BBK 12: ಅಶ್ವಿನಿ ಗೌಡಗೆ ನಾಲ್ಕು ಬಾರಿ ರಕ್ಷಿತಾ ಚಪ್ಪಲಿ ತೋರಿಸಿದ್ರಾ? ಸತ್ಯ ಏನು?

Published : Nov 02, 2025, 11:10 AM IST

Bigg Boss Kannada Season 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ನಾಲ್ಕು ಬಾರಿ ಚಪ್ಪಲಿ ತೋರಿಸಿದ್ದಾರೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಕೂಡ ಈ ರೀತಿ ಆಗಿದೆ. ಹಾಗಾದರೆ ಅಸಲಿ ವಿಷಯ ಏನು?

PREV
15
ಇಡೀ ವಾರ ರಕ್ಷಿತಾ ಶೆಟ್ಟಿ ಹೆಸರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಐದನೇ ವಾರ ಕಾಲೇಜು ಟಾಸ್ಕ್‌ ವಿಷಯ ನಡೆಯಿತು. ಆ ವೇಳೆ ಕಾಲೇಜು ಬಿಟ್ಟರೆ, ಇಡೀ ವಾರ ರಕ್ಷಿತಾ ಶೆಟ್ಟಿ ಹೆಸರು ಓಡಾಡುತ್ತಿತ್ತು. ಈ ವಿಷಯವನ್ನು ಕಿಚ್ಚ ಸುದೀಪ್‌ ಅವರೇ ಹೇಳಿದ್ದಾರೆ.

25
ರಕ್ಷಿತಾ, ಅಶ್ವಿನಿ ಗೌಡ ಮಧ್ಯೆ ಮನಸ್ತಾಪ

ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ರಕ್ಷಿತಾ ಹಾಗೂ ಅಶ್ವಿನಿ ಗೌಡ ಮಧ್ಯೆ ಮೊದಲಿನಿಂದಲೂ ಮನಸ್ತಾಪ ಇದೆ. ಈಗ ಮತ್ತೆ ಈ ಮನಸ್ತಾಪ ಹೆಚ್ಚಾಗಿದೆ.

35
ಅಶ್ವಿನಿ ಗೌಡ ಏನಂದ್ರು?

ಅಶ್ವಿನಿ ಗೌಡ ಅವರು, ಕಿಚ್ಚ ಸುದೀಪ್‌ ಮುಂದೆ “ಮಾತಾಡೋದು ಒಂದು ರೀತಿ ಆಗಿರುತ್ತದೆ, ಜಗಳ ಆಡಬೇಕಾದರೆ ಜಗಳ ಆಡ್ತಿದ್ದಾರೆ ಅಂತ ಅನಿಸೋದಿಲ್ಲ. ಡ್ಯಾನ್ಸ್‌ ಮಾಡಿಕೊಂಡು ಮಾತನಾಡುತ್ತಾರೆ. ಇದನ್ನು ಅನೇಕರು ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಕಲಾವಿದರನ್ನು ನಿಂದಿಸುತ್ತಾರೆ, ಟ್ರಿಗರಿಂಗ್‌ ಆಗೋ ಥರ ಮಾತಾಡ್ತಾರೆ, ನಾಲ್ಕು ಬಾರಿ ಚಪ್ಪಲಿ ತೋರಿಸಿ ಮಾತನಾಡ್ತಾರೆ” ಎಂದು ಹೇಳಿದ್ದಾರೆ.

45
ನಿಜಕ್ಕೂ ಚಪ್ಪಲಿ ತೋರಿಸಿದ್ರಾ?

ಅಶ್ವಿನಿ ಗೌಡ ಅವರಿಗೆ ರಕ್ಷಿತಾ ಚಪ್ಪಲಿ ತೋರಿಸಿದ ಬಗ್ಗೆ ಯಾವ ಎಪಿಸೋಡ್‌ನಲ್ಲಿಯೂ ತೋರಿಸಲಾಗಿಲ್ಲ. ಇನ್ನು ಜಿಯೋಹಾಟ್‌ಸ್ಟಾರ್ 24/7 ಲೈವ್‌ನಲ್ಲಿಯೂ‌ ಕೂಡ ಈ ಬಗ್ಗೆ ತೋರಿಸಿಲ್ಲ. 

55
ಕಿಚ್ಚ ಸುದೀಪ್‌ ಮಾತನಾಡಲಿಲ್ಲ

ಚಪ್ಪಲಿ ವಿಷಯ ಬಂದಾಗ, ಕಿಚ್ಚ ಸುದೀಪ್‌ ಅವರು ಮಾತನಾಡಿಲ್ಲ. ಹೀಗಾಗಿ ಈ ವಿಷಯ ಬಹಳ ಗೊಂದಲವನ್ನುಂಟು ಮಾಡಿದೆ. ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಚರ್ಚೆಯೂ ಮಾಡಿದ್ದಾರೆ.

Read more Photos on
click me!

Recommended Stories