Amruthadhaare: ಮರಿಡುಮ್ಮ ಅಂದ್ರೆ ಸುಮ್ನೇನಾ? ಅಪ್ಪನ ಬಾಯಿಂದ್ಲೇ ಸತ್ಯ ಹೇಗೆ ಹೊರತರಿಸಿದ ನೋಡಿ!

Published : Dec 13, 2025, 05:59 PM IST

ಅಮೃತಧಾರೆ ಧಾರಾವಾಹಿಯಲ್ಲಿ ಬೇರೆ ಬೇರೆಯಾಗಿದ್ದ ಗೌತಮ್ ಮತ್ತು ಭೂಮಿಕಾ ಒಂದಾಗುವ ಸಮಯ ಹತ್ತಿರವಾಗಿದೆ. ಭೂಮಿಕಾಳ ಹುಟ್ಟುಹಬ್ಬದ ಸಂಭ್ರಮದ ನಡುವೆ, ಆಕಾಶ್ ಮತ್ತು ಲವ್ ಅಜ್ಜಿಯ ಪ್ರಯತ್ನದಿಂದ ಈ ಜೋಡಿ ಮತ್ತೆ ಒಂದಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು, ಕಥೆ ಸುಖಾಂತ್ಯದತ್ತ ಸಾಗುತ್ತಿದೆ.

PREV
17
ಒಂದಾಗೋ ಕಾಲ

ಅಮೃತಧಾರೆ (Amruthadhaare Serial) ಇನ್ನೇನು ಮುಗಿಯುವ ಹಂತದಲ್ಲಿದೆ. ಬೇರೆ ಬೇರೆಯಾಗಿದ್ದ ಗೌತಮ್​ ಮತ್ತು ಭೂಮಿಕಾ ಒಂದಾಗುವ ಕಾಲ ಬಂದೇ ಬಿಟ್ಟಿದೆ. ಲವ್​ ಅಜ್ಜಿಯ ಎಂಟ್ರಿ ಆಗಿರೋ ಕಾರಣ, ಇವರಿಬ್ಬರೂ ಒಂದಾಗುವುದರಲ್ಲಿ ಸಂದೇಹವೇ ಇಲ್ಲ.

27
ನಾಟಕ ಮಾಡುವಲ್ಲಿ ಎತ್ತಿದ ಕೈ

ಅಷ್ಟಕ್ಕೂ ಇದಾಗಲೇ ಆಕಾಶ್​ ಮತ್ತು ಮಿಂಚು ಇಬ್ಬರಿಗೂ ಗೌತಮ್​ ಮತ್ತು ಭೂಮಿಕಾ ಸತ್ಯ ಗೊತ್ತಾಗಿದೆ. ಆಕಾಶ್​ಗೆ ಗೌತಮ್​ನೇ ತನ್ನ ಅಪ್ಪ ಅನ್ನೋದು ತಿಳಿದಿದ್ದರೂ ನಾಟಕ ಮಾಡುವಲ್ಲಿ ಎತ್ತಿದ ಕೈ ಅವನದ್ದು. ತನಗೆ ಸತ್ಯ ಗೊತ್ತು ಎನ್ನೋದನ್ನು ಇದುವರೆಗೆ ಬಾಯಿ ಬಿಟ್ಟಿಲ್ಲ. ಅದೇ ರೀತಿ ಮಿಂಚು ಕೂಡ.

37
ಭೂಮಿಕಾ ಹುಟ್ಟುಹಬ್ಬ

ಇದೀಗ ಭೂಮಿಕಾಳ ಹುಟ್ಟುಹಬ್ಬದ ಸಂಭ್ರಮ ನಡೆಯುತ್ತಿದೆ. ಇದೇ ವೇಳೆ ಇಬ್ಬರನ್ನೂ ಒಂದು ಮಾಡಲು ಎಲ್ಲರೂ ಪಣ ತೊಟ್ಟಿದ್ದಾರೆ.

47
ಅಪ್ಪನಿಂದ ಸತ್ಯ

ಇದೀಗ ಅಮ್ಮನಿಗೆ ಏನು ಇಷ್ಟ ಎನ್ನೋದನ್ನು ಅಪ್ಪನ ಬಾಯಿಯಿಂದ್ಲೇ ಕೇಳಿ ತಿಳಿಯುವ ಹಂಬಲ ಆಕಾಶ್​ಗೆ. ಆದರೆ ಗೌತಮ್​ ಅಷ್ಟು ಸುಲಭದಲ್ಲಿ ಹೇಳ್ತಾನಾ? ನಿನ್ನ ಮಮ್ಮಿ ನಿನಗೆ ಗೊತ್ತಿರಬೇಕು ಅಂದಿದ್ದಾನೆ..

57
ಆಕಾಶ್​ ಕಿತಾಪತಿ

ನಿಮ್ಮ ಹೆಂಡ್ತಿ ಆಗಿದ್ರೆ ಗೊತ್ತಿರುತ್ತಿತ್ತಲ್ಲ ಹೇಳಿ ಎಂದೆಲ್ಲಾ ಗೌತಮ್​ನ ಬಾಯಿ ಬಿಡಿಸೋಕೆ ಟ್ರೈ ಮಾಡಿದ್ದಾನೆ ಆಕಾಶ್​. ಆದ್ರೆ ಗೌತಮ್​ ಬಾಯಿ ಬಿಡಲಿಲ್ಲ.

67
ನಿಜ ಹೇಳಿದ ಗೌತಮ್​

ನನ್ನ ಅಮ್ಮನಿಗೆ ಸೀರೆ, ಮಲ್ಲಿಗೆ ಅಂದ್ರೆ ಇಷ್ಟ ಎಂದಿದ್ದಾನೆ. ಕೊನೆಗೆ ಕಾಫಿ ಎಂದಿದ್ದಾನೆ. ಆಗ ಗೌತಮ್​ ಸಡನ್​ ಆಗಿ ಹೌದು ಕಾಫಿಯ ಜೊತೆ ಪುಸ್ತಕ ಓದೋದು ಅಂದ್ರುನೂ ಇಷ್ಟ ಇರಬೇಕು ನೋಡು ಎಂದಿದ್ದಾನೆ. ಆಗ ಥಟ್​ ಅಂತ ಆಕಾಶ್​, ನಿಜ ನಿಜ.. ಹಾಗಿದ್ರೆ ಪುಸ್ತಕನೇ ಕೊಡ್ತೇನೆ ಎಂದಿದ್ದಾನೆ.

77
ಲವ್​ ಅಜ್ಜಿ ಪ್ಲ್ಯಾನ್​

ಅದೇ ಇನ್ನೊಂದೆಡೆ, ಗೌತಮ್​ ಅಜ್ಜಿ ದಂಪತಿಯನ್ನು ಒಂದು ಮಾಡುವ ನಿಟ್ಟಿನಲ್ಲಿ ಪ್ಲ್ಯಾನ್​ ಮಾಡಿದ್ದಾಳೆ. ತನ್ನ ಸ್ಥಿತಿ ಗಂಭೀರವಾಗಿದೆ ಎಂದು ಇಬ್ಬರಿಗೂ ಹೇಳಿ ಬರುವಂತೆ ಮಾಡಿಸಿದ್ದಾಳೆ. ಒಟ್ಟಿನಲ್ಲಿ ಎಲ್ಲವೂ ಶೀಘ್ರದಲ್ಲಿ ಸುಖಾಂತ್ಯವಾಗುವ ಸಾಧ್ಯತೆ ಇದೆ. 

Read more Photos on
click me!

Recommended Stories