Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​

Published : Dec 10, 2025, 11:12 PM IST

ಮಾಜಿ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಬಿಗ್ ಬಾಸ್ ಮನೆಯೊಳಗಿನ ಹಲವು ಗುಟ್ಟುಗಳನ್ನು ಬಹಿರಂಗಪಡಿಸಿದ್ದಾರೆ. ಸಮಯ ತಿಳಿಯದಂತೆ ಇರುವುದು, 24/7 ಲೈಟಿಂಗ್, ವಿಪರೀತ ಎಸಿ, ಸೀಮಿತ ಆಹಾರ ಮತ್ತು ಕ್ಯಾಮೆರಾದ ಮುಂದೆಯೇ ಸಮಸ್ಯೆ ಹೇಳಿಕೊಳ್ಳುವಂತಹ ನಿಯಮಗಳ ಬಗ್ಗೆ ಅವರು ವಿವರಿಸಿದ್ದಾರೆ.

PREV
18
ಸಿಕ್ಕಾಪಟ್ಟೆ ಪ್ರಶ್ನೆ

ಬಿಗ್​ಬಾಸ್​ (Bigg Boss) ಎಂದರೆ ಅದರ ಕೋಟ್ಯಂತರ ವೀಕ್ಷಕರಿಗೆ ಸಿಕ್ಕಾಪಟ್ಟೆ ಪ್ರಶ್ನೆಗಳು ಇರುವುದು ಸಹಜ. ಬಿಗ್​ಬಾಸ್​ ಎನ್ನುವುದು ಸ್ಕ್ರಿಪ್ಟೆಡ್, ಅಲ್ಲಿ ಏನು ಮಾಡಬೇಕು, ಏನು ಮಾತನಾಡಬೇಕು, ಹೇಗೆ ಜಗಳ ಮಾಡಬೇಕು ಎಲ್ಲವನ್ನೂ ಮೊದಲೇ ಹೇಳಿರುತ್ತಾರೆ ಎನ್ನುವ ಸಾಮಾನ್ಯ ಮಾತುಗಳು ಇದ್ದರೂ, ಅದನ್ನು ಕೆಲವು ಸ್ಪರ್ಧಿಗಳು ಅಲ್ಲಗಳೆದಿದ್ದಾರೆ. ಇದರ ಹೊರತಾಗಿಯೂ ಬಿಗ್​ಬಾಸ್​ ಮನೆಯ ಬಗ್ಗೆ ಹಲವಾರು ಪ್ರಶ್ನೆಗಳು ಇದ್ದೇ ಇರುತ್ತವೆ.

28
ಗುಟ್ಟು ಹೇಳಿದ ಅಭಿಷೇಕ್​

ಇದೀಗ ಬಿಗ್​ಬಾಸ್​​ ಮನೆಯ ಬಗ್ಗೆ ಇದುವರೆಗಿನ ಸ್ಪರ್ಧಿಗಳು ಹೆಚ್ಚಾಗಿ ಯಾರೂ ಹೇಳದ ಗುಟ್ಟುಗಳನ್ನು ಅಭಿಷೇಕ್​ ಶ್ರೀಕಾಂತ್​ (Bigg Boss Abhishek Shrikanth) ಹೇಳಿದ್ದಾರೆ. ಅವರು ಹೇಳಿರುವುದು ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳು ಹೇಗೆ ಇರುತ್ತಾರೆ ಎನ್ನುವುದು.

38
ಮುಖ ನೋಡುವಂತಿಲ್ಲ

ಅಲ್ಲಿರುವ ಸ್ಪರ್ಧಿಗಳನ್ನು ಬಿಟ್ಟರೆ ಯಾರ ಮುಖವನ್ನೂ ನೋಡುವ ಅವಕಾಶ ಇರುವುದಿಲ್ಲ. ಚಿತ್ರದ ಪ್ರೊಮೋಷನ್​ ಅಥವಾ ಇನ್ನಾರಾದರೂ ಬಂದರೆ ನಮಗೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆ, ದೇವರು ಬಂದ ಹಾಗೆ ಆಗುತ್ತದೆ ಎಂದಿದ್ದಾರೆ.

48
ಟೈಮ್​ ಕಾಣಿಸಲ್ಲ

ಬಿಗ್​ಬಾಸ್​ನಲ್ಲಿ ನಮಗೆ ಟೈಮ್​ ನೋಡುವ ಅವಕಾಶವೂ ಇರುವುದಿಲ್ಲ. ಅದಕ್ಕಾಗಿ ರಾತ್ರಿ- ಹಗಲು ಏನೂ ಗೊತ್ತಾಗುವುದಿಲ್ಲ. ಟೈಮ್​ ಎಷ್ಟಾಯಿತು ಎಂದು ನೆರಳು ನೋಡಿ ಅಂದಾಜು ಮಾಡಬೇಕು ಅಷ್ಟೇ ಎಂದಿದ್ದಾರೆ.

58
ಕರೆಂಟ್​ ಆನ್​

24 ಗಂಟೆಯೂ ಕರೆಂಟ್​ ಆನ್​ ಇರುತ್ತದೆ. ಆದ್ದರಿಂದ ಯಾವಾಗ ಏನು ಆಗತ್ತೆ, ಸಮಯ ಎಷ್ಟು ಏನೂ ತಿಳಿಯುವುದಿಲ್ಲ ಎಂದು ಅಭಿಷೇಕ್​ ಹೇಳಿದ್ದಾರೆ. ಲಿವಿಂಗ್​ ರೂಮ್​ಗೆ ಕರೆದಾಗ ಮೊದಲ 20 ನಿಮಿಷ ಮೌನವಾಗಿ ಇರಬೇಕು. ಆಗ ಮಾತನಾಡುವಂತಿಲ್ಲ. ಹೀಗೆ ತುಂಬಾ ರೂಲ್ಸ್​ ಇರುತ್ತವೆ ಎಂದಿದ್ದಾರೆ.

68
ವಿಪರೀತ ಎಸಿ

ಯಾವುದಾದರೂ ಟಾಸ್ಕ್​ ಕೊಟ್ಟಾಗ ಅದನ್ನು ಸೆಟಪ್​ ಮಾಡು ಮೂರ್ನಾಲ್ಕು ಗಂಟೆ ಇರುತ್ತದೆ. ವಿಪರೀತ ಎಸಿ ರೂಮ್​ ಬೇರೆ. ಸಿಕ್ಕಾಪಟ್ಟೆ ಕ್ಯಾಮೆರಾ ಇರುವ ಕಾರಣ ಹೀಟ್​ ಆಗಬಾರದು ಎಂದು ಎಸಿ ಇಟ್ಟಿರುತ್ತಾರೆ. ಅಂಥ ವಾತಾವರಣದಲ್ಲಿ ಸ್ಪರ್ಧಿಗಳು ಇರಬೇಕು ಎಂದಿದ್ದಾರೆ.

78
ಊಟ ಸಿಗಲ್ಲ- ಬಟ್ಟೆ ಹೇಗೆ

ನಮಗೆ ಬೇಕಾದಷ್ಟು ಊಟ ಎಲ್ಲಾ ಸಿಗಲ್ಲ. ವಾರಕ್ಕೆ ಆಗುವಷ್ಟು ಗ್ರಾಸರಿ ಕೊಟ್ಟಿರುತ್ತಾರೆ. ಅದರಲ್ಲಿಯೂ ಅಡ್ಜಸ್ಟ್​ ಮಾಡಬೇಕು. ನಮ್ಮ ಬಟ್ಟೆಗಳನ್ನು ತೆಗೆದುಕೊಂಡು ಹೋಗಲು ನಮ್ಮ ಹೆಸರಿಗೆ ಬಾಸ್ಕೆಟ್​ ಪ್ರತಿ ಶುಕ್ರವಾರ ಬರುತ್ತದೆ. ಜನರು ಬರಲ್ಲ. ನಂತರ ಸೋಮವಾರ ಬಟ್ಟೆ ವಾಪಸ್​ ಬರುತ್ತದೆ ಎಂದಿದ್ದಾರೆ.

88
ಕ್ಯಾಮೆರಾ ಮುಂದೆ ಸಮಸ್ಯೆ

ನಮಗೆ ಏನೇ ಸಮಸ್ಯೆ ಆದರೂ ಕ್ಯಾಮೆರಾ ಮುಂದೆ ಹೇಳಬೇಕು. ಏನಾದರೂ ತುರ್ತು ಇದ್ದರೆ ಅಲ್ಲಿಯೇ ಹೇಳಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಿದ್ದಾರೆ.

Read more Photos on
click me!

Recommended Stories