ನಟಿ ಮೇಘಾ ಶೆಟ್ಟಿ ಕ್ಯೂಟ್​ ಫೋಟೋಶೂಟ್​: ಪಡ್ಡೆಗಳ ನಿದ್ದೆಗೆಡಿಸಿದ 'ಜೊತೆ ಜೊತೆಯಲಿ' ತಾರೆ

Published : Sep 18, 2026, 04:50 PM IST

'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಕಿರುತೆರೆಯಿಂದ ಬೆಳ್ಳಿತೆರೆಗೆ ಹಾಗೂ ಇದೀಗ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿದ್ದಾರೆ. ಇತ್ತೀಚೆಗೆ ಅವರು ಮಾಡಿಸಿದ ಹಾಟ್ ಫೋಟೋಶೂಟ್ ಮತ್ತು ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

PREV
16
ಜೊತೆ ಜೊತೆಯಲಿ ಸೀರಿಯಲ್​​ನ ಅನು ಸಿರಿಮನೆ

ಜೊತೆ ಜೊತೆಯಲಿ ಸೀರಿಯಲ್​​ನ ಅನು ಸಿರಿಮನೆ ಎಂದೇ ಫೇಮಸ್​​ ಆಗಿರೋ ನಟಿ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಂದನವನ ಪ್ರವೇಶಿಸಿದವರು. ನಂತರ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲಿ ನಟಿಸಿದರು. ನಂತರ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದಲ್ಲಿದಲ್ಲಿ ಕಾಣಿಸಿಕೊಂಡರು.

26
ಎಂಬಿಎ ಪದವೀಧರೆ

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮೇಘಾ 1998ರ ಆಗಸ್ಟ್ 4ರಂದು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಬಂಟ್ ಕುಟುಂಬದಲ್ಲಿ ಜನಿಸಿದರು. ಎಂಬಿಎ ಮುಗಿಸಿರುವ ನಟಿ ಸದ್ಯ ಬಣ್ಣದ ಲೋಕದಲ್ಲಿ ಬಿಜಿಯಾಗಿದ್ದಾರೆ.

36
ಸಕತ್​ ಫೋಟೋಶೂಟ್​

ಇದೀಗ ನಟಿ ಸಕತ್​ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಮಿಂಚುತ್ತಿದ್ದಾರೆ. ಇವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

46
ಹಾಟ್​ ಫೋಟೋಶೂಟ್​

ಅಷ್ಟಕ್ಕೂ ನಟಿ ಮೇಘಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುತ್ತಿದ್ದಾರೆ. ಜೊತೆಜೊತೆಯಲಿ ಸೀರಿಯಲ್​ನಲ್ಲಿ ಸಿಂಪಲ್​ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನಟಿಯ ಈ ಅವತಾರವನ್ನು ಅವರ ಫ್ಯಾನ್ಸ್​ ಆರಂಭದಲ್ಲಿ ತಡೆದುಕೊಳ್ಳದೇ ಟ್ರೋಲ್​ ಮಾಡಿದ್ದೂ ಇದೆ.

56
ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್

ಈಚೆಗೆ, ಮೇಘಾ ಶೆಟ್ಟಿ ಏಕಾಏಕಿ ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದರು. ಮೇಘಾ ಶೆಟ್ಟಿ ‘ಬೆಂಕಿಯಲ್ಲೂ ತಂಪು ಕಂಡೆನು’ ಅಂತ ಕುಣಿದಿದ್ದೇ ಕುಣಿದಿದ್ದು, ಪಡ್ಡೆ ಹೈಕಳು ಥಂಡಾ ಹೊಡೆದಿದ್ದರು. ಸದ್ಯ ಮೇಘಾ ಕುಣಿತ ಮೆಗಾಟ್ರೆಂಡ್ ಸೃಷ್ಟಿ ಮಾಡಿಬಿಟ್ಟಿತ್ತು.

66
ಮರಾಠಿ ಚಿತ್ರರಂಗಕ್ಕೆ ಎಂಟ್ರಿ

ಅಂದಹಾಗೆ, ಮೇಘಾ ಶೆಟ್ಟಿ (Megha Shetty) ಮರಾಠಿ ಚಿತ್ರರಂಗಕ್ಕೂ ಕಾಲಿರಿಸಿದ್ದಾರೆ. ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾದ 'ಆಪರೇಷನ್ ಲಂಡನ್ ಕೆಫೆ' (Operation London Cafe) ನಲ್ಲಿ ಇವರು ನಟಿಸಿದ್ದಾರೆ. ಈ ಚಚಿತ್ರ ಕನ್ನಡದ ಸೇರಿದಂತೆ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories