Bigg Boss Kannada 12: ತಂಗಿ ಅಂಥ ಕರೆದು ಕಾವ್ಯ ಶೈವಗೆ ಕಳಂಕ ತರೋ ಮಾತಾಡಿದ ಚಂದ್ರಪ್ರಭ; ಇದೇನಿದು?

Published : Nov 04, 2025, 06:37 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ಅವರು ಪರಸ್ಪರ ಬೆಂಬಲ ಕೊಟ್ಟುಕೊಂಡು ಆಟ ಆಡುತ್ತಿದ್ದಾರೆ. ದೊಡ್ಮನೆಗೆ ಬರುವ ಮುನ್ನ ಈ ಹಿಂದೆಯೇ ಇವರಿಬ್ಬರು ಒಂದು ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ಕಾವ್ಯ ಶೈವ, ಗಿಲ್ಲಿ ನಟ ಬಗ್ಗೆ ಚಂದ್ರಪ್ರಭ ಮಾತನಾಡಿದ್ದಾರೆ.

PREV
15
ಕಪ್ಪು ಮಸಿ ಬಳಿಯಬೇಕು

ಯಾರು ಈ ಮನೆಯಲ್ಲಿ ಇರೋಕೆ ಅರ್ಹರಲ್ಲವೋ ಅವರಿಗೆ ಕಪ್ಪು ಮಸಿ ಬಳಿಯಬೇಕು ಎಂದು ಬಿಗ್‌ ಬಾಸ್‌ ಹೇಳಿದ್ದರು. ಆಗ ಚಂದ್ರಪ್ರಭ ಅವರು ಗಿಲ್ಲಿ ನಟ, ಕಾವ್ಯ ಶೈವ ಅವರ ಸ್ನೇಹವನ್ನು ಟಾರ್ಗೆಟ್‌ ಮಾಡಿ ಮಾತನಾಡಿದ್ದಾರೆ.

25
ಕಾವ್ಯ ಶೈವ ದಾರಿ ತಪ್ಪಿದಳು

“ಎಲ್ಲ ವಿಚಾರದಲ್ಲಿಯೂ ನನ್ನ ತಂಗಿ ಕಾವ್ಯ ಶೈವ ಕರೆಕ್ಟ್‌ ಆಗಿ ಹೋಗ್ತಿದ್ದಾಳೆ ಅಂತ ನಾನು ಅಂದುಕೊಂಡಿದ್ದೆ. ಹಂಸ್, ಗುಂಡಿ ಎಲ್ಲಿ ಸಿಗ್ತಿದೆಯೋ ಅಲ್ಲಿ ಕರೆಕ್ಟ್‌ ಆಗಿ ಹೋಗ್ತಿದ್ದಾಳೆ ಅಂತ ಅಂದುಕೊಂಡಿದ್ದೆ. ಒಳ್ಳೆಯ ದಾರಿಯಲ್ಲಿ ಹೋಗ್ತಿದ್ದವಳಿಗೆ, ಗಾಡಿ ಓಡಿಸ್ಕೊಂಡು ಬರೋನು ಚೋಕ್‌ ಕೊಟ್ಟ ಅಂತ ಅವಳು ದಾರಿ ತಪ್ಪಿದಳು ಅಂತ ಅನಿಸುತ್ತದೆ” ಎಂದು ಚಂದ್ರಪ್ರಭ ಹೇಳಿದ್ದಾರೆ.

35
ಮದುವೆಗೆ ಸಮಸ್ಯೆ ಆಗುತ್ತದೆ

“ಇಲ್ಲಿ ಇರುವವರಿಗೆ ಲವ್‌ ಎನ್ನೋದು ಓಕೆ, ತಮಾಷೆ ಅಂತ ಅಂದುಕೊಳ್ತೀವಿ. ಆದರೆ ಸಮಾಜದಲ್ಲಿ ಇರುವ ಜನರು ಇದನ್ನು ಎಲ್ಲರೂ ಅಲ್ಲ, ಕೆಲವರು ರಿಯಲ್‌ ಅಂತ ಅಂದುಕೊಂಡಾಗ ನನ್ನ ತಂಗಿಗೆ ಕಳಂಕ ತರುತ್ತದೆ. ನಾಳೆ ಮದುವೆ ವಿಷಯ ಬಂದಾಗ ಸಮಸ್ಯೆ ಆಗುವುದು. ಎಲ್ಲೋ ಓಡಾಡಿದ್ದಾರೆ, ಸುತ್ತಾಡಿದ್ದಾರೆ ಅಂತ ಜನರು ಅಂದುಕೊಳ್ತಾರೆ. ಬದಲಾಗಬೇಕು ಎನ್ನೋದು ಪ್ರಪಂಚ ಅಲ್ಲ, ನೀನು ಬದಲಾಗಬೇಕು” ಎಂದು ಚಂದ್ರಪ್ರಭ ಹೇಳಿದ್ದಾರೆ.

45
ಕಾವ್ಯಗೆ ಬೇಸರ

“ನಿಮ್ಮ ಮಾತಿಗೆ ನಾನು ನಗಬೇಕೋ, ಅಳಬೇಕೋ ಗೊತ್ತಾಗ್ತಿಲ್ಲ. ಕಾವ್ಯ ಎನ್ನೋ ಹೆಸರಿಗೆ ನೀವು ಮಸಿ ಬಳಿದಿದ್ದೀರಿ. ಯಾವಾಗಲೂ ನೀವು ನಮ್ಮ ಜೊತೆ ಇರ್ತೀರಿ, ಗಿಲ್ಲಿ ಜೊತೆ ಇರ್ತೀರಿ. ನಮ್ಮಿಬ್ಬರ ಜೊತೆ ಯಾರು ಏನು ಅಂದುಕೊಳ್ತಾರೋ ಏನೋ. ನೀವು ಮಾತ್ರ ಲವ್‌ ಎನ್ನೋ ಟೈಟಲ್‌ ಕೊಟ್ರಿ. ಈ ರೀತಿ ಇಲ್ಲ ಎನ್ನೋದು ನಿಮಗೆ ಗೊತ್ತಿದೆ, ಆದರೆ ನೀವು ಹೀಗೆ ಹೇಳಿದ್ದು ಬೇಸರ ತಂದಿದೆ. ನಾನು ರಾಖಿ ಕಟ್ಟಿ, ಅಣ್ಣಾ ಅಂತ ಕರೆದಿದ್ದೀನಿ, ನಾನು, ಗಿಲ್ಲಿ ಹೇಗಿದೀವಿ ಅಂತ ಇಬ್ಬರಿಗೂ ಗೊತ್ತಿದೆ” ಎಂದು ಕಾವ್ಯ ಶೈವ ಹೇಳಿದ್ದಾರೆ.

55
ಗಿಲ್ಲಿ ನಟಗೂ ಸಿಟ್ಟು ಬಂತು

ಚಂದ್ರಪ್ರಭ ಮಾತು ಕೇಳಿ ಗಿಲ್ಲಿ ನಟ ಅವರಿಗೆ ಸಿಟ್ಟು ಬಂದಿದೆ. ಆಗ ಅವರು, “ನೀನು ಏನು ಮಾಡಿದ್ಯಾ? ಸಂಸ್ಥಾರಸ್ಥರೇ? ನೀವು ಎಷ್ಟು ಮುಖಕ್ಕೆ ಮಸಿ ಬಳಿಯುತ್ತೀರೋ, ಅದಿಕ್ಕಿಂತ ಜಾಸ್ತಿ ನಿಮ್ಮ ಕೈ ಕಲರ್‌ ಆಗುತ್ತದೆ” ಎಂದು ಹೇಳಿದ್ದಾರೆ.

Read more Photos on
click me!

Recommended Stories