ಇನ್ಯಾರೂ ಏನೂ ಮಾತಾಡೋ ಹಾಗಿಲ್ಲ: ತನಿಷಾ ಕುಪ್ಪಂಡ ಬಗ್ಗೆ ಅಂಥ ಮಾತಾಡಿದ‌ Bigg Boss ವರ್ತೂರು ಸಂತೋಷ್

Published : Sep 30, 2025, 04:51 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸ್ಪರ್ಧಿ ವರ್ತೂರು ಸಂತೋಷ್‌ ಹಾಗೂ ತನಿಷಾ ಕುಪ್ಪಂಡ ನಡುವೆ ಆತ್ಮೀಯತೆ ಇತ್ತು. ಅನೇಕರು ಇವರಿಬ್ಬರು ಲವ್‌ನಲ್ಲಿದ್ದಾರೆ, ಮದುವೆ ಆಗುತ್ತಿದ್ದಾರೆ ಎಂದು ಹೇಳಿದ್ದರು. ಈಗ ವರ್ತೂರು ಸಂತೋಷ್‌ ಅವರು ಈ ವಿವಾದಕ್ಕೆ ಬ್ರೇಕ್‌ ಹಾಕಿದ್ದಾರೆ. 

PREV
15
ಮದುವೆ ಯಾವಾಗ ಆಗ್ತಾರೆ?

ವರ್ತೂರು ಸಂತೋಷ್‌ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. “ಮುಂದಿನ ವರ್ಷವೇ ಮದುವೆ ಆಗ್ತೀನಿ ಅಂತ ಹೇಳಿದ್ದೆ. ಭಗವಂತನ ಇಚ್ಛೆಯಿಂದ ಆಗಿಲ್ಲ ಅಷ್ಟೇ. ಮದುವೆ ಎನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರತ್ತೆ. ಮದುವೆ ಒಂದೇ ಸಲ ಆಗೋದು ಅಷ್ಟೇ. ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ ಅಂತ ಹೇಳ್ತಾರೆ” ಎಂದು ವರ್ತೂರು ಸಂತೋಷ್‌ ಹೇಳಿದ್ದಾರೆ.

25
ಗೆಟ್‌ ಟು ಗೆದರ್‌ ಪಾರ್ಟಿ

“ತನಿಷಾ ಕುಪ್ಪಂಡ ನನಗೆ ಅಕ್ಕ ಇದ್ದ ಹಾಗೆ. ತನಿಷಾ ಹಾಗೂ ನಾನು ಒಳ್ಳೆಯ ಸ್ನೇಹಿತರು. ನಾನು ತನಿಷಾಳನ್ನು ಅಕ್ಕನ ಸ್ಥಾನದಲ್ಲಿ ನೋಡಲು ಇಷ್ಟಪಡುವೆ. ಬಿಗ್‌ ಬಾಸ್‌ ಮನೆಯಲ್ಲಿ ತನಿಷಾ ಅವರು ನನ್ನ ಸಹಪಾಠಿ. ಕೆಲವೊಂದು ವಿಷಯ ಕೇಳಿ ನನ್ನ ಕಿವಿಯೇ ಕೂತುಬಿದ್ದೋಯ್ತು. ಅವರಿಗೂ ಕೆಲವು ಮುಜುಗರ ತಂದಿವೆ. ಬಿಗ್‌ ಬಾಸ್‌ ಸ್ಪರ್ಧಿಗಳ ಜೊತೆ ನಾವು ಗೆಟ್‌ ಟು ಗೆದರ್‌ ಮಾಡುತ್ತೇನೆ, ನಾವು ಎಲ್ಲರ ಜೊತೆ ಚೆನ್ನಾಗಿದ್ದೇವೆ” ಎಂದು ವರ್ತೂರು ಸಂತೋಷ್‌ ಹೇಳಿದ್ದಾರೆ.

35
ಬಲೆ ಹಾಕಿಲ್ಲ

“ನನ್ನ ಕಡೆಯಿಂದ ತನಿಷಾ ಕುಪ್ಪಂಡ ಅವರಿಗೆ ಅಥವಾ ಅವರ ಅಭಿಮಾನಿಗಳಿಗೆ ಬೇಸರ ಆಗಿದ್ದರೆ ಕ್ಷಮೆ ಕೇಳುವೆ. ಬೆಂಕಿಯ ಬಲೆ ಎಂದು ಹೇಳಿದ್ದೀರಿ. ಬೆಂಕಿ ಹಾಕುವುದು ನಾನಲ್ಲ, ಬಲೆ ನಾನು ಹಾಕಿಲ್ಲ” ಎಂದು ವರ್ತೂರು ಸಂತೋಷ್‌ ಹೇಳಿದ್ದಾರೆ.

45
ಹತ್ತು ಲಕ್ಷ ಘೋಷಣೆ

“ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ರನ್ನರ್‌ ಅಪ್‌ ಯಾರು ಆಗ್ತಾರೋ ಅವರಿಗೆ ನಾನು ಹತ್ತು ಲಕ್ಷ ರೂಪಾಯಿ ಕೊಡ್ತೀನಿ. ವಿಜೇತರಿಗೆ ಹಾಗೂ ರನ್ನರ್‌ ಅಪ್‌ ಆದವರಿಗೆ ಸಣ್ಣ ಮಟ್ಟದಲ್ಲಿ ವ್ಯತ್ಯಾಸ ಇರುವುದು. ಹತ್ತು ಲಕ್ಷ ರೂಪಾಯಿಯನ್ನು ನಾನು ಕ್ಯಾಶ್‌ ಆಗಿ ಕೊಡುವೆ, ಅದನ್ನು ಅವರು ಬಳಸಿಕೊಳ್ಳಲಿ” ಎಂದು ವರ್ತೂರು ಸಂತೋಷ್‌ ಹೇಳಿದ್ದಾರೆ.

55
ಹಳ್ಳಿಕಾರ್‌ ಎತ್ತು

ವರ್ತೂರು ಸಂತೋಷ್‌ ಅವರು ಬಿಗ್‌ ಬಾಸ್‌ ಮನೆಗೆ ಹಳ್ಳಿಕಾರ್‌ ಎತ್ತುಗಳನ್ನು ಕರೆದುಕೊಂಡು ಬರುತ್ತಾರಂತೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories