BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?

Published : Dec 06, 2025, 09:46 AM IST

BBK 12 Updates: ಬಿಗ್‌ ಬಾಸ್‌ ಮನೆಯಲ್ಲಿ ಒಂದು ಸೇಬು ಹಣ್ಣಿನ ವಿಚಾರಕ್ಕೆ ಜಗಳ ಆಗುವುದು. ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ ಆಗುತ್ತಿದೆ. ಈಗ ಪದೇ ಪದೇ ಜಗಳ ಆಗುತ್ತಿದೆ. ಈಗ ಮತ್ತೆ ಊಟದ ವಿಚಾರಕ್ಕೆ ಜಗಳ ಆಗಿದೆ. ಪ್ರೋಮೋ ರಿಲೀಸ್‌ ಆಗಿದೆ.

PREV
15
ಇವರಿಗೆಲ್ಲ ತಿನಿಸೋದಿಕ್ಕೆ ನಮಗೆ ತೆವಲು?

ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ ಅವರು ಆಲೂಗಡ್ಡೆಯನ್ನು ಇಷ್ಟಿಷ್ಟು ಅಂತ ಶೇರ್‌ ಮಾಡ್ಕೊಳ್ಳಿ ಎಂದು ಹೇಳಿದ್ದಾರೆ. ಇದಾದ ಬಳಿಕ ಜಗಳ ಆಗಿದೆ. ಅಕ್ಕಿಯನ್ನು ಕೂಡ ಪಾಲು ಮಾಡಿಕೊಳ್ಳಿ ಎಂದು ರಜತ್‌ ಅವರು ಕೌಂಟರ್‌ ಕೊಟ್ಟಿದ್ದಾರೆ.

ಇವರಿಗೆಲ್ಲ ತಿನಿಸೋದಿಕ್ಕೆ ನಮಗೆ ತೆವಲು? ಎಂದು ರಘು ಹೇಳಿದ್ದಾರೆ. ಆಗ ಅಶ್ವಿನಿ ಸಿಟ್ಟಾಗಿದ್ದು, “ನಿಮಗೆ ಆಗೋದಿಲ್ಲ ಎಂದರೆ ಬಿಟ್ಟು ಬಿಡಿ” ಎಂದು ಹೇಳಿದ್ದಾರೆ.

25
ಯಾಕೆ ಎಲ್ಲದಕ್ಕೂ ಬರ್ತೀರಾ

“ನೀವು ಯಾಕೆ ಎಲ್ಲದಕ್ಕೂ ಬರ್ತೀರಾ?” ಎಂದು ರಘು ಅವರು ಕೂಗಾಡಿದ್ದಾರೆ. ಒಟ್ಟಿನಲ್ಲಿ ಅಶ್ವಿನಿ ಗೌಡ, ರಘು, ರಜತ್‌ ಮಧ್ಯೆ ಜಗಳ ಆಗಿದೆ. ನನಗೆ ಬೇಕು ಅಂದರೆ ತಿಂತೀನಿ, ಅವರಿಗೆ ಬೇಕು ಅಂದರೆ ಅವರು ತಿಂತಾರೆ. ನಮ್ಮ ಪಾಲು ತಿನ್ನುತ್ತಿದ್ದೀರಾ? ನಮಗೆ ತೆವಲಾ? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ದೊಡ್ಡ ಜಗಳ ಆಗಿದೆ. ಈ ಜಗಳದ ಮಧ್ಯೆ ಈ ವಾರ ಯಾರು ಹೊರಗಡೆ ಬರ್ತಾರೆ ಎಂದು ಕಾದು ನೋಡಬೇಕಿದೆ.

35
ಕಾಮೆಂಟ್‌ ಮಾಡಿರುವ ವೀಕ್ಷಕರು

ಈ ಪ್ರೋಮೋಗೆ ಅನೇಕರು ಕಾಮೆಂಟ್‌ ಮಾಡಿದ್ದಾರೆ. ನಿನ್ನೆ ಎಪಿಸೋಡ್ ನೋಡಿದ ಮೇಲೆ ಗಿಲ್ಲಿ ಅಶ್ವಿನಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾನೆ ಅಂತ ಅನಿಸಿತು. ಹುಲಿ ಬೋನಲ್ಲಿ ಇದೆ, ನರಿಗಳಿಗೆ ಕಂಟೆಂಟ್ ಇಲ್ಲ ಕಿತಾಡ್ತಿದಾವೆ. ರಘು ಅವರದು ಸ್ವಲ್ಪ ಜಾಸ್ತಿ ಆಗಿದೆ ಅಲ್ವಾ? ಎಂದು ಕಾಮೆಂಟ್‌ ಮಾಡಿದ್ದಾರೆ.

45
ಜೈಲಿಗೆ ಹೋದ ಗಿಲ್ಲಿ ನಟ

ಅಂದಹಾಗೆ ಗಿಲ್ಲಿ ನಟ ಅವರು ಕಳಪೆ ತಗೊಂಡು, ಜೈಲಿಗೆ ಹೋಗಿದ್ದಾರೆ. ಅನೇಕರು ಗಿಲ್ಲಿಗೆ ಕಳಪೆ ಕೊಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಬೇಸರ ವ್ಯಕ್ತವಾಗಿದೆ.

55
ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿರೋರು ಔಟ್

ಅಂದಹಾಗೆ ರಜತ್‌, ಚೈತ್ರಾ ಕುಂದಾಪುರ ಅವರು ವೈಲ್ಡ್‌ಕಾರ್ಡ್‌ ಎಂಟ್ರಿ ನೀಡಿದ್ದಾರೆ. ಇವರು ಈ ವಾರ ಮನೆಯಿಂದ ಹೊರಗಡೆ ಬರುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಇವರಿಬ್ಬರು ಸ್ಪರ್ಧಿಗಳಲ್ಲ, ಅತಿಥಿಗಳು ಎಂದು ಕೂಡ ಹೇಳಲಾಗುತ್ತಿದೆ.

Read more Photos on
click me!

Recommended Stories