ಕಿರುತೆರೆ ಸ್ಟಾರ್‌ ಮಗಳ ನಮಾಜ್‌ ವೀಡಿಯೋ ವೈರಲ್‌; ಪುಟಾಣಿ ತಾರಾ ಟ್ರೋಲ್‌

Published : Jul 27, 2023, 05:27 PM IST

ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಟೆಲಿವಿಷನ್‌ ಜಗತ್ತಿನ ಫೇಮಸ್‌ ಕಪಲ್‌.2011 ರಲ್ಲಿ ಇಬ್ಬರೂ ವಿವಾಹವಾದರು, ಮತ್ತು ಏಳು ವರ್ಷಗಳ ನಂತರ, ಅವರ ಮಕ್ಕಳಾದ ಖುಷಿ ಮತ್ತು ರಾಜ್‌ವೀರ್‌ನ ಸಾಕು ಪೋಷಕರಾಗಲು ನಿರ್ಧರಿಸಿದರು. ನಂತರ, ಆಗಸ್ಟ್ 21, 2019 ರಂದು, ಮಹಿ ಮತ್ತು ಜೇ ದಂಪತಿ ತಾರಾ ಎಂಬ ಮಗಳ ಪೋಷಕರಾದರು. ಈ ಸ್ಟಾರ್ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ನಿರಂತರವಾಗಿ ತಮ್ಮ ಕುಟುಂಬದ  ಬಗ್ಗೆ  ಅಪ್‌ಡೇಟ್ಸ್‌ ಹಂಚಿಕೊಳ್ಳುತ್ತಿರುತ್ತಾರೆ. ಇಬ್ಬರೂ ತಮ್ಮ ಜೀವನಶೈಲಿ ಮತ್ತು ಆಯ್ಕೆಗಳಿಗಾಗಿ ಭಾರಿ ಟೀಕೆಗಳನ್ನು ಎದುರಿಸಿದ್ದಾರೆ. ಈಗ ಅವರ ಮಗಳು ತಾರಾ ನಮಾಜ್‌ ಓದುವ ವೀಡಿಯೋವೊಂದು ವೈರಲ್‌ ಆಗಿದ್ದು ಸಖತ್‌ ಟ್ರೋಲ್‌ಗೆ ಗುರಿಯಾಗುತ್ತಿದೆ 

PREV
15
ಕಿರುತೆರೆ ಸ್ಟಾರ್‌ ಮಗಳ ನಮಾಜ್‌ ವೀಡಿಯೋ ವೈರಲ್‌; ಪುಟಾಣಿ ತಾರಾ ಟ್ರೋಲ್‌

ಜುಲೈ 24, 2023 ರಂದು, ಜಯ್ ಭಾನುಶಾಲಿ ಮತ್ತು ಮಹಿ ವಿಜ್ ತಮ್ಮ ಮಗಳು, ತಾರಾ ಅವರ ಇನ್‌ಸ್ಟಾಗ್ರಾಮ ಹ್ಯಾಂಡಲ್‌ನಲ್ಲಿ ಪುಟ್ಟ ಮಗುವಿನ ವೀಡಿಯೊ  ಹಂಚಿಕೊಂಡರು.

25

ವಿಡಿಯೋದಲ್ಲಿ ತಾರಾ ನಮಾಜ್ ಓದುತ್ತಿದ್ದು. ಅವಳು ಮುದ್ರಿತ ಕಫ್ತಾನ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದಾಳೆ. ವೀಡಿಯೋಗೆ ಶುಕ್ರನ್  ಎಂಬ ಶೀರ್ಷಿಕೆ ನೀಡಿದ್ದು ತಾರಾಳ ಪೋಷಕರು ಉಲ್ಲೇಖಿಸಿಲಾಗಿದೆ ಮತ್ತು ಮಡಿಸಿದ ಕೈಗಳ ಎಮೋಜಿಯನ್ನು ಸೇರಿಸಿದ್ದಾರೆ.

35

ಆದಾಗ್ಯೂ, ಪುಟ್ಟ ತಾರಾಳ ಈ ನಮಾಜ್‌ ವೀಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡ ತಕ್ಷಣ, ಜನರು ತಾರಾ ಮತ್ತು ಆಕೆಯ ಪೋಷಕರನ್ನು ಕ್ರೂರವಾಗಿ ಟ್ರೋಲ್ ಮಾಡಲು ಪ್ರಾರಂಭಿಸಿದರು.

45

'ಮಗಳನ್ನು ನಿಮ್ಮ ನಾಟಕದ ಭಾಗವಾಗಿ ಮಾಡಬೇಡಿ, ಹಿಂದೂವಾಗಿ ಸ್ವಲ್ಪವಾದರೂ ನಾಚಿಕೆ ಇರಲಿ' ಎಂದು ಒಬ್ಬ ನೆಟಿಜನ್ ಉಲ್ಲೇಖಿಸಿದರೆ, 'ಇಲ್ಲಿವರೆಗೆ ತಾರಾಳ ಎಲಾ ವೀಡಿಯೋ ಇಷ್ಷವಾಗಿತ್ತು  ಆದರೆ ಇದು ಅಸಹ್ಯಕರ ಮತ್ತು ನಿರಾಶಾದಾಯಕ' ಎಂದು ಮತ್ತೊಬ್ಬರು ಬರೆದಿದ್ದಾರೆ.

55

ಒಂದು ಕಡೆ  ಜನರು ಈ ದಂಪತಿ ವಿರುದ್ಧ ಕಿಡಿಕಾರಿದರೆ, ಮತ್ತೊಂದಡೆ ದಂಪತಿ ಮತ್ತು ಅವರ ಪುಟ್ಟ ಮಗುವಿನ ಕೆಲವು ಕಟ್ಟಾ ಅಭಿಮಾನಿಗಳು  ತಾರಾಗೆ ಪ್ರೀತಿ ಮತ್ತು ಬೆಂಬಲವನ್ನು ತೋರಿಸಿ ಕಾಮೆಂಟ್‌ ಮಾಡಿದ್ದಾರೆ.

Read more Photos on
click me!

Recommended Stories