ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮೊದಲ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ತಿಳಿದುಕೊಳ್ಳಲು ಇನ್ನು ಒಂದು ವಾರ ಇದೆ. ಈಗಾಗಲೇ ಎಲಿಮಿನೇಶನ್‌ಗೆ ಕೆಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಹಾಗಾದರೆ ಹೊರಬೀಳೋದು ಯಾರು?
ಈ ವಾರ ಆರ್‌ಜೆ ಅಮಿತ್ ಹಾಗೂ ಕರಿಬಸಪ್ಪ, ಧನುಷ್ ಗೌಡ, ಮಲ್ಲಮ್ಮ, ಗಿಲ್ಲಿ ನಟ ಹಾಗೂ ಕಾವ್ಯ ಶೈವ, ಅಭಿಷೇಕ್ ಶ್ರೀಕಾಂತ್-ಅಶ್ವಿನಿ ಅವರು ನಾಮಿನೇಟ್ ಆಗಿದ್ದರು.ಆ ಆದರೆ ಮಲ್ಲಮ್ಮ ತಮ್ಮ ಮುಗ್ಧತೆ, ಆಟದ ವೈಖರಿಯಿಂದ ವೀಕ್ಷಕರ ಮನಸ್ಸು ಗೆದ್ದು ಫಸ್ಟ್ ಸೇಫ್ ಆದ ಅಭ್ಯರ್ಥಿ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಮಲ್ಲಮ್ಮ ಕೂಡ ವೀಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
25
ಮೊದಲೇ ಸುಳಿವು ಕೊಟ್ಟಿದ್ದರು
ಕಿಚ್ಚ ಸುದೀಪ್ ಅವರು ಶೋ ಶುರುವಾಗುವ ಮುಂಚೆಯೇ ಒಂದು ಸುಳಿವು ನೀಡಿದ್ದರು. “ಈ ಸೀಸನ್ ಕಳೆದ ಸೀಸನ್ ಥರ ಇರೋದಿಲ್ಲ, ಏನೂ ಬೇಕಿದ್ರೂ ಆಗಬಹುದು, ಎರಡು ಫಿನಾಲೆ ಕೂಡ ಇರತ್ತಂತೆ ಹೇಳಲಾಗಿದೆ. ಇಷ್ಟು ಸೀಸನ್‌ಗಳದ್ದೇ ಒಂದು ಲೆಕ್ಕ, ಈ ಸೀಸನ್ ಇನ್ನೊಂದು ಲೆಕ್ಕ. ನಿಮ್ಮನ್ನು ರಿಪ್ಲೇಸ್ ಮಾಡೋದಿಕ್ಕೆ ಇನ್ನೊಂದು ಬ್ಯಾಚ್ ಇರಬಹುದು” ಎಂದು ಅವರು ಹೇಳಿದ್ದರು.
35
ವೈಲ್ಡ್‌ಕಾರ್ಡ್ ಎಂಟ್ರಿ
ಅಂದರೆ ಈ ಸ್ಪರ್ಧಿಗಳಲ್ಲಿ ಕೆಲವರು ಬೇಗ ಎಲಿಮಿನೇಟ್ ಆಗಿ, ಇವರ ಜಾಗಕ್ಕೆ ಬೇರೆಯವರು ಬರ್ತಾರೆ ಎಂದು ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವಂತೆ ಆರು ಜನರು ಎಲಿಮಿನೇಟ್ ಆಗಿ, ನಾಲ್ವರು ವೈಲ್ಡ್‌ಕಾರ್ಡ್ ಎಂಟ್ರಿ ಆಗಲಿದೆ ಎನ್ನಲಾಗುತ್ತಿದೆ. ಈ ಟೀಂ ಬಿಗ್ ಬಾಸ್ ಮನೆಯಲ್ಲಿ ಆಟ ಆಡೋದನ್ನು ನೋಡಿದರೆ ಆದಷ್ಟು ಬೇಗ ರಿಪ್ಲೇಸ್‌ಮೆಂಟ್ ಆಗಲೂಬಹುದು. ಪ್ರತಿ ಸೀಸನ್‌ನಲ್ಲಿ ಆಟ ಶುರುವಾಗಿ ಐವತ್ತು ದಿನಕ್ಕೆ ಇಬ್ಬರು ವೈಲ್ಡ್‌ಕಾರ್ಡ್ ಎಂಟ್ರಿ ಪಡೆಯುತ್ತಿದ್ದರು. ಈ ಬಾರಿ ಬೇಗ ಎಂಟ್ರಿ ಸಿಗಲೂಬಹುದು.
ಅಂದಹಾಗೆ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್, ಅಶ್ವಿನಿ ಹಾಗೂ ಅಭಿಷೇಕ್ ಜೋಡಿ ಮಧ್ಯೆ ಒಂದು ಜೋಡಿ ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಗುಸುಗುಸು ಶುರುವಾಗಿದೆ. ಕರಿಬಸಪ್ಪ ಅವರು ಇಂಟರ್‌ನ್ಯಾಶನಲ್ ಬಾಡಿ ಬಿಲ್ಡರ್. ಅಮಿತ್ ಅವರು ಆರ್‌ಜೆ ಆಗಿ ಕೆಲಸ ಮಾಡಿದ್ದರು.
55
ಎಲಿಮಿನೇಟ್ ಆದವರು ಯಾರು?
ಕರಿಬಸಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಫಿಲಾಸಫಿ ಹೇಳಿ ಕಾಣಿಸಿಕೊಂಡಿದ್ದರು. ಅಮಿತ್ ಅವರು ಮಾತನಾಡಿದ್ದು ತುಂಬ ಕಡಿಮೆಯೋ ಅಥವಾ ಒಂದೂವರೆ ಗಂಟೆಯ ಎಪಿಸೋಡ್‌ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೋ ಎಂದು ಅವರೇ ಹೇಳಬೇಕಿದೆ. ಅಂದಹಾಗೆ ಅಶ್ವಿನಿ ಹಾಗೂ ಅಭಿಷೇಕ್ ಶ್ರೀಕಾಂತ್ ಅವರು ಕೂಡ ಅಷ್ಟು ಕಾಣಿಸಿಕೊಂಡಿಲ್ಲ. ಈ ಜೋಡಿ ಮಧ್ಯೆ ಎಲಿಮಿನೇಶನ್ ನಡೆದಿದೆಯಂತೆ. ಸಂಡೇ ವಿಥ್ ಸುದೀಪ ಎಪಿಸೋಡ್‌ನಲ್ಲಿ ಇವರಿಬ್ಬರು ಎಲಿಮಿನೇಟ್ ಆಗಿರೋದು ಹೌದೋ ಇಲ್ಲವೋ ಎಂದು ಗೊತ್ತಾಗುವುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.