ಅಂದಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆಗೆ ಒಟ್ಟು 5 ಮಂದಿ ಎಂಟ್ರಿ ಕೊಟ್ಟಿದ್ದರು. ದಿವ್ಯಾ ಉರುಡುಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಫಿನಾಲೆಯಲ್ಲಿದ್ದರು. ಟಾಪ್ 5ನೇ ಸ್ಪರ್ಧಿಯಾಗಿ ದಿವ್ಯಾ ಉರುಡುಗ ಮನೆಯಿಂದ ಹೊರಬಂದರು. ರೂಪೇಶ್ ರಾಜಣ್ಣ 4ನೇ ಸ್ಥಾನ ಪಡೆದರೆ ದೀಪಿಕಾ ದಾಸ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟರು.