ವಿಚ್ಛೇದನ ಪಡೆದ ಬಿಗ್ ಬಾಸ್ ಚೈತ್ರಾ ವಾಸುದೇವನ್; ಕಾಮೆಂಟ್ ಸೆಕ್ಷನ್ ಆಫ್‌ ಮಾಡಿದ ನಿರೂಪಕಿ!

First Published | Jul 28, 2023, 11:08 AM IST

ತುಂಬಾ ನೋವಿನಿಂದ ವಿಚ್ಛೇದನ ಪಡೆಯುತ್ತಿರುವ ವಿಚಾರ ಹಂಚಿಕೊಂಡ ಚೈತ್ರಾ. ಬೇಸರ ಮಾಡಿಕೊಂಡ ಅಭಿಮಾನಿಗಳಿಗೆ ಮೂಡಿತ್ತು ಸಾವಿರ ಪ್ರಶ್ನೆ.... 
 

ಕನ್ನಡ ಕಿರುತೆರೆ ಜನಪ್ರಿಯಾ ನಿರೂಪಕಿ ಚೈತ್ರಾ ವಾಸುದೇವನ್ ವಿಚ್ಛೇದನ ಪಡೆದಿರುವ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ ತಿಳಿಸಿದ್ದಾರೆ. 

ಇಷ್ಟು ದಿನಗಳಿಂದ ಚೈತ್ರಾ ತುಂಬಾನೇ ಸೈಲೆಂಟ್ ಆಗಿದ್ದರು ಎಲ್ಲಿಯೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ ಹಾಗೆ ಹೀಗೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದರು. ಈಗ ಅದಕ್ಕೆಲ್ಲಾ ಚೈತ್ರಾ ಉತ್ತರ ಕೊಟ್ಟಿದ್ದಾರೆ.

Tap to resize

 'ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿ ನಂತರ ನಾನು ನನ್ನ ವಿಚ್ಚೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ನನ್ನ ಈ ಸ್ಥಿತಿಯಿಂದ ಹೊರ ಬರಲು ಕಷ್ಟ ಪಡುತ್ತಿದ್ದೀನಿ'

'ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ'

ನನ್ನ ಸೇವೆಯನ್ನು ಇನ್ನುಂದೆಯು ಮುಂದುವರೆಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ' ಎಂದು ಚೈತ್ರಾ ಬರೆದುಕೊಂಡಿದ್ದಾರೆ. 

ಕೊನೆಗೂ ವಿಚಾರ ಹೇಳಿಕೊಳ್ಳುತ್ತಿರುವ ಈ ಸಮಯದಲ್ಲಿ ನಿಮ್ಮ ಪ್ರೀತಿ ಅಗತ್ಯವಿದೆ ಹಾಗೂ ಈ ಕಷ್ಟದ ದಿನಗಳನ್ನು ಎದುರಿಸಲು ಪ್ರತಿದಿನ ಕಷ್ಟ ಪಡುತ್ತಿರುವೆ' ಎಂದು ಚೈತ್ರಾ ಹೇಳಿದ್ದಾರೆ.

ಈ ಪೋಸ್ಟ್‌ ಮಾಡಿದ ತಕ್ಷಣವೇ ಚೈತ್ರಾ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಚೈತ್ರಾ ಟಿವಿ ಕಾರ್ಯಕ್ರಮಗಳ ನಿರೂಪಣೆ ಜೊತೆ ಸ್ವಂತ ಈವೆಂಟ್ ಕಂಪನಿಯನ್ನು ಹೊಂದಿದ್ದಾರೆ. 

Latest Videos

click me!