BBK 12: ನಾವೂ ಇದೀವಪ್ಪಾ..! ಒಂದೇ ವಾರಕ್ಕೆ ಈ ರೇಂಜ್‌ಗೆ ಲವ್?‌ ಸೂರಜ್‌, ರಾಶಿಕಾ ಶೆಟ್ಟಿ ಹಗ್‌ ಫುಲ್ ಟ್ರೋಲ್‌

Published : Oct 27, 2025, 08:22 AM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಸೂರಜ್‌ ಸಿಂಗ್‌ ಅವರು ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟು ಒಂದು ವಾರ ಆಯ್ತು. 1 ವಾರದಲ್ಲಿ ರಾಶಿಕಾ ಶೆಟ್ಟಿ, ಸೂರಜ್‌ ಸಿಂಗ್‌ ಕ್ಲೋಸ್‌ ಆಗಿದ್ದಾರೆ, ಇವರಿಬ್ಬರೇ ಮಾತನಾಡಿಕೊಳ್ತಾರೆ. ಇದು ಎಲ್ಲರ ಕಣ್ಣಿಗೆ ಬಿದ್ದಿದೆ. ರಾಶಿಕಾ ಎಲಿಮಿನೇಟ್‌ ಆಗ್ತಾರೆ ಎಂದಾದಾಗ ಮಾತ್ರ… 

PREV
15
ಈ ವಾರ ಯಾರು ಹೊರಗಡೆ ಹೋಗ್ತಾರೆ?

ಇಷ್ಟುದಿನ ಜಗಳ ಮಾಡಿ ಟೆನ್ಶನ್‌ ಕೊಟ್ಟಿದ್ದಕ್ಕೆ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ಟಾಸ್ಕ್‌ ಕೊಟ್ಟಿದ್ದರು. ಈ ವಾರ ಯಾರು ಹೊರಗಡೆ ಹೋಗ್ತಾರೆ? ನಾವು ಹೋಗ್ತೀವಾ ಎಂದು ಸ್ಪರ್ಧಿಗಳು ಟೆನ್ಶನ್‌ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಸರಿಯಾಗಿ ಚಮಕ್‌ ಕೊಟ್ಟಿದ್ದಾರೆ.

25
ರಾಶಿಕಾ ಟಾಸ್ಕ್‌ ಗೆಲ್ಲಲಿಲ್ಲ

ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ, ಧ್ರುವಂತ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ನಾಮಿನೇಟ್‌ ಆದ ಕೊನೆಯ ಮೂವರು ಸ್ಪರ್ಧಿಗಳಾಗಿದ್ದರು. ಇವರಿಗೆ ಕಿಚ್ಚ ಸುದೀಪ್‌ ಒಂದು ಟಾಸ್ಕ್‌ ಕೊಟ್ಟಿದ್ದರು. ಅವರವರ ಭಾವಚಿತ್ರ ಇರುವ ಫೋಟೋವನ್ನು ಜೋಡಿಸಬೇಕಿತ್ತು. ಆಗ ಧ್ರುವಂತ್‌ ಜೋಡಿಸಿದರೆ, ಸ್ಪಂದನಾ ಕೂಡ ಕಂಪ್ಲೀಟ್‌ ಮಾಡಲಿಲ್ಲ, ರಾಶಿಕಾ ಅಂತೂ ಒದ್ದಾಡಿ, ಒದ್ದಾಡಿ ಆಗದೆ ಬಿಟ್ಟುಬಿಟ್ಟರು.

35
ನೋ ಎಲಿಮಿನೇಶನ್‌

ಇನ್ನೇನು ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಹೊರಡ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆಗ ರಾಶಿಲಾ, ಸೂರಜ್‌ ಸಿಂಗ್‌ ಕೆಲ ಕಾಲ ಅಪ್ಪಿಕೊಂಡಿದ್ದರು. ಅದಾದ ಬಳಿಕ ಎಲ್ಲರಿಗೂ ಬಾಯ್‌ ಹೇಳಿ ಹೊರಟಿದ್ದರು. ಇನ್ನೇನು ಡೋರ್‌ ಒಪನ್‌ ಆಗಿ, ನೋ ಎಲಿಮಿನೇಶನ್‌ ಎಂದು ಬೋರ್ಡ್‌ ಕಂಡಾಗ, ಇಬ್ಬರೂ ಖುಷಿಯಿಂದ ಅಳಲು ಆರಂಭಿಸಿದರು.

45
“ನಾವೂ ಇದ್ದೀವಪ್ಪಾ…”

ರಾಶಿಕಾ ಶೆಟ್ಟಿ ಮನೆಯಲ್ಲಿ ಉಳಿದುಕೊಂಡರು ಎಂದು ಸೂರಜ್‌ ಓಡೋಡಿ ಬಂದು ಅಪ್ಪಿಕೊಂಡಿದ್ದಾರೆ. ಕೆಲ ಕಾಲ ಹೀಗೆ ಇದ್ದಾರೆ. ಇದನ್ನು ನೋಡಿ, ಅಶ್ವಿನಿ ಗೌಡ ಅವರು “ನಾವೂ ಇದ್ದೀವಪ್ಪಾ…” ಎಂದು ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಇದೀಗ ಫುಲ್‌ ಟ್ರೋಲ್‌ ಆಗ್ತಿದೆ. ಒಂದು ವಾರಕ್ಕೆ ಈ ರೇಂಜ್‌ಗೆ ಲವ್‌ ಶುರುವಾಗಿದ್ಯಾ ಎಂದು ಟ್ರೋಲ್‌ ಮಾಡಲಾಗುತ್ತಿದೆ. ಒಟ್ಟಿನಲ್ಲಿ ರಾಶಿಕಾ, ಸೂರಜ್‌ ಆತ್ಮೀಯತೆಗೆ ವೀಕ್ಷಕರಿಂದ ನೆಗೆಟಿವ್‌ ಪ್ರತಿಕ್ರಿಯೆ ಸಿಗ್ತಿದೆ.

55
Expect the unexpected

ಅಂದಹಾಗೆ ಈ ವಾರ ಎಲಿಮಿನೇಶನ್‌ ಇಲ್ಲ, ಮುಂದಿನ ವಾರ ಒಂದು ಅಥವಾ ಇಬ್ಬರು ಮನೆಯಿಂದ ಹೊರಬಂದರೂ ಕೂಡ ಆಶ್ಚರ್ಯವಿಲ್ಲ. Expect the unexpected ಎಂಬ ಥೀಮ್‌ನಲ್ಲಿ ಬಿಗ್‌ ಬಾಸ್‌ ಶುರುವಾಗಿದೆ. ಹೀಗಾಗಿ ಎಲ್ಲವೂ ಈ ಮನೆಯಲ್ಲಿ ಹೊಸತು ಎನ್ನಬಹುದು.

Read more Photos on
click me!

Recommended Stories