Bigg Boss Kannada surprise elimination: ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುವ ನಡುವೆ, ಅನಿರೀಕ್ಷಿತವಾಗಿ ಅಶ್ವಿನಿ ಗೌಡ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಇದು ನಿಜವಾದ ಎಲಿಮಿನೇಷನ್ನೇ ಅಥವಾ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಕುತೂಹಲ ಮೂಡಿದೆ.
ಈ ವಾರ ಸುದೀಪ್ ಹೇಳಿಕೆಯಂತೆ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದು, ಬಿಗ್‌ಬಾಸ್ ಸಹ ಯಾವುದೇ ಟಾಸ್ಕ್ ನೀಡಲ್ಲ. ಹಾಗಾಗಿ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದ ಮೂಲಕ ತಮ್ಮನ್ನು ಸಾಬೀತು ಮಾಡಿಕೊಳ್ಳಬೇಕಿದೆ. ಈ ಎಲ್ಲದರ ನಡುವೆ ಅಚ್ಚರಿಯ ದೃಶ್ಯ ಮುನ್ನಲೆಗೆ ಬಂದಿದ್ದಾರೆ.
25
ಸ್ಪರ್ಧಿಗಳಿಗೆ ಬಿಗ್ ಶಾಕ್
ಸೋಮವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಅರ್ಹರಲ್ಲದ ಇಬ್ಬರು ವ್ಯಕ್ತಿಗಳಿಗೂ ಮಸಿ ಬಳೆಯುವ ಟಾಸ್ಕ್ ನೀಡಲಾಗಿತ್ತು. ಈ ಪ್ರಕ್ರಿಯೆ ಬಳಿಕ ಸೂಟ್‌ಕೇಸ್ ಜೊತೆ ಗಾರ್ಡನ್ ಏರಿಯಾಗೆ ಬರುವಂತೆ ಬಿಗ್‌ಬಾಸ್ ಸೂಚಿಸುತ್ತಾರೆ. ಎಲ್ಲಾ ಸ್ಪರ್ಧಿಗಳು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಗಾರ್ಡನ್ ಏರಿಯಾಗೆ ಬರುತ್ತಾರೆ.
35
ಮನೆಯಿಂದ ಹೊರ ಬಂದ್ರಾ ಅಶ್ವಿನಿ ಗೌಡ?
ಎಲ್ಲರೂ ಬಂದು ನಿಲ್ಲುತ್ತಿದ್ದಂತೆ ಬಿಗ್‌ಬಾಸ್, ಅಶ್ವಿನಿ ಗೌಡ ಹೆಸರು ಹೇಳುತ್ತಿದ್ದಂತೆ ಮನೆಯ ಮುಖ್ಯದ್ವಾರ ತೆರೆದುಕೊಳ್ಳುತ್ತದೆ. ಅಶ್ವಿನಿ ಗೌಡ ಸೂಟ್‌ಕೇಸ್ ಹಿಡಿದುಕೊಂಡು ಹೊರಗೆ ಬರುತ್ತಾರೆ. ನಿಜವಾಗಿಯೂ ಅಶ್ವಿನಿ ಗೌಡ ಹೊರಗೆ ಬಂದ್ರಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹೊರಗೆ ಬಂದ ಅಶ್ವಿನಿ ಗೌಡ, ಸೀಕ್ರೆಟ್ ರೂಮ್‌ಗೆ ಹೋಗ್ತಾರಾ ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಬಿಗ್‌ಬಾಸ್ ಮೊದಲ ದಿನವೇ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಹೊರ ಬಂದಿದ್ದರು. ಆದ್ರೆ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ನಲ್ಲಿದ್ರಾ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ನನ್ನನ್ನು ಒಂದು ಸ್ಥಳದಲ್ಲಿ ಇರಿಸಲಾಗಿತ್ತು. ಅಲ್ಲಿ ಟಿವಿ ಸಹ ಇರಲಿಲ್ಲ ಎಂದು ಸುದೀಪ್ ಅವರ ಮುಂದೆ ರಕ್ಷಿತಾ ಶೆಟ್ಟಿ ಹೇಳಿದ್ರು.
ಮುಖಕ್ಕೆ ಮಸಿ ಬಳಿಯುವ ಪ್ರಕ್ರಿಯೆಯಲ್ಲಿ ಅಶ್ವಿನಿ ಗೌಡ ಮತ್ತು ರಿಷಾ ಗೌಡ ಮುಖಕ್ಕೆ ಹೆಚ್ಚು ಕಪ್ಪು ಬಳೆಯಲಾಗಿದೆ. ಅಶ್ವಿನಿ ಗೌಡ ಮಾತುಗಳನ್ನು ತಿರುಚಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ರಿಷಾ ಗೌಡ ಅವರಿಂದ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ ಎಂಬ ಕಾರಣಗಳನ್ನು ನೀಡಿದರು. ಗಿಲ್ಲಿ ನಟನ ಮೇಲೆ ರಿಷಾ ಹಲ್ಲೆ ನಡೆಸಿರೋದಕ್ಕೆ ವೀಕ್ಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.