ಅಮೃತಧಾರೆ ಧಾರಾವಾಹಿಯಲ್ಲಿ ಅತ್ತ ಗೌತಮ್ ಕಡೆಗೆ ಭೂಮಿ ಮನಸ್ಸು ವಾಲುತ್ತಿದೆ. ತಾನಿಲ್ಲದೆ ಗೌತಮ್ ಖುಷಿಯಾಗಿಲ್ಲ ಎನ್ನೋದು ಅವಳಿಗೆ ಅರ್ಥ ಆಗಿದೆ. ಇನ್ನು ಗೌತಮ್ ತನ್ನ ತಂದೆ ಎಂದು ಆಕಾಶ್‌ಗೂ ಗೊತ್ತಾಗಿದೆ, ಅವನೀಗ ತಂದೆಗೆ ಹತ್ತಿರ ಆಗುತ್ತಿದ್ದಾನೆ. ಆದರೆ ಜಯದೇವ್‌ಗೆ ಕಷ್ಟ ಶುರುವಾಗಿದೆ.
ಗೌತಮ್ ತನ್ನೆಲ್ಲ ಆಸ್ತಿಯನ್ನು ಜಯದೇವ್-ಶಕುಂತಲಾಗೆ ಕೊಟ್ಟು ಬಂದಿದ್ದನು. ಆದರೆ ಆ ಆಸ್ತಿಯೆಲ್ಲವೂ ಭೂಮಿಕಾ ಹಾಗೂ ಅವಳ ಮಗುಗೆ ಸೇರಬೇಕು. ಹೀಗಾಗಿ ಅದನ್ನು ಅನುಭವಿಸೋ ಹಕ್ಕು ಇಲ್ಲ. ಅಷ್ಟೇ ಅಲ್ಲದೆ 600 ಕೋಟಿ ರೂಪಾಯಿ ಸಾಲ ಕೂಡ ಇದೆ. ಗೌತಮ್ ಆಸ್ತಿಯನ್ನು ಇವರು ಮಾರಾಟ ಮಾಡಿ ಸಾಲ ತೀರಿಸೋಕೆ ಆಗೋದಿಲ್ಲ.
27
ಜಯದೇವ್ ಸಾಯ್ತಾನಾ?
ಶಕುಂತಲಾ ನಿತ್ಯವೂ ಕ್ಲಬ್‌ಗೆ ಹೋಗಿ ಕೋಟಿ ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದ್ದಾಳೆ. ಇದನ್ನು ದಿಯಾ ತಡೆಯೋಕೆ ಪ್ಲ್ಯಾನ್ ಮಾಡಿದರೂ ಕೂಡ ಏನೂ ಪ್ರಯೋಜನವಾಗುತ್ತಿಲ್ಲ. ಮಲ್ಲಿಗೆ ಜಯದೇವ್ ಡಿವೋರ್ಸ್ ಕೊಡ್ತಿಲ್ಲ ಎಂದು ಅವಳಿಗೆ ಅನಿಸಿದರೂ ಕೂಡ ಏನೂ ಮಾಡೋಕೆ ಆಗ್ತಿಲ್ಲ. ದಿಯಾ ಪೊಸೆಸ್ಸಿವ್‌ನೆಸ್, ಜಗಳ ನೋಡಿ ಜಯದೇವ್ ಅವಳಿಗೆ ಹೊಡೆದು, ಬೈದಿದ್ದಾನೆ. ಜಯದೇವ್‌ನನ್ನು ಬುಟ್ಟಿಗೆ ಹಾಕ್ಕೊಂಡು, ಅವನನ್ನು ಮುಗಿಸಬೇಕು ಎಂದು ದಿಯಾ ಪ್ಲ್ಯಾನ್ ಮಾಡಿದ್ದಾಳೆ.
37
ಕಾರ್ಡ್ ಬ್ಲಾಕ್ ಆಯ್ತು
ದಿಯಾಗೆ ಏನಾದರೂ ಕೊಡಿಸೋಣ ಎಂದು ಶಾಪ್‌ಗೆ ಕರೆದುಕೊಂಡು ಹೋದಾಗ, ಜಯದೇವ್ ಡೆಬಿಟ್ ಕಾರ್ಡ್‌ನಲ್ಲಿ ಹಣ ಇಲ್ಲ ಎಂದು ಅವರು ಹೇಳಿದ್ದಾರೆ. ಸತ್ಯ ಏನೆಂದರೆ ಬ್ಯಾಂಕ್‌ನವರೇ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಿದ್ದರು. ಇದು ಜಯದೇವ್‌ಗೆ ಸಿಟ್ಟು ತಂದಿದೆ.
ಮಲ್ಲಿ ಎಲ್ಲಿದ್ದಾಳೆ ಎಂದು ಜಯದೇವ್ ಕಂಡು ಹಿಡಿದಿದ್ದಾನೆ, ಈಗ ಗೌತಮ್-ಭೂಮಿಕಾ ಎಲ್ಲಿದ್ದಾಳೆ ಎಂದು ಕಂಡುಹಿಡಿದು ಅವರನ್ನು ಮಟ್ಟ ಹಾಕಬೇಕು ಎಂದು ಪ್ಲ್ಯಾನ್ ಮಾಡಬಹುದು. ಮಕ್ಕಳಿಗೆ, ಭೂಮಿಕಾಗೆ ಏನಾದರೂ ಮಾಡ್ತಾರೆ ಎಂದು ಗೌತಮ್, ಆಸ್ತಿಯನ್ನು ಅವರಿಗೆ ಒಪ್ಪಿಸುತ್ತಾನಾ? ಬ್ಯಾಂಕ್‌ನವರಿಗೆ ಹೇಳಿ ಸಾಲ ತೀರಿಸಲು ಟೈಮ್ ಕೇಳುತ್ತಾನಾ? ಅಥವಾ ಇಷ್ಟೆಲ್ಲ ಮಾಡಿದ ಜಯದೇವ್‌ನನ್ನು ಬೀದಿಗೆ ತರುತ್ತಾನಾ ಎಂದು ಕಾದು ನೋಡಬೇಕಿದೆ.
57
ಭೂಮಿ ಒಪ್ಪಿಕೊಳ್ತಾಳಾ?
ಇನ್ನೂ ಮಗನಿಗೆ ನಾನೇ ನಿನ್ನಪ್ಪ ಎಂದು ಗೌತಮ್ ಹೇಳಿಲ್ಲ. ಆದರೆ ಆಕಾಶ್‌ಗೆ ಸತ್ಯ ಗೊತ್ತಾಗಿದೆ. ಆದಷ್ಟು ಬೇಗ ಭೂಮಿಗೆ ಬುದ್ಧಿ ಬಂದು, ಅವಳು ಗೌತಮ್‌ನನ್ನು ಸೇರಿಕೊಂಡರೆ ಅಲ್ಲಿಗೆ ಅರ್ಧ ಸಮಸ್ಯೆ ಮುಗಿದಂತೆ. ಒಟ್ಟಿನಲ್ಲಿ ಮುಂಬರಲಿರುವ ಎಪಿಸೋಡ್‌ಗಳು ಏನಾಗಲಿವೆ ಎಂದು ಕಾದು ನೋಡಬೇಕಿದೆ.
67
ಗೌತಮ್ ಆಸೆ ಏನು?
ಭೂಮಿಗೆ ನನ್ನ ಮೇಲೆ ಲವ್ ಇದೆ, ಆದಷ್ಟು ಬೇಗ ಅವಳು ನನ್ನನ್ನು ಒಪ್ಪಿಕೊಳ್ತಾಳೆ, ನನ್ನ ಜೊತೆ ಬದುಕುತ್ತಾಳೆ ಎಂದು ಗೌತಮ್ ಅಂದುಕೊಂಡಿದ್ದಾನೆ. ಅವನ ಆಸೆ ಈಡೇರುತ್ತದಾ ಎಂದು ಕಾದು ನೋಡಬೇಕಿದೆ.
77
ಕುತಂತ್ರಿ ದಿಯಾ
ಮೋಸ ಮಾಡಿ ಜಯದೇವ್‌ನನ್ನು ಬುಟ್ಟಿಗೆ ಬೀಳಿಸಿಕೊಂಡಿರೋ ದಿಯಾ ಈಗ ಅವನನ್ನು ಮುಗಿಸೋ ಪ್ಲ್ಯಾನ್ ಮಾಡಿದ್ದಾಳೆ. ಇದು ಜಯದೇವ್‌ಗೆ ಗೊತ್ತಾಗಿಲ್ಲ. ಮುಂದೆ ದಿಯಾ ಏನು ಮಾಡುತ್ತಾಳೆ ಎನ್ನೋ ಪ್ರಶ್ನೆ ಎದ್ದಿದೆ.