BBK 12: ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಅತಿಥಿಯಾಗಿ ಬಂದಿದ್ದ ಸೀಸನ್ 11 ಸ್ಪರ್ಧಿ ರಜತ್, ಗಿಲ್ಲಿ ನಟನನ್ನು ಟಾರ್ಗೆಟ್ ಮಾಡಿದ್ದರು. ಹೊರಗಡೆ ಗಿಲ್ಲಿ ಇಷ್ಟ ಆಗುತ್ತಿದ್ದ, ಈಗ ಇರಿಟೇಟ್ ಅನಿಸಿದ ಎಂದು ಅವರು ಹೇಳಿದ್ದರು. ವೈಲ್ಡ್‌ಕಾರ್ಡ್ ಸ್ಪರ್ಧಿ ಎಂದು ಘೋಷಣೆಯಾದ ಬಳಿಕ ರಜತ್ ಬದಲಾದರು.
ರಜತ್ ಅವರು ಗಿಲ್ಲಿ ನಟನ ಕಾಮಿಡಿಗೆ ನಗಲು ಆರಂಭಿಸಿದರು. ಗಿಲ್ಲಿ ನಟನ ಜೊತೆ ಅವರು ಹೆಚ್ಚು ಹೊತ್ತು ಮಾತನಾಡಲು ಆರಂಭಿಸಿದರು. ಇದು ಮನೆಯಲ್ಲಿರುವ ಸ್ಪರ್ಧಿಗಳ ಗಮನಕ್ಕೆ ಬಂದು, ಅವರು ಕೂಡ ಇದನ್ನೇ ಪ್ರಶ್ನೆ ಮಾಡಿದ್ದರು. ಇಡೀ ಮನೆಯವರಿಗೆ ಒಬ್ಬ ವ್ಯಕ್ತಿಯನ್ನು ಕಂಟ್ರೋಲ್ ಮಾಡೋಕೆ ಆಗೋದಿಲ್ಲ ಎಂದಿದ್ದ ರಜತ್ ಅವರೇ ಗಿಲ್ಲಿ ನಟನ ಜೊತೆ ಇದ್ದಿದ್ದು ದೊಡ್ಡ ಪ್ರಶ್ನೆ ಆಗಿತ್ತು.
25
ಗಿಲ್ಲಿ ನಟ ಸ್ವೀಟ್ ಆಗಿದ್ದಾರೆ
ರಜತ್ ಅವರು “ಗಿಲ್ಲಿ ನಟ ಸ್ವೀಟ್ ಆಗಿದ್ದಾರೆ. ಅವನ ಜೊತೆ ಯಾರು ಹೇಗೆ ಮಾತನಾಡುತ್ತಾರೆ, ಹೇಗೆ ನಡೆದುಕೊಳ್ಳುತ್ತಾರೆ ಎನ್ನೋ ಆಧಾರದ ಮೇಲೆ ಅವರು ಇದ್ದಾರೆ. ನನಗೆ ಗಿಲ್ಲಿ ಜೊತೆ ಏನೂ ಸಮಸ್ಯೆ ಆಗಿಲ್ಲ, ಅವರ ಜೊತೆ ಇದ್ದೀನಿ” ಎಂದು ಸ್ಪಷ್ಟನೆ ನೀಡಿದ್ದಾರೆ.
35
ಕಪಾಳಕ್ಕೆ ಬಾರಿಸಿ ಹೇಳ್ತಿದ್ದೆ
ಟಾಸ್ಕ್‌ವೊಂದರಲ್ಲಿ ಉಳಿದವರು, ಗಿಲ್ಲಿ ನಟನ ಜೊತೆ ಇರೋದನ್ನು ಪ್ರಶ್ನೆ ಮಾಡಿದಾಗ ರಜತ್ ಅವರು, “ಗಿಲ್ಲಿ ಆ ರೀತಿ ಮಾಡಿದ್ರೆ ಕಪಾಳಕ್ಕೆ ಬಾರಿಸಿ ಹೇಳ್ತಿದ್ದೆ” ಎಂದಿದ್ದರು. ಇದನ್ನು ಗಿಲ್ಲಿ ನಟ ಖಂಡಿಸಿದ್ದರು. ಈಗ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ರಜತ್ ಹಾಗೂ ಗಿಲ್ಲಿ ನಟನ ಮಧ್ಯೆ ಜಗಳ ನಡೆದಿದ್ದು, ಪರಸ್ಪರ ಸವಾಲು ಹಾಕಿದ್ದಾರೆ.
ನಿಮ್ಮ ಪ್ರಕಾರ ಯಾರ ಪಾಪದ ಕೊಡ ತುಂಬಿದೆ? ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದರು. ಆಗ ಗಿಲ್ಲಿ ನಟ ಅವರು, “ರಜತ್ ಪಾಪದ ಕೊಡ ತುಂಬಿದೆ. ಮಾತು ಮಾತಿಗೂ ಯಾರಿಗೂ ಟಾಸ್ಕ್ ಬುಕ್ ಅರ್ಥ ಆಗೋದಿಲ್ಲ” ಎಂದಿದ್ದಾರೆ. ಆಗ ರಜತ್ ಅವರು, “ನಾನು ಟಾಸ್ಕ್ ಆಡೋರಿಗೆ ಈ ಮಾತು ಹೇಳಿದೆ, ಗಿಲ್ಲಿ ಟಾಸ್ಕ್ ಆಡೋದಿಲ್ಲ” ಎಂದಿದ್ದಾರೆ.
55
ಸವಾಲ್ ಹಾಕಿದ ಗಿಲ್ಲಿ ನಟ
“ನಾನು ಹತ್ತು ಟಾಸ್ಕ್‌ನಲ್ಲಿ ಎಂಟು ಟಾಸ್ಕ್ ಗೆದ್ದಿದೀನಿ. ಮೊದಲ ಟಾಸ್ಕ್‌ನಲ್ಲಿ ಒಂದು ಬಾಲ್ ಹಾಕದೆ ಕೂರಲಿಲ್ಲ” ಎಂದು ಗಿಲ್ಲಿ ನಟ ಹೇಳಿದ್ದಾರೆ. “ನನಗೆ ಯಾರು ಈ ಮಾತು ಹೇಳಿದ್ದರೋ ಅವರನ್ನು ಮನೆಯಿಂದ ಆಚೆ ಹಾಕಿ, ನಾನು ಹೊರಗಡೆ ಕಾಲಿಡ್ತೀನಿ” ಎಂದು ರಜತ್ ಹೇಳಿದಾಗ, ಗಿಲ್ಲಿ ನಟ ಅವರು, “ನಾನು ಕೂಡ ರಜತ್ ಅವರನ್ನು ಹೊರಗಡೆ ಕಳಿಸಿ, ಹೊರಗಡೆ ಹೋಗ್ತೀನಿ” ಎಂದಿದ್ದಾರೆ.