BBK 12: ಎಲ್ಲರ ಥರ ಕಾವ್ಯ ನಾಮಿನೇಟ್‌ ಮಾಡಿದ್ರೂ, ಗಿಲ್ಲಿ ನಟ ಮಾನವೀಯತೆ ಬಿಡ್ಲಿಲ್ಲ; ಕರುಳು ಚುರುಕ್‌ ಎನ್ನುತ್ತೆ ಕಣ್ರೀ

Published : Dec 11, 2025, 08:31 AM IST

BBK 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಯಾವಾಗಲೂ ಎಲ್ಲರ ಬಳಿ ಮೊಟ್ಟೆ ಕೊಡು, ಹಣ್ಣು ಕೊಡು ಎಂದು ಕೇಳಿಕೊಂಡು ತಿನ್ನುತ್ತಾರೆ ಎಂಬ ಮಾತಿತ್ತು. ಆದರೆ ಈ ಬಾರಿ ಅವರಿಗೆ ಚಿಕನ್‌ ಬಿರಿಯಾನಿ ಸಿಕ್ಕರೂ ತಿನ್ನಲಿಲ್ಲ.

PREV
16
ಕಾವ್ಯ ಶೈವ ಅವರನ್ನು ಅಳಿಸಬೇಕು

ಹೌದು, ಬಿಗ್‌ ಬಾಸ್‌ ಅಲ್ಲ ವಿಲನ್‌ ಗಿಲ್ಲಿ ನಟ, ಅಶ್ವಿನಿ ಗೌಡಗೆ ಒಂದು ಸೀಕ್ರೆಟ್‌ ಟಾಸ್ಕ್‌ ಕೊಟ್ಟಿದ್ದರು. ಆ ವೇಳೆ ಕಾವ್ಯ ಶೈವ ಅವರನ್ನು ಅಳಿಸಬೇಕು, ಇನ್ನೊಂದು ಕಿಚ್ಚನ ಚಪ್ಪಾಳೆ ಫೋಟೋವನ್ನು ಯಾರಿಗೂ ಗೊತ್ತಾಗದ ಹಾಗೆ ಕದ್ದು ಸ್ಟೋರ್‌ ರೂಮ್‌ನಲ್ಲಿ ಇಡಬೇಕು. ಈ ಎರಡೂ ಟಾಸ್ಕ್‌ ಗೆದ್ದರೆ ಡೈರೆಕ್ಟ್‌ ಆಗಿ ಕ್ಯಾಪ್ಟನ್ಸಿ ಟಾಸ್ಕ್‌ ಗೆಲ್ಲಬಹುದು.

26
ಗಿಲ್ಲಿ ನಟ ಸಿಕ್ಕಾಪಟ್ಟೆ ಯೋಚನೆ ಮಾಡಿದ್ದಾರೆ

ವಿಲನ್‌ ಈ ಟಾಸ್ಕ್‌ ನೀಡಿದಾಗ ಗಿಲ್ಲಿ ನಟ ಸಿಕ್ಕಾಪಟ್ಟೆ ಯೋಚನೆ ಮಾಡಿದ್ದಾರೆ. ಆಮೇಲೆ ವಿಲನ್‌ 10 ಎಣಿಸೋದರೊಳಗಡೆ ಹೇಳಬೇಕು ಎಂದಿದ್ದಾರೆ. ಅಶ್ವಿನಿ ಗೌಡ ಕೂಡ ಒಪ್ಪಿಕೋ, ಒಪ್ಪಿಕೋ ಎಂದು ಫೋರ್ಸ್‌ ಮಾಡಿದಾಗ ಗಿಲ್ಲಿ ಓಕೆ ಎಂದಿದ್ದಾರೆ. ಕಾವ್ಯ ಶೈವ ಅವರನ್ನು ಹೇಗೆ ಅಳಿಸೋದು ಎನ್ನೋದು ಅಚರ ಮನಸ್ಸಿನಲ್ಲಿತ್ತು.

36
ಕಾವ್ಯ ಶೈವ ನಾಮಿನೇಟ್‌ ಮಾಡಿದ್ರು

ಗಿಲ್ಲಿ ನಟ ರೇಗಿಸ್ತಾರೆ, ಎಷ್ಟು ಹೇಳಿದರೂ ಕೇಳೋದಿಲ್ಲ, ಹಾಗಾಗಿ ನಾಮಿನೇಟ್‌ ಮಾಡ್ತೀನಿ ಎಂದು ಕಾರಣ ಕೊಟ್ಟು ಕಾವ್ಯ ಶೈವ ನಾಮಿನೇಟ್‌ ಮಾಡಿದ್ದರು. ಆ ಬಳಿಕ ಗಿಲ್ಲಿ ನಟ ಅವರು ಇದೇ ವಿಷಯ ಇಟ್ಟುಕೊಂಡು ಒಂದಿಷ್ಟು ಮಾತನಾಡಿ ಕಣ್ಣೀರು ಹಾಕಿಸಿದ್ದಾರೆ. ಕಾವ್ಯ ಬಳಿ ಹೋಗಿ, ಅತ್ತಿಯಾ? ಎಂದು ಕೇಳಿದರು. ಉಳಿದವರ ಬಳಿ ಹೋಗಿ ಕೂಡ ಕಾವ್ಯ ಕಣ್ಣೀರು ಹಾಕಿದ್ದಾಳಾ ಎಂದು ಪ್ರಶ್ನೆ ಮಾಡಿದ್ದಾರೆ.

46
ನೀನು ಪ್ರಿ ಪ್ರೊಡಕ್ಟ್‌

ಗಿಲ್ಲಿ ನಟ ಅವರು ಕಾವ್ಯಗೆ, “ನೀನು ಪ್ರಿ ಪ್ರೊಡಕ್ಟ್‌, ಇದುವರೆಗೂ ಏನೂ ಮಾಡಿಲ್ಲ. ಮೇಕಪ್‌ ಹಾಕಿಕೊಂಡು ಕೂತಿದ್ಯಾ ಅಷ್ಟೇ. ನಿನ್ನ ಜೊತೆ ನಾನು ಜಂಟಿಯಾಗಿ ಬರಬಾರದಿತ್ತು. ಒಂದೇ ತಟ್ಟೆಯಲ್ಲಿ ಊಟ ಮಾಡಿ ಮಚ್ಚು ಹಾಕ್ತೀಯಾ, ಬೆನ್ನಿಗೆ ಚೂರಿ ಹಾಕ್ತೀಯಾ. ಸ್ಪಂದನಾ ಲಕ್ಕಿ ಅಲ್ಲ, ನೀನು ಲಕ್ಕಿ” ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಕಾವ್ಯ ಶೈವಗೆ ಬೇಸರ ಆಗಿದೆ. ಕಾವ್ಯ ಬೇಸರ ಮಾಡಿಕೊಂಡರು ಎಂದು ಗಿಲ್ಲಿ ಊಟ ಮಾಡಿಲ್ಲ.

56
ಲಕ್ಷುರಿ ಬಜೆಟ್‌ ನೀಡಿದ್ದರು

ಅಂದಹಾಗೆ ಅಡುಗೆ ಮಾಡ್ತೀನಿ ಎಂದು ಗಿಲ್ಲಿ ನಟ ಒಪ್ಪಿಕೊಂಡಿದ್ದಕ್ಕೆ ಲಕ್ಷುರಿ ಬಜೆಟ್‌ ನೀಡಿದ್ದರು. ಮಟನ್‌, ಚಿಕನ್‌, ಬ್ರೆಡ್‌, ಪನೀರ್‌, ತುಪ್ಪ ಎಲ್ಲವನ್ನು ನೀಡಿದ್ದರು. ಅಶ್ವಿನಿ ಗೌಡ, ರಜತ್‌, ಗಿಲ್ಲಿ ನಟ ಸೇರಿಕೊಂಡು ಕಬಾಬ್‌, ಚಿಕನ್‌ ಬಿರಿಯಾನಿ ಮಾಡಿದ್ದರು. ಎಲ್ಲರೂ ತಿಂದರೂ ಕೂಡ ಗಿಲ್ಲಿ ನಟ ಮಾತ್ರ ತಿನ್ನಲೇ ಇಲ್ಲ. 

66
ಚಿಕನ್‌ ಬಿರಿಯಾನಿ ಮುಟ್ಟಲಿಲ್ಲ

ಎಲ್ಲರೂ ಎಷ್ಟೇ ಹೇಳಿದರೂ ಕೂಡ ರಾತ್ರಿ ತಿನ್ನುವೆ ಎಂದು ಹೇಳಿ ಸುಮ್ಮನಾಗಿದ್ದಾರೆ, ನೀನು ತಿಂದಿಲ್ಲ ಅಂದ್ರೆ ನಾನು ತಿನ್ನುವೆ ಎನ್ನುತ್ತಿದ್ದ ರಘುಗೆ ಕೂಡ ಬೇಡ ಎಂದಿದ್ದಾರೆ. ಕೊನೆಗೂ ಅವರು ತಾನೂ ತಿನ್ನದೆ, ರ‍ಘುಗೂ ಕೂಡ ಬಿರಿಯಾನಿ ತಿನ್ನೋಕೆ ಬಿಡಲಿಲ್ಲ.

Read more Photos on
click me!

Recommended Stories