BBK 12 Episode Update: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ವಯಸ್ಸಿನ ಬಗ್ಗೆ ದೊಡ್ಡ ಚರ್ಚೆ ಆಗಿದೆ. ಆರಂಭದ ವೀಕೆಂಡ್ ಎಪಿಸೋಡ್‌ನಲ್ಲಿ ಚೈತ್ರಾ ಕುಂದಾಪುರ ವಯಸ್ಸಿನ ಬಗ್ಗೆ ಗಿಲ್ಲಿ ನಟ ಕಾಮಿಡಿ ಮಾಡಿದ್ದರು. ಅದನ್ನು ಚೈತ್ರಾ ಪ್ರಶ್ನೆ ಮಾಡಿದ್ದಾರೆ.
ಈ ವಾರ ಯಾರು ಉತ್ತಮ? ಯಾರು ಕಳಪೆ? ಎಂಬ ಚರ್ಚೆ ಆಗಿದೆ. ಬಹುತೇಕರು ಗಿಲ್ಲಿ ನಟನಿಗೆ ಕಳಪೆ ಕೊಟ್ಟಿದ್ದಾರೆ. ಗಿಲ್ಲಿ ನಟ ಅವರು ಖಾಸಗಿಯಾಗಿ, ವೈಯಕ್ತಿಕವಾಗಿ ಕಾಮೆಂಟ್ ಮಾಡುತ್ತಾರೆ, ಮನಸ್ಸು ನೋವು ಮಾಡುತ್ತಾರೆ ಎಂಬ ಆರೋಪ ಇದೆ.
25
ಗಿಲ್ಲಿ ನಟ ಬಾಡಿ ಶೇಮಿಂಗ್ ಮಾಡುತ್ತಾನೆ
ಗಿಲ್ಲಿ ನಟ ಅವರು ಬಾಡಿ ಶೇಮಿಂಗ್ ಮಾಡುತ್ತಾನೆ, ಬೇರೆಯವರನ್ನು ಕೆಳಗಡೆ ಹಾಕಿ ಮಾತನಾಡುತ್ತಾನೆ, ತೇಜೋವಧೆ ಮಾಡುತ್ತಾನೆ ಎಂದು ಅಶ್ವಿನಿ ಗೌಡ, ಧ್ರುವಂತ್, ಜಾನ್ವಿ, ರಘು, ಅಭಿಷೇಕ್ ಶ್ರೀಕಾಂತ್, ಧನುಷ್ ಗೌಡ, ಸ್ಪಂದನಾ ಸೋಮಣ್ಣ ಕೂಡ ವಿರೋಧ ಮಾಡಿದ್ದರು.
35
ಚೈತ್ರಾ ಅಕ್ಕ ಅಜ್ಜಿ ಅಲ್ಲ
ಚೈತ್ರಾ ಕುಂದಾಪುರ ಅವರು ಗಿಲ್ಲಿ ನಟನ ಮನೆಗೆ ಫೋನ್ ಮಾಡಿ ಎಂದು ಸುದೀಪ್ ಹೇಳಿದ್ದರು. ಆಗ ಚೈತ್ರಾ ಅವರು, “ಗಿಲ್ಲಿ ಈಗ ಏನು ಮಾತನಾಡಬೇಕು ಅಂತ ಗೊತ್ತಾಗದೆ ಸುಮ್ಮನಿದ್ದಾನೆ” ಎಂದು ಹೇಳಿದ್ದರು. ಆಗ ಗಿಲ್ಲಿ ನಟ ಅವರು, “ಚೈತ್ರಾ ಅಕ್ಕ ಅಜ್ಜಿ ಅಲ್ಲ, ಮಲ್ಲಮ್ಮ ಅಲ್ಲ” ಎಂದು ಹೇಳುತ್ತಾರೆ. ಇದೇ ವಿಚಾರ ಚೈತ್ರಾಗೆ ಬೇಸರ ತರಿಸಿದೆ.
ಚೈತ್ರಾ ಕುಂದಾಪುರ ಅವರು ಇದು ತಪ್ಪು ಎಂದು ಹೇಳಿದ್ದರು. ಆಗ ಗಿಲ್ಲಿ ಕ್ಷಮೆ ಕೇಳಿ ಸುಮ್ಮನಾಗಿದ್ದರು. ಚೈತ್ರಾ ಕುಂದಾಪುರ ಅವರು ಆಮೇಲೆ ಗಾರ್ಡನ್ ಏರಿಯಾ ಬಳಿ ಮಾತನಾಡುವಾಗ, “ವಯಸ್ಸಾದವರು ಮಾತನಾಡುತ್ತಿದ್ದಾರೆ” ಎಂದಿದ್ದಾರೆ. ಪದೇ ಪದೇ ನನ್ನ ವಯಸ್ಸಿನ ಬಗ್ಗೆ ಮಾತನಾಡುತ್ತಾರೆ, ನನ್ನ ವಯಸ್ಸಿನ ವಿಷಯ ಇವರಿಗೆ ಯಾಕೆ? ನನ್ನ ಕುಟುಂಬಕ್ಕೆ ಸಮಸ್ಯೆ ಆಗಬೇಕು ಎಂದು ಹೇಳಿದ್ದಾರೆ.
55
ಚೈತ್ರಾ ಕುಂದಾಪುರ ವಯಸ್ಸು ಎಷ್ಟು?
ಅಂದಹಾಗೆ ಈಗ ಚೈತ್ರಾ ಕುಂದಾಪುರ ಅವರಿಗೆ ಈಗ 27 ವರ್ಷ ವಯಸ್ಸು ಎನ್ನಲಾಗ್ತಿದೆ. ಇನ್ನು ಗಿಲ್ಲಿ ನಟ ಅವರಿಗೆ 29 ವರ್ಷ ವಯಸ್ಸು ಎನ್ನಲಾಗ್ತಿದೆ. ಹೊರಗಡೆ ಸಂದರ್ಶನವೊಂದರಲ್ಲಿ ಗಿಲ್ಲಿ ವಯಸ್ಸಿನ ಬಗ್ಗೆ ಪ್ರಶ್ನೆ ಬಂದಾಗ, ಅವರ ಅಣ್ಣ ಏನೂ ಕೂಡ ಹೇಳಿರಲಿಲ್ಲ.