದ್ದೆ
“ನಾನು ಸ್ಟಾರ್ಟಿಂಗ್ ಅಲ್ಲೇ ಒಂದು ಮೀಡಿಯಾದಲ್ಲಿ ರಕ್ಷಿತಾ ಅವರು ತುಂಬಾ ದಿನ ಆ ಮನೆಯಲ್ಲಿ ಉಳ್ಕೊತಾರೆ ಅಂತ ಹೇಳಿದ್ದೆ. ಅವರು ಆಡುತ್ತಿರುವ ರೀತಿ ಆ ಒಂದು ಮುಗ್ಧತೆ ಇದೆ. ಅಲ್ಲಿ ಅಲ್ಲಿ ಕ್ಯಾಲ್ಕುಲೇಷನ್ಸ್‌ಗಿಂತ ಜಾಸ್ತಿ ಇನ್ನೋಸೆನ್ಸ್ ಇದೆ” ಎಂದು ಹೇಳಿದ್ದಾರೆ.
“ಅಲ್ಲಿ ವರ್ಕ್ ಆಗುವಂತದ್ದು ಆ ಇನ್ನೋಸೆನ್ಸ್. ಅವರಲ್ಲಿ ಅದು ಕಾಣ್ತಾ ಇದೆ. ಈ ಮೊದಲು ಅವರಿಗೆ ನೆಗೆಟಿವ್ ಪ್ರತಿಕ್ರಿಯೆ ಇತ್ತು. ಈಗ ನಮ್ಮ ಊರಿಂದ ಹೋಗಿ, ಅಲ್ಲಿ ಪಾಸಿಟಿವ್ ಆಗಿ ಹೊರಗೆ ಬರೋದು ಅಂದ್ರೆ ಅದೊಂದು ದೊಡ್ಡ ಸಾಧನೆ. ಬಿಗ್ ಬಾಸ್‌ಗೆ ಹೋಗಿ ಬರುವ ಜನರು ಪ್ರೀತಿನ ಪಡ್ಕೊಂಡು ಹೊರಗೆ ಬರೋದಿದೆ. ಅದು ದೊಡ್ಡ ಸಾಧನೆ, ಅದು ಪ್ಲಾನ್ ಮಾಡಿ ಆಗಲ್ಲ, ಪ್ಲಾನ್ ಮಾಡ್ಕೊಂಡು ಅಲ್ಲಿ ಹಿಂಗಿದ್ರೆ ಹಿಂಗೆ ಆಗುತ್ತೆ, ಅದು ಆಗಲ್ಲ. ಅದೊಂದು ಫ್ಲೋನಲ್ಲಿ ನಿಮ್ಮ ನ್ಯಾಚುರಲ್ ಗುಣ ಏನಿದೆ ಅದು ಹೊರಗೆ ಬಂದೇ ಬರುತ್ತೆ” ಎಂದಿದ್ದಾರೆ.
57
ನೆಗೆಟಿವ್ ಆಗಿ ನೋಡಿದ್ರು
“ರಕ್ಷಿತಾ ಹೋಗೋದಕ್ಕಿಂತ ಮುಂಚೆ ಬಹುಶಃ ನಮ್ಮೂರಲ್ಲೂ ಕೆಲವರು ಅವರನ್ನ ಒಂದು ಸ್ವಲ್ಪ ನೆಗೆಟಿವ್ ಆಗಿ ನೋಡ್ತಾ ಇದ್ರು. ಕೆಲವು ವಿಡಿಯೋಗಳನ್ನು ನೋಡಿ ಏನೇನೋ ಮಾಡ್ತಿದ್ದಾರೆ ಎಂದು ಹೇಳಿದ್ದುಂಟು. ಈಗ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ” ಎಂದಿದ್ದಾರೆ.
67
ಮಜಾ ಕೊಡ್ತಿದ್ದಾರೆ
“ನನಗೆ ರಕ್ಷಿತಾ ಶೆಟ್ಟಿ ಅವರ ರಿಯಲ್ ಕ್ಯಾರೆಕ್ಟರ್ ಏನು ?ಅವರ ವಯಸ್ಸು ಏನು ಅಂತ ಗೊತ್ತಿಲ್ಲ. ನಮಗೆ ನೋಡಿದಾಗ ಒಂದು ಒಂದು ತಂಗಿಯನ್ನು ನೋಡಿದಂಗೆ ಫೀಲ್ ಆಗುತ್ತೆ. ಆ ಎನರ್ಜಿ & ಯಾವುದೇ ಫಿಲ್ಟರ್ ಇಲ್ಲದೆ, ಮನಸ್ಸಲ್ಲಿ ಏನು ಬರುತ್ತೆ ಅದನ್ನು ಹೇಳ್ತಾ ಹೋಗ್ತಾ ಇರ್ತಾರೆ. ಒಟ್ಟಿನಲ್ಲಿ ಮಜಾ ಕೊಡ್ತಾ ಇದ್ದಾರೆ. ಅವರು ಗೆಲ್ಲಿ ಅಂತ ನಾನು ಆಲ್ ದ ಬೆಸ್ಟ್ ಹೇಳ್ತೀನಿ” ಎಂದಿದ್ದಾರೆ.
77
ಧ್ರುವಂತ್ ಯಾಕೆ ಹಾಗೆ ಹೇಳಿದ್ರು ಗೊತ್ತಿಲ್ಲ
“ನಮ್ಮ ಊರಿನಲ್ಲಿ ಎಂಥ ಗೊತ್ತುಂಟ ಅಂತ ಮಾತನಾಡುತ್ತಾರೆ. ಇದು ತುಂಬ ಸಹಜ. ಧ್ರುವಂತ್ ಅವರು ಹೊರಗಡೆ ಜಾಸ್ತಿ ಇದ್ದಿದ್ದಕ್ಕೆ ಅವರಿಗೆ ಈ ಬಗ್ಗೆ ಗೊತ್ತಿಲ್ಲದೆ ಇರಬಹುದು” ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.