ಮದುವೆಯಾಗಿ ಮಗು ಇರೋ ಹುಡುಗಿಗೆ ನಾನು ಬಾಳು ಕೊಟ್ರೆ, ಅವಳ ಮಗಳನ್ನು ನೋಡ್ಕೊಂಡ್ರೆ ತಪ್ಪೇನು?‌ Bigg Boss ರಂಜಿತ್

Published : Jun 13, 2026, 07:53 PM IST

Bigg Boss Ranjith: ಬಿಗ್‌ ಬಾಸ್‌ ರಂಜಿತ್‌ ಅವರ ಪತ್ನಿ ಮಾನಸಾ ಗೌಡಗೆ ಈ ಹಿಂದೆ ಮದುವೆಯಾಗಿ ಮಗು ಕೂಡ ಇದೆಯಂತೆ. ಈ ಹಿಂದೆ ಅಕ್ಕ ರಶ್ಮಿ ಜೊತೆಗಿನ ಜಗಳದಲ್ಲಿ ಈ ವಿಷಯ ಜಗಳ ಆಗಿತ್ತು. ಈಗ ರಂಜಿತ್‌ ಹಾಗೂ ಮಾನಸಾ ಅವರು ಸಂದರ್ಶನವೊಂದರಲ್ಲಿ ಹೆಂಡ್ತಿಗೆ ಎರಡನೇ ಮದುವೆ ಆಗಿರೋ ವಿಷಯವನ್ನು ಹೇಳಿದ್ದಾರೆ. 

PREV
15
ನನ್ನ ಹೆಂಡ್ತಿಗೆ ಮಾತ್ರ ಈ ರೀತಿ ಆಗಿರೋದಾ?

ನನ್ನ ಪತ್ನಿಗೆ ಮಾತ್ರ ಎರಡನೇ ಮದುವೆ ಆಗಿರೋದಾ? ನನ್ನ ತರ ಬೇರೆಯವರಿಗೆ ಹೀಗೆ ಜೀವನ ಇರಬಹುದು. ಒಂದು ಹುಡುಗಿಗೆ ಇನ್ನೊಂದು ಲೈಫ್‌ ಸಿಗಬಾರದಾ? ಆ ಮಗುಗೆ ಇನ್ನೊಂದು ಜೀವನ ಸಿಗಬಾರದಾ? ಸೆಲೆಬ್ರಿಟಿ ಜೀವನದಲ್ಲಿ ಅಥವಾ ಸಾಮಾನ್ಯ ಜನರ ಬದುಕಿನಲ್ಲಿ ಈ ರೀತಿ ಪರಿಸ್ಥಿತಿ ಬಂದಿರುತ್ತದೆ ಎಂದು ರಂಜಿತ್‌ ಹೇಳಿದ್ದಾರೆ.

25
ಹಳೆ ವಿಷಯ ಈಗ ಯಾಕೆ ಬೇಕು?

ನನ್ನ ಹೆಂಡ್ತಿ ಜೀವನದಲ್ಲಿ ಈ ಹಿಂದೆ ಏನಾಗಿತ್ತು? ಯಾಕೆ ಈಗ ಹೀಗೆ ಲೈಫ್‌ ಬೇಕು? ಮಗುವನ್ನು ಯಾಕೆ ಕರೆದುಕೊಂಡು ಓಡಾಡ್ತಾರೆ ಎಂಬ ಮಾತುಗಳು ಬರುತ್ತವೆ. ನಾನು ನನ್ನ ಹೆಂಡ್ತಿಯನ್ನು ಒಪ್ಪಿಕೊಂಡಮೇಲೆ ಅವಳ ಮಗಳನ್ನು ಕೂಡ ನಾನು ನೋಡಿಕೊಳ್ತೀನಿ. ದೊಡ್ಡ ಸೆಲೆಬ್ರಿಟಿಗಳ ಲೈಫ್‌ನಲ್ಲಿ ಹೀಗೆ ಆಗಿರುತ್ತವೆ, ಅದನ್ನು ಯಾರೂ ಪ್ರಶ್ನೆ ಮಾಡೋದಿಲ್ಲ ಎಂದು ರಂಜಿತ್‌ ಹೇಳಿದ್ದಾರೆ.

35
ನನ್ನ ಹೆಂಡ್ತಿಯೇ ನನ್ನ ಲವ್

ನನ್ನ ಹೆಂಡ್ತಿ ನನ್ನ ಆದ್ಯತೆ, ಅವಳೇ ನನ್ನ ಲವ್.‌ ಅವಳಿಗೆ ಏನು ಕೊಡಬೇಕು‌ ಎಂದು ನನಗೆ ಗೊತ್ತಿದೆ, ಎಷ್ಟು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ. ನನ್ನ ಹೆಂಡ್ತಿಗೆ ಇನ್ನೊಂದು ಜೀವನ ಸಿಗಬಾರದಾ ಎಂದು ರಂಜಿತ್‌ ಹೇಳಿದ್ದಾರೆ.

45
ನನ್ನ ಹೆಂಡ್ತಿ ನೀಟ್‌ ಆಗಿ ಪ್ಲ್ಯಾನ್‌ ಮಾಡ್ತಾಳೆ

ನನ್ನ ಪತ್ನಿ ನನ್ನನ್ನು ಗೌರವಿಸುತ್ತಾಳೆ, ಇಬ್ಬರೂ ಅರ್ಥ ಮಾಡಿಕೊಂಡಿದ್ದೇವೆ, ನಮ್ಮಿಬ್ಬರಿಗೆ ಯಾವುದೇ ಸಮಸ್ಯೆ ಇಲ್ಲ. ಸಂಗಾತಿ ಇಬ್ಬರೂ ಅರ್ಥ ಮಾಡಿಕೊಂಡು ಹೋದರೆ ಜೀವನ ಚೆನ್ನಾಗಿರುತ್ತದೆ. ನನ್ನ ಹೆಂಡ್ತಿ ಡ್ರೆಸ್‌ನ್ನು ತಾಳ್ಮೆಯಿಂದ ನೀಟ್‌ ಆಗಿ ಡ್ರೆಸ್‌ ರೆಡಿ ಮಾಡುತ್ತಾಳೆ, ಅವಳು ಜೀವನವನ್ನು ಚೆನ್ನಾಗಿ ಪ್ಲ್ಯಾನ್‌ ಮಾಡುತ್ತಾಳೆ ಎಂದು ರಂಜಿತ್‌ ಹೇಳಿದ್ದಾರೆ.

55
ನಮ್ಮ ಮಧ್ಯೆ ಹೊಂದಾಣಿಕೆ ಇದೆ!

“ಹೊರಗಡೆ ಜನರು ಏನು ಬೇಕಿದ್ರೂ ಹೇಳಬಹುದು, ಆದರೆ ನಾವು ಹೇಗೆ? ಬದುಕುತ್ತಿದ್ದೀವಿ? ಏನು ಮಾಡುತ್ತಿದ್ದೀವಿ? ನಮ್ಮ ಮಧ್ಯೆ ಎಷ್ಟು ಹೊಂದಾಣಿಕೆ ಎಂದು ನಮಗೆ ಗೊತ್ತಿದೆ. ಇಂಥ ಜೀವನ ಸಿಕ್ಕಿರೋದಿಕ್ಕೆ ದಿನವೂ ದೇವರಿಗೆ ಧನ್ಯವಾದಗಳನ್ನು ಹೇಳ್ತೀನಿ” ಎಂದು ಮಾನಸಾ ಗೌಡ ಅವರು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories