Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?

Published : Dec 09, 2025, 01:22 PM IST

ಬಿಗ್ ಬಾಸ್ 12ರ ಸ್ಪರ್ಧಿ ಡಾಗ್ ಸತೀಶ್, ಮನೆಯಲ್ಲಿದ್ದಾಗ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಾತ್ರಿ ಲೈಟ್ ಆಫ್ ಆದ ಮೇಲೆ ನಡೆಯುತ್ತಿದ್ದ ಘಟನೆಗಳಿಂದ ನಿದ್ದೆಗೆಟ್ಟು, ಇನ್ನೊಂದು ವಾರ ಇದ್ದಿದ್ದರೆ ಸತ್ತೇ ಹೋಗುತ್ತಿದ್ದೆ ಎಂದು ಅವರು ಹೇಳಿದ್ದಾರೆ. 

PREV
17
ಡಾಗ್​ ಸತೀಶ್​ ಹವಾ

ತಾವೊಬ್ಬ ವಿಶ್ವದ ನಂಬರ್​ 1 ಡಾಗ್​ ಬ್ರೀಡರ್​, ಛಾನ್ಸ್​ ಕೊಟ್ಟರೆ ಬಿಗ್​ಬಾಸ್​ ಅನ್ನು ವಿಶ್ವದ ನಂಬರ್​ 1 ಷೋ ಮಾಡುತ್ತೇನೆ ಎಂದೆಲ್ಲಾ ಹೇಳಿಕೊಳ್ಳುವ Bigg Boss 12 ಡಾಗ್​ ಸತೀಶ್​ ಹವಾ ಈಗ ಸಾಕಷ್ಟು ಜೋರಾಗಿದೆ.

27
ಸೆಲೆಬ್ರಿಟಿ

ಬಿಗ್​ಬಾಸ್​ಗೆ ಹೋಗಿ ಬಂದ ಮೇಲೆ ಸೆಲೆಬ್ರಿಟಿಯಾಗಿರುವ ಅವರು, ವಿವಿಧ ಚಾನೆಲ್​ಗಳಲ್ಲಿ ಬಿಗ್​ಬಾಸ್​ ಪಯಣವನ್ನು ಹೇಳುತ್ತಿರುತ್ತಾರೆ. ಹೆಚ್ಚಾಗಿ ಇವರು ಹೇಳುವುದು ಅಲ್ಲಿನ ನೆಗೆಟಿವ್​ ಬಗ್ಗೆನೇ!

37
ಸುರಸುಂದರಾಂಗ

ತಮ್ಮನ್ನು ತಾವು ಸುರಸುಂದರಾಂಗ, ಕಾಲೇಜಿನ ದಿನಗಳಲ್ಲಿ ಸಾವಿರಾರು ಹುಡುಗಿಯರು ಹಿಂದೆ ಬೀಳ್ತಾ ಇದ್ರು, ನನ್ನ ವಯಸ್ಸು ಹಿಂದಕ್ಕೆ ಹೋಗುತ್ತಿದೆ ಎಂದೆಲ್ಲಾ ಹೇಳುವ ಡಾಗ್​ ಸತೀಶ್​, ತಮ್ಮ ಮಗನನ್ನು ವಿಶ್ವದ ನಂಬರ್​ 2ನೇ ಹೀರೋ ಮಾಡಲು ಹೊರಟಿದ್ದಾರೆ. ನಂಬರ್​ 1 ಮಾಡಿದ್ರೆ ಮಗನಿಗೆ ಅಹಂ ಹೆಚ್ಚಾಗಬಹುದು ಎಂದು ನಂಬರ್​ 2 ಮಾಡುತ್ತಿದ್ದಾರಂತೆ.

47
ಏನಾಗುತ್ತೆ ರಾತ್ರಿ?

ಇಂತಿಪ್ಪ ಡಾಗ್​ ಸತೀಶ್​ ಇದೀಗ ಬಿಗ್​ಬಾಸ್​ ಮನೆಯಲ್ಲಿ ಇನ್ನೊಂದು ವಾರ ನಾನು ಇದ್ರೆ ಸತ್ತೇ ಹೋಗ್ತಿದ್ದೆ ಎಂದು ಹೇಳಿದ್ದಾರೆ. ಅದಕ್ಕೆ ಅವರು ಕಾರಣನೂ ಕೊಟ್ಟಿದ್ದಾರೆ. ರಾತ್ರಿ ಲೈಟ್​ ಆಫ್​ ಆದ ಮೇಲೆ ಏನು ನಡೆಯುತ್ತದೆ ಎನ್ನುವುದನ್ನು ಅವರು ಹೇಳಿದ್ದಾರೆ.

57
ಲೈಫ್ ಆಫ್ ಮಾಡಿದ್ಮೇಲೆ!

ಎಂಎಸ್​ಎನ್​ ಟಾಕ್ಸ್​ಗೆ ನೀಡಿರುವ ಸಂದರ್ಶನದಲ್ಲಿ ಡಾಗ್ ಸತೀಶ್​ ಅವರು, ಲೈಟ್ ರಾತ್ರಿ ಆಫ್​ ಮಾಡಿದ ಮೇಲೆ ಅಡುಗೆ ಶುರುವಾಗ್ತಿತ್ತು, ಅಲ್ಲಿ ಟೈಂ ವೇಸ್ಟ್​ ಮಾಡ್ತಿದ್ರು. ರಾತ್ರಿಪೂರ್ತಿ ಬಾಯ್​ಫ್ರೆಂಡ್​, ಗರ್ಲ್​ಫ್ರೆಂಡ್​ ಅಂತ ಸ್ಟೋರಿ ಮಾತಾಡ್ತಾ ಇರುತ್ತಿದ್ರು. ಅಲ್ಲಿಂದ ಅರ್ಧ ನಿದ್ದೆ ಹಾಳಾಗುತ್ತಿತ್ತು ಎಂದಿದ್ದಾರೆ.

67
ಸತ್ತೇ ಹೋಗ್ತಿದ್ದೆ- ಪ್ಯಾಂಟ್​ ಲೂಸ್​

ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿರುವ ಅವರು, ಬೆಳಿಗ್ಗೆ ಆಗ ತಾನೇ ನಿದ್ದೆ ಬರ್ತಾ ಇತ್ತು. ಆ ಸಮಯದಲ್ಲಿ ಹಾಡು ಹಾಕಿ ಬಿಡುತ್ತಿದ್ದರು. ಇನ್ನೊಂದು ವಾರ ಅಲ್ಲಿ ಇದ್ದಿದ್ದರೆ ಕಾಯಿಲೆ ಬಂದು ಸತ್ತು ಹೋಗ್ತಿದ್ನಾ ಅನ್ನುವಷ್ಟು ಆಗಿತ್ತು, ಅಷ್ಟು ಸುಸ್ತಾಗಿ ಬಿಟ್ಟಿದ್ದೆ ಎಂದಿದ್ದಾರೆ. ಪ್ಯಾಂಟೆಲ್ಲಾ ತುಂಬಾ ಲೂಸ್​ ಆಗಿದೆ. ಅಷ್ಟು ಸಣ್ಣ ಆಗಿಬಿಟ್ಟಿದ್ದೇನೆ. ಆಗಲ್ಲ ಎನ್ನಿಸಿತು. ಎಲ್ಲರೂ ಗುಂಪುಗಾರಿಕೆ ಮಾಡಿಕೊಂಡು ನನ್ನನ್ನು ದೂರ ಇಟ್ಟರು. ನಾನು ಮೊದಲು ತಮಾಷೆ ಎಂದುಕೊಂಡೆ. ಆಮೇಲೆ ಇದು ನಿಜ ಎಂದು ಗೊತ್ತಾಯ್ತು ಎಂದಿದ್ದಾರೆ.

77
ಟಾಯ್ಲೆಟ್​ ಕ್ಲೀನ್​

ಅಂದಹಾಗೆ, ಕೆಲ ದಿನಗಳ ಹಿಂದೆ ಗ್ಲೌಸ್​, ಬ್ರಷ್​ ಏನೂ ಬಳಸದೇ ತಮ್ಮ ಮನೆಯ ಟಾಯ್ಲೆಟ್​ ಅನ್ನು ಮಾಧ್ಯಮಗಳ ಮುಂದೆ ಬರಿಗೈಯಲ್ಲಿ ತೊಳೆದು ಸದ್ದು ಮಾಡಿರೋ ಸತೀಶ್​ ಅವರು, ಬಿಗ್​ಬಾಸ್​ ಮನೆಯಲ್ಲಿ ತಮ್ಮ ದುಬಾರಿ ಚಡ್ಡಿ, ಬಟ್ಟೆಗಳನ್ನು ಕದಿಯಲಾಗಿತ್ತು ಎಂದೂ ಆರೋಪಿಸಿದ್ದರು. ಇದನ್ನು ಸುದೀಪ್​ ಕೂಡ ಬಿಗ್​ಬಾಸ್ ​ಮನೆಯಲ್ಲಿ ಪ್ರಸ್ತಾಪ ಮಾಡಿದ್ದರು.

Read more Photos on
click me!

Recommended Stories