Amruthadhaare: ಟ್ವಿಸ್ಟ್​ ಅಂದ್ರೆ ಇದಪ್ಪಾ- ಕಿಡ್​ನ್ಯಾಪ್​ ಆದ ಮಗು ಜೊತೆ ಭೂಮಿಕಾ-ಗೌತಮ್​!

Published : Oct 02, 2025, 02:47 PM IST

ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಕಥಾಹಂದರವು ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಗೌತಮ್ ಅವಳಿ ಮಕ್ಕಳ ಸತ್ಯವನ್ನು ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ಮನೆಬಿಟ್ಟು ಹೋಗಿರುವುದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅವಳಿ ಮಕ್ಕಳ ಎಐ-ರಚಿತ ಫೋಟೋವೊಂದು ವೈರಲ್ ಆಗಿದೆ.  

PREV
15
ಅಮೃತಧಾರೆ ಮೇಲೂ ಅಸಮಾಧಾನ

ಎಲ್ಲವೂ ಚೆನ್ನಾಗಿದೆ, ಸೀರಿಯಲ್​ ಅಂದ್ರೆ ಹೀಗಿರಬೇಕು, ಎಲ್ಲಿಯೂ ಬೋರ್​ ಆಗದಂತೆ ಪಟಪಟ ಎಂದು ಮುಗಿಸ್ತಿರೋ ಸೀರಿಯಲ್​ ಅಂದ್ರೆ ಅದು ಅಮೃತಧಾರೆ (Amruthadhaare Serial) ಎಂದೆಲ್ಲಾ ವೀಕ್ಷಕರು ಖುಷಿಯಿಂದ ಇಷ್ಟು ತಿಂಗಳು ಹೇಳುತ್ತಲೇ ಬಂದಿದ್ದರು. ಆದರೆ ಇತ್ತೀಚಿನ ಕೆಲವು ಎಪಿಸೋಡ್​ ನೋಡಿದ ಮೇಲೆ ವೀಕ್ಷಕರು ಯಾಕೋ ಈ ಸೀರಿಯಲ್​ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸ್ತಿರೋದನ್ನು ಸೀರಿಯಲ್​ ಪ್ರೊಮೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದಾಗ ಗೊತ್ತಾಗುತ್ತಿದೆ.

25
ಎಲ್ಲವೂ ಅಯೋಮಯ

ಭೂಮಿಕಾ ಮತ್ತು ಗೌತಮ್​ ಇನ್ನೇನು ಒಂದಾಗುತ್ತಾರೆ ಎನ್ನೋವಷ್ಟರಲ್ಲಿಯೇ ಭೂಮಿಕಾ ಮತ್ತು ಮನೆ ಚೇಂಜ್​ ಮಾಡಿದ್ದಾಳೆ. ಇದ್ಯಾಕೋ ಅತಿಯಾಯ್ತು ಎನ್ನುತ್ತಿದ್ದಾರೆ ನೆಟ್ಟಿಗರು. ತನ್ನ ಮಗನ ಪ್ರಾಣವನ್ನು ಅಪ್ಪನೇ ಕಾಪಾಡಿದ್ರೂ, ತನಗಾಗಿ ಐದು ವರ್ಷ ಎಷ್ಟೊಂದು ಕಷ್ಟ ಅನುಭವಿಸಿ ಹುಡುಕಾಡಿದ್ರೂ ಗಂಡನ ಮೇಲೆ ಭೂಮಿಕಾಗೆ ಅದೆಂಥ ಕೋಪ ಎನ್ನುವುದೇ ಹಲವರಿಗೆ ಪ್ರಶ್ನಾರ್ಹವಾಗಿ ಉಳಿದಿದೆ.

35
ಭೂಮಿಕಾ ಸಿಟ್ಟಿಗೆ ಕಾರಣ

ಅಷ್ಟಕ್ಕೂ ಇದಕ್ಕೆ ಮುಖ್ಯ ಕಾರಣ, ಗೌತಮ್​ ಭೂಮಿಕಾಗೆ ಹುಟ್ಟಿದ್ದು ಅವಳಿ ಮಕ್ಕಳು, ಒಂದು ಮಗು ಕಿಡ್​ನ್ಯಾಪ್ ಆಗಿದೆ ಎನ್ನುವ ಸತ್ಯವನ್ನು ಹೇಳದೇ ಇರುವುದು. ಗೌತಮ್​ ಭೂಮಿಕಾಗೆ ಈ ವಿಷಯವನ್ನು ಯಾಕೆ ಹೇಳಲಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಏಕಾಏಕಿ ಮನೆಬಿಟ್ಟು ಹೋದದ್ದು ವೀಕ್ಷಕರಿಗೆ ಭಾರಿ ಶಾಕ್​ ಕೊಟ್ಟಿದೆ.

45
ಕಲ್ಪನೆಯ ಫೋಟೋ ವೈರಲ್​

ಅದೇ ಕಾರಣಕ್ಕೆ ಆ ಮಗು ಸಿಕ್ಕರೆ ಹೇಗಿರುತ್ತದೆ ಇಬ್ಬರ ಲೈಫ್​ ಎನ್ನುವ ಕಲ್ಪನೆ ಈಗ ಫೋಟೋ ರೂಪದಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಭೂಮಿಕಾ ಮನೆ ಬಿಟ್ಟು ಐದು ವರ್ಷ ಆಗಿದ್ದರಿಂದ ಮಕ್ಕಳು ದೊಡ್ಡವರಾಗಿದ್ದಾರೆ ನಿಜ. ಆದರೆ ನೆಟ್ಟಿಗರ ಕಲ್ಪನಾ ಲೋಕ ಬೇರೆಯ ರೀತಿಯಲ್ಲಿದೆ. ಅಲ್ಲಿ ಈ ಅವಳಿ ಮಕ್ಕಳು ಇನ್ನೂ ಶಿಶುಗಳಾಗಿದ್ದಾರೆ.

55
ಎಐ ಫೋಟೋ ರಿಯಲ್​ ಆಗಲಿ

ಭೂಮಿಕಾ ಮತ್ತು ಗೌತಮ್ ಕೈಯಲ್ಲಿ ಒಂದೊಂದು ಮಗುವಿದೆ. ಅದು ಅವಳಿ ಮಕ್ಕಳು, ಎಐ ಮೂಲಕ ಸೃಷ್ಟಿಯಾಗಿದೆ ಈ ಫೋಟೋ. ಇದೇ ನಿಜವಾಗಲಿ, ಕಿಡ್​ನ್ಯಾಪ್​ ಆಗಿರೋ ಮಗಳೂ ಬೇಗ ಸಿಕ್ಕು ಸೀರಿಯಲ್​ ಬೇಗ ಹ್ಯಾಪ್ಪಿ ಎಂಡ್​ ಮಾಡಿ ಎನ್ನುವುದು ಈ ನೆಟ್ಟಿಗರ ಕೋರಿಕೆ. ಇದನ್ನು chayasingh_edits ನಲ್ಲಿ ಶೇರ್​ ಮಾಡಲಾಗಿದೆ.

Read more Photos on
click me!

Recommended Stories