BBK 12: ಒಳ್ಳೆಯ ಗಂಡ, ಕುಟುಂಬ ಇದ್ದರೂ ಕೂಡ ಅಶ್ವಿನಿ ಗೌಡಗೆ ಡಿವೋರ್ಸ್‌ ಯಾಕಾಯ್ತು? ಅಂದು ನಟಿ ಹೇಳಿದ್ದೇನು?

Published : Oct 02, 2025, 05:55 PM IST

Bigg Boss Kannada 12 Ashwini Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಭಾಗವಹಿಸಿದ್ದಾರೆ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಅವರು ಡಿವೋರ್ಸ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. 

PREV
15
ಮಾಜಿ ಪತಿ ಯಾರು?

ಅಶ್ವಿನಿ ಗೌಡ ಅವರು ಪತಿಯ ಹೆಸರು, ಕುಟುಂಬವನ್ನು ಎಲ್ಲಿಯೂ ರಿವೀಲ್‌ ಮಾಡಿಲ್ಲ. ಆದರೆ ಮಗ ಇರೋ ವಿಷಯವನ್ನು ಎಲ್ಲರಿಗೂ ಹೇಳಿದ್ದರು.

25
ಡಿವೋರ್ಸ್‌ ಯಾಕಾಯ್ತು?

“ಯಾರೂ ಕೆಟ್ಟವರಲ್ಲ, ಒಳ್ಳೆಯ ಕುಟುಂಬ, ಒಳ್ಳೆಯ ವ್ಯಕ್ತಿ, ನನ್ನ ಮಗನಿಗೆ ಒಳ್ಳೆಯ ತಂದೆ ಎಲ್ಲವೂ ಸರಿ. ವ್ಯಕ್ತಿ-ವ್ಯಕ್ತಿಗಳು ಸೇರಿದಾಗ ನಾವು ಮಾಡಿದ್ದನ್ನೆಲ್ಲ ಅವರು ಒಪ್ಪಿಕೊಳ್ಳಬೇಕು, ಅವರು ಮಾಡಿದ್ದನ್ನು ನಾವು ಒಪ್ಪಿಕೊಳ್ಳಬೇಕು ಅಂತೇನಿಲ್ಲ. ಡಿವೋರ್ಸ್‌ ತಗೊಳೋದನ್ನು ನಾನು ದೊಡ್ಡ ವಿಷಯ ಎನ್ನುವ ಹಾಗೆ ಮಾಧ್ಯಮದ ಮುಂದೆ ಬಂದು ಹೇಳುತ್ತಿಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

35
ಬೇರೆ ಸಂಬಂಧ ಇಟ್ಕೊಳೋದು ಸರಿಯಲ್ಲ

“ಗಂಡ-ಹೆಂಡತಿ ಜೊತೆಗಿದ್ದಾಗಲೇ ಬೇರೆ ಸಂಬಂಧ ಇಟ್ಟುಕೊಳ್ಳೋದು, ಕೊ*ಲೆ ಮಾಡೋದು ಸರಿಯಿಲ್ಲ. ಇದೆಲ್ಲವೂ ಅಸಹ್ಯ, ಬೈದುಕೊಂಡು, ಬಿಟ್ಟು ಹೋಗೋ ಭಯದಲ್ಲಿ ಬ್ಲ್ಯಾಕ್‌ಮೇಲೆ ಮಾಡೋದು ಸರಿಯಲ್ಲ. ಜೊತೆಯಲಿದ್ದುಕೊಂಡು ಅವರು ಇಂಥವರು, ಇವರು ಅಂಥವರು ಅಂತ ಸಮಾಜದಲ್ಲಿ ತೋರಿಸೋದು ತಪ್ಪು. ಬೇರೆಯವರ ವ್ಯಕ್ತಿತ್ವ ಅಸಹ್ಯ ಅಂತ ತೋರಿಸೋಕೆ ಹೋಗಿ ನಮ್ಮ ವ್ಯಕ್ತಿತ್ವವನ್ನು ಅಸಹ್ಯ ಮಾಡಿಕೊಳ್ಳಬಾರದು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.

45
ಮಗನ ಮೇಲೆ ಪರಿಣಾಮ ಬೀರಬಾರದು

“ಒಳ್ಳೆಯ ಕುಟುಂಬದಲ್ಲಿದ್ದಾಗ, ನಾವು ಒಂದು ಸಂಬಂಧದಲ್ಲಿದ್ದಾಗ ಮಾತಾಡಿಕೊಂಡು ದೂರ ಆದೆವು. ಎರಡು ಕುಟುಂಬಗಳ ಜೊತೆ ಮಾತನಾಡಿಕೊಂಡು, ನಮ್ಮ ಮಗನ ಮೇಲೆ ಕೆಟ್ಟ ಪರಿಣಾಮ ಬೀರಬಾರದು” ಎಂದು ಅಶ್ವಿನಿ ಗೌಡ ಅವರು ಹೇಳಿದ್ದರು.

55
ಕನ್ನಡಪರ ಹೋರಾಟಗಾರ್ತಿ

“ನನ್ನ ಮಾಜಿ ಗಂಡನ ಮನೆಯವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನಾನು ಕೂಡ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡೋದಿಲ್ಲ. ಎಲ್ಲರಿಗೂ ನನ್ನ ರೀತಿ ಸರಳ ಜೀವನ ಇರತ್ತೆ ಅಂತ ನಾನು ಹೇಳೋದಿಲ್ಲ, ಅನೇಕ ಹೆಣ್ಣು ಮಕ್ಕಳಿಗೆ ಕೆಲಸ ಮಾಡಬೇಕು, ದುಡಿಯಬೇಕು ಎನ್ನೋದಿರುತ್ತದೆ. ಆದರೆ ಅವರೆಲ್ಲರಿಗೂ ಅವಕಾಶ ಸಿಗೋದಿಲ್ಲ, ಹಾಗಂತ ಜೀವನವನ್ನು ಕಾಂಪ್ಲಿಕೇಟ್‌ ಮಾಡಿಕೊಳ್ಳಬಾರದು” ಎಂದು ಅವರು ಹೇಳಿದ್ದಾರೆ.

ಅಂದಹಾಗೆ ಅಶ್ವಿನಿ ಗೌಡ ಅವರು ಕನ್ನಡ ಪರ ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ, ನಟಿಯೂ ಹೌದು, ಅಷ್ಟೇ ಅಲ್ಲದೆ ತಂದೆಯ ಆಸ್ತಿಯನ್ನು ಕೂಡ ನೋಡಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories