BBK 12: ನಾನು ಬಿಗ್‌ ಬಾಸ್‌ ಮನೆಯಲ್ಲಿ ಅದೊಂದು ಮಾತು ಹೇಳಬಾರದಿತ್ತು, ತಪ್ಪು ಮಾಡಿದೆ-ರಕ್ಷಿತಾ ಶೆಟ್ಟಿ

Published : Oct 04, 2025, 11:05 PM IST

Bigg Boss Kannada Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ರಕ್ಷಿತಾ ಶೆಟ್ಟಿ ಕಂಬ್ಯಾಕ್‌ ಮಾಡಿದ್ದಾರೆ. ಮೊದಲೇ ಊಹಿಸಿದಂತೆ ರಕ್ಷಿತಾ ಅವರು ಸೀಕ್ರೇಟ್‌ ರೂಮ್‌ನಲ್ಲಿ ಇದ್ದರಂತೆ. ಈ ವಿಷಯವನ್ನು ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದರು. 

PREV
19
ಒಬ್ಬರು ಹೊರಗಡೆ ಬರಬೇಕು

ಬಿಗ್‌ ಬಾಸ್‌ ಆಟ ಶುರುವಾಗಿ ಕೆಲವೇ ಗಂಟೆಗಳಾಗಿತ್ತು. ಮಾಳು ನಿಪನಾಳ, ಸ್ಪಂದನಾ ಸೋಮಣ್ಣ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಒಬ್ಬರು ಹೊರಗಡೆ ಬರಬೇಕಿತ್ತು. ಒಂಟಿಗಳು ಒಬ್ಬರು ಹೊರಗಡೆ ಹೋಗಬೇಕು ಎಂದು ನಿರ್ಧಾರ ತಿಳಿಸಬೇಕಿತ್ತು.

29
ರಕ್ಷಿತಾ ಶೆಟ್ಟಿ ಎಲಿಮಿನೇಶನ್

ಸೋಶಿಯಲ್‌ ಮೀಡಿಯಾದಿಂದ ಹೆಸರು ಮಾಡಿದವರು, ಇನ್ನೂ ಚಿಕ್ಕ ವಯಸ್ಸು ಎಂದು ನೆಪ ಹೇಳಿ ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಶನ್‌ಗೆ ನಾಮಿನೇಟ್‌ ಮಾಡಿದರು. ಆಗ ರಕ್ಷಿತಾ ಸುಮ್ಮನೆ ಮನೆಯಿಂದ ಹೊರಗಡೆ ಬಂದಿದ್ದರು.

39
ರಕ್ಷಿತಾ ಶೆಟ್ಟಿ ಮಾತು ಅರ್ಥಮಾಡಿಕೊಳ್ಳೋದು ಟಾಸ್ಕ್

“ಎಲ್ಲರೂ ಒಂದಿನ ಈ ಮನೆಯಿಂದ ಹೋಗುವವರೇ, ನಾನು ಈಗ ಹೋಗ್ತಿದ್ದೀನಿ” ಎಂದು ಬಹಳ ಪ್ರೌಢಿಮೆಯ ಮಾತುಗಳನ್ನಾಡಿ ಹೊರಬಂದಿದ್ದರು. ಈಗ ಅವರು ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದು, ನನ್ನನ್ನು ಹೇಗೆ ಹೊರಗಡೆ ಕಳಿಸಿದ್ರು ಅಂತ ನಾನು ಕೇಳುವೆ ಎಂದು ಹೇಳಿದ್ದಾರೆ. ರಕ್ಷಿತಾ ಅವರು ಕನ್ನಡದಲ್ಲಿಯೇ ಮಾತನಾಡಿದ್ದು, ಕಿಚ್ಚ ಸುದೀಪ್‌ ಕೂಡ ಅರ್ಥಮಾಡಿಕೊಳ್ಳಲು ಒಂದಿಷ್ಟು ಸಮಯ ತಗೊಂಡರು.

49
ರಕ್ಷಿತಾ ಶೆಟ್ಟಿ ವಾದ ಏನು?

“ನಾನು ಹೇಗೆ ಅಂತ ಅಲ್ಲಿದ್ದವರಿಗೆ ಗೊತ್ತಿಲ್ಲ, ಕೆಲವೇ ಟೈಮ್‌ನಲ್ಲಿ ನನ್ನನ್ನು ಅವರು ಹೇಗೆ ನಾಮಿನೇಟ್‌ ಮಾಡ್ತಾರೆ? ಈ ಪ್ರಶ್ನೆಯನ್ನು ನಾನು ಅವರಿಗೆ ಕೇಳಬೇಕು. ಅಶ್ವಿನಿ ಮೇಡಂ ಅವರು ನನ್ನ ಬಗ್ಗೆ ಸ್ಟ್ಯಾಂಡ್‌ ತಗೊಳ್ಳಲಿಲ್ಲ, ಅದನ್ನು ಪ್ರಶ್ನೆ ಮಾಡಬೇಕು” ಎಂದು ಅವರು ಹೇಳಿದ್ದಾರೆ.

59
ಅವರಿಗೆ ಯೋಗ್ಯತೆ ಇಲ್ಲ

“ಪುಸ್ತಕದ ಕವರ್‌ ನೋಡಿ ಜಡ್ಜ್‌ ಮಾಡಬಾರದು, ಅದರೊಳಗಡೆ ಏನಿದೆ ಅಂತ ಗೊತ್ತಿಲ್ಲ. ಸ್ಪಂದನಾ, ಮಾಳು ನಿಪನಾಳ ಅವರಿಗೂ ಕೂಡ ಈ ಶೋನಲ್ಲಿ ಇರಲು ಯೋಗ್ಯತೆ ಇಲ್ಲದೆ ಇರಬಹುದು, ನನಗೆ ಆ ಯೋಗ್ಯತೆ ಇರಬಹುದು” ಎಂದು ಅವರು ಹೇಳಿದ್ದಾರೆ.

69
ಎಲ್ಲರೂ ಒಂದೇ ಅಲ್ಲಿ...

“ನಾನು ಯಂಗ್‌, ನಾಳೆ ಇನ್ನೊಂದು ಅವಕಾಶ ಸಿಗತ್ತೆ ಅಂತ ಕಾರಣ ಹೇಳಿ ಅಲ್ಲಿದ್ದವರು ನನ್ನನ್ನು ಕಳಿಸಿಕೊಟ್ಟರು. ಬಿಗ್‌ ಬಾಸ್‌ ಮನೆಗೆ ಹೋದ್ಮೇಲೆ ಎಲ್ಲರೂ ಒಂದೇ. ಅಲ್ಲಿದ್ದವರಲ್ಲಿ ಸೆಲೆಬ್ರಿಟಿ, ನಾನ್‌ ಸೆಲೆಬ್ರಿಟಿ ಅಂತ ಇರೋದಿಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

79
ಐದು ನಿಮಿಷದಲ್ಲಿ ಹೇಗೆ ಜಡ್ಜ್‌ ಮಾಡ್ತೀರಾ?

“ನಾನು ಹೇಗೆ ಆಟ ಆಡ್ತೀನಿ, ನಾನು ಒಳಗಡೆ ಏನು ಮಾಡ್ತೀನಿ ಅಂತ ಯಾರಿಗೂ ಗೊತ್ತಿಲ್ಲ. ಐದು ನಿಮಿಷದಲ್ಲಿ ನಾನು ಆ ಶೋನಲ್ಲಿ ಇರೋದು ಬೇಡ ಅಂತ ಹೇಗೆ ಡಿಸೈಡ್‌ ಮಾಡ್ತಾರೆ? ನಾನು ನನಗೋಸ್ಕರ ಮಾತನಾಡಬೇಕು, ನನ್ನ ಪರವಾಗಿ ಅಲ್ಲಿ ಯಾರೂ ಮಾತನಾಡಿಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

89
ನಾನು ಈ ತಪ್ಪು ಮಾಡಬಾರದಿತ್ತು

“ಈ ಬಗ್ಗೆ ನಾನು ಯಾಕೆ ಪ್ರಶ್ನೆ ಮಾಡಲಿಲ್ಲ ಅಂತ ಪಶ್ಚಾತ್ತಾಪ ಇದೆ. ಸಮಯ ಸಿಕ್ಕಾಗ ನಾನು ಪ್ರಶ್ನೆ ಕೇಳಬೇಕಿತ್ತು, ಆದರೆ ಈಗ ಪ್ರಶ್ನೆ ಕೇಳಿ ಪ್ರಯೋಜನವಿಲ್ಲ. ಎಲಿಮಿನೇಶನ್‌ ಆಗುವಾಗ ನನಗೆ ಅಳು ಬಂದರೂ ಕೂಡ, ಸಮಾಧಾನ ಮಾಡಿಕೊಂಡು ಬಂದೆ, ಅಲ್ಲಿದ್ದವರಿಗೂ ಕೂಡ ನಾನು ಮೊದಲು ಹೋಗ್ತೀನಿ, ಆಮೇಲೆ ನೀವು ಹೊರಗಡೆ ಬರ್ತೀರಾ” ಅಂತ ಹೇಳಿದ್ದೆ. ಇದು ನಾನು ಮಾಡಿದ ತಪ್ಪು. ಎಲಿಮಿನೇಶನ್‌ ಆದಾಗ ಬ್ಲ್ಯಾಂಕ್‌ ಆದೆ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

99
ನನ್ನ ಪರವಾಗಿ ನಾನೇ ಮಾತಾಡಬೇಕು

“ಬಿಗ್‌ ಬಾಸ್‌ ಮನೆಯಲ್ಲಿ ಒಂದು ವಾರ ಏನಾಗಿದೆ ಅಂತ ನನಗೆ ಗೊತ್ತಿಲ್ಲ, ಸೀಕ್ರೇಟ್‌ ರೂಮ್‌ನಲ್ಲಿ ಫೋನ್‌ ಇಲ್ಲದೆ ಇದ್ದೆ. ಎಲಿಮಿನೇಶನ್‌ ಆಗಿ ನಾನು ಸಫರ್‌ ಮಾಡಿದೆ. ಅವರಿಗೆ ಏನೂ ಸಮಸ್ಯೆ ಆಗಿಲ್ಲ. ನನಗೆ ಮತ್ತೆ ಮನೆಯೊಳಗಡೆ ಹೋಗುವ ಅವಕಾಶ ಸಿಕ್ಕಿದೆ, ಇದನ್ನು ಬಳಸಿಕೊಳ್ಳುವೆ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ.

Read more Photos on
click me!

Recommended Stories