BBK 12: ನೀವು ನನ್ನಂಥವ್ರನ್ನ ನೋಡಿರಲ್ಲ; Ashwini Gowda ಮರು ಮಾತನಾಡದಂತೆ ಮಾಡಿದ ಗಿಲ್ಲಿ ನಟ!

Published : Nov 21, 2025, 09:29 AM IST

Bigg Boss ಮನೇಲಿ ಈ ವಾರವಂತೂ ಒಂದಲ್ಲ ಒಂದು ಜಗಳ ಆಗಿದೆ. ರಘು, ಅಶ್ವಿನಿಗೆ ಗೌಡಗೆ ಅಶ್ವಿನಿ ಎಂದಿದ್ದರು. ಇದರಿಂದ ದೊಡ್ಡ ಜಗಳ ಆಗಿದೆ. ಕ್ಯಾಪ್ಟನ್ಸಿ ಟಾಸ್ಕ್‌ ಇದ್ದು, ನಾನು ಆಡಬೇಕು ಎಂದು ಎಲ್ಲರೂ ಮುಗಿಬಿದ್ದಿದ್ದರು. ಕ್ಯಾಪ್ಟನ್‌ ಆದರೆ 1 ವಾರದ ಎಲಿಮಿನೇಶನ್‌ನಿಂದ ಇಮ್ಯುನಿಟಿ ಸಿಗುತ್ತದೆ. 

PREV
16
ಕ್ಯಾಪ್ಟನ್ಸಿ ಟಾಸ್ಕ್‌ ಯಾರು ಆಡ್ತಾರೆ?

ಹನ್ನೆರಡು ನಿಮಿಷದಲ್ಲಿ ಗಂಟೆ ಬಾರಿಸುವ ಅಭ್ಯರ್ಥಿ ಕ್ಯಾಪ್ಟನ್‌ ಆಗುತ್ತಾರೆ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಮಾತಿನಲ್ಲಿ ಗೆಲ್ಲುವ ಟಾಸ್ಕ್‌ ಇದಾಗಿತ್ತು. ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಧ್ರುವಂತ್‌, ಅಶ್ವಿನಿ ಗೌಡ, ರಕ್ಷಿತಾ, ಅಭಿಷೇಕ್‌ ಶ್ರೀಕಾಂತ್‌ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಆಡಿದ್ದಾರೆ.

26
ಸ್ಟ್ಯಾಂಡ್‌ ತಗೊಂಡ ಗಿಲ್ಲಿ ನಟ

ಅಶ್ವಿನಿ ಗೌಡ, ಗಿಲ್ಲಿ ನಟ ಅವರು ಮುಖಾಮುಖಿಯಾಗಿದ್ದು, ಈ ಬಾರಿ ಮಾತಿನ ಪ್ರಹಾರವೇ ನಡೆದಿದೆ. ಗಿಲ್ಲಿ ನಟ ಅಂತೂ ಮಾತಿನಲ್ಲಿ ಸರಿಯಾಗಿ ಠಕ್ಕರ್‌ ಕೊಟ್ಟಿದ್ದಾರೆ. ಟೇಬಲ್‌ ಮೇಲೆ ಕಾಲಿಟ್ಟು ಅವರು ಸ್ಟ್ಯಾಂಡ್‌ ತಗೊಂಡಿದ್ದಾರೆ.

36
ಗಿಲ್ಲಿ ನಟ ವಾದ ಏನು?

“ಗೇಟ್‌ ಹತ್ತಿರ ಬಂದು, ಮನೆಗೆ ಹೋಗ್ತೀನಿ, ಮನೆಗೆ ಹೋಗ್ತೀನಿ ಎಂದು ಹೇಳಿದ್ರಿ. ನಿಮ್ಮನ್ನು ನಾವು ಇಟ್ಟುಕೊಂಡಿದ್ದೀವಾ? ಹೋಗಿ, ಯಾರು ಬೇಡ ಅಂದ್ರು. ರಘು ಅಣ್ಣ ನಿಮ್ಮನ್ನು ಅಶ್ವಿನಿ ಅಂತ ಕರೆಯದೆ, ಆಶು ಅಂತ ಕರೆಯಬೇಕಿತ್ತಾ? ಏ ಅಂತ ನಿಮ್ಮ ಇನಿಶಿಯಲ್‌ ಇದ್ದಿದ್ರೆ ಏ ಅಶ್ವಿನಿ ಮೇಡಂ ಅಂತ ಕರೆಯುತ್ತಿದ್ದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.

46
ನನ್ನನ್ನು ನೋಡಿರಲ್ಲ

“ನಿನ್ನಂಥವರನ್ನು ಎಷ್ಟು ಜನರನ್ನು ನಾನು ನೋಡಿಲ್ಲ?” ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ನನ್ನನ್ನು ನೋಡಿರಲ್ಲ” ಎಂದು ಹೇಳಿದ್ದಾರೆ. ಈ ವಾರ ಯಾರು ಕ್ಯಾಪ್ಟನ್‌ ಆಗುತ್ತಾರೆ ಎಂದು ಕಾದು ನೋಡಬೇಕಿದೆ.

56
ಗಿಲ್ಲಿ ನಟ ಕಾಮಿಡಿ

ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಹೋಗ್ತೀನಿ ಎಂದು ಅಶ್ವಿನಿ ಹೇಳುತ್ತಿದ್ದರು. ಆಗ ಗಿಲ್ಲಿ ನಟ ಅವರು, “ಬಾಗಿಲು ಒಪನ್‌ ಆಗಬೇಕಿತ್ತು, ನಾನೇ ತಳ್ಳಿಬಿಡುತ್ತಿದ್ದೆ” ಎಂದು ಹೇಳಿದ್ದಾರೆ. 

66
ಊಟ ಬಿಟ್ರು

ರಘು ಹಾಗೆ ಮಾತಾಡಿದರು ಎಂದು ಅಶ್ವಿನಿ ಗೌಡ ಅವರು ಉಪವಾಸ ಸತ್ಯಾಗ್ರಹ ಮಾಡಿದ್ದರು. ಅದನ್ನು ಹೇಗೆ ಮುರಿದರು ಎಂಬ ಬಗ್ಗೆ ಮಾಹಿತಿ ಇಲ್ಲ. ಬಿಗ್‌ ಬಾಸ್‌ ಪ್ರವೇಶ ಮಾಡಿ ಮಾತನಾಡಬೇಕು ಎನ್ನೋದು ಅಶ್ವಿನಿ ವಾದ ಆಗಿತ್ತು. 

Read more Photos on
click me!

Recommended Stories