Photos: ಪ್ಯಾರೀಸ್‌ನಲ್ಲಿ‌ Chaitra Vasudevan ಪ್ರಿ ವೆಡ್ಡಿಂಗ್‌ ಫೋಟೋಶೂಟ್!

Published : Feb 14, 2025, 01:41 PM ISTUpdated : Mar 07, 2025, 08:01 PM IST

ಬಿಗ್‌ ಬಾಸ್‌ ಖ್ಯಾತಿಯ ಚೈತ್ರಾ ವಾಸುದೇವನ್‌ ಮಾರ್ಚ್‌ನಲ್ಲಿ ಎರಡನೇ ಮದುವೆಯಾಗುತ್ತಿದ್ದಾರೆ. ಉದ್ಯಮಿ ಜಗದೀಪ್‌ ಅವರೊಂದಿಗೆ ಲವ್‌ ಮ್ಯಾರೇಜ್‌ ಆಗುತ್ತಿದ್ದು, ಪ್ಯಾರಿಸ್‌ನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

PREV
16
Photos: ಪ್ಯಾರೀಸ್‌ನಲ್ಲಿ‌ Chaitra Vasudevan ಪ್ರಿ ವೆಡ್ಡಿಂಗ್‌ ಫೋಟೋಶೂಟ್!

ನಿರೂಪಕಿ, ʼಬಿಗ್‌ ಬಾಸ್‌ ಕನ್ನಡ 7’ ಸ್ಪರ್ಧಿ ಚೈತ್ರಾ ವಾಸುದೇವನ್‌ ಅವರು ಮಾರ್ಚ್‌ ತಿಂಗಳಲ್ಲಿ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದಾರೆ. ಡಿಗ್ರಿ ಮುಗಿಯುತ್ತಿದ್ದಂತೆ ಮದುವೆಯಾಗಿದ್ದ ಚೈತ್ರಾ ಅವರು ಕಳೆದ ವರ್ಷ ಡಿವೋರ್ಸ್‌ ಪಡೆದುಕೊಂಡರು. ಈಗ ಅವರು ಮತ್ತೆ ಮದುವೆಯಾಗುತ್ತಿದ್ದಾರೆ. ಈ ಬಾರಿ ಲವ್‌ ಮ್ಯಾರೇಜ್‌ ಮಾಡಿಕೊಳ್ತಿದ್ದಾರೆ. ಈಗಾಗಲೇ ಅನೇಕರಿಗೆ ಅವರು ಮದುವೆಯ ಆಹ್ವಾನ ನೀಡಿದ್ದಾರೆ. ಅಷ್ಟೇ ಅಲ್ಲದೆ ಪ್ಯಾರೀಸ್‌ನಲ್ಲಿ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಪ್ರಿ ವೆಡ್ಡಿಂಗ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

 

26

ಮದುವೆ ಯಾವಾಗ? 
ಚೈತ್ರಾ ವಾಸುದೇವನ್‌ ಅವರು ಮಾರ್ಚ್‌ನಲ್ಲಿ ಮದುವೆ ಆಗುತ್ತಿದ್ದಾರೆ. ಇನ್ನೂ ಅವರು ದಿನಾಂಕವನ್ನು ರಿವೀಲ್‌ ಮಾಡಿಲ್ಲ. ಬೆಂಗಳೂರಿನಲ್ಲಿ ಈ ಮದುವೆ ನಡೆಯಲಿದೆ. ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ಹೊಂದಿರುವ ಅವರು ಸರಳವಾಗಿ ಮದುವೆಯಾಗುತ್ತಿದ್ದರೂ ಕೂಡ, ಸ್ವಲ್ಪ ವಿಶೇಷ ಇರಲಿದೆಯಂತೆ. ಇವರ ಮದುವೆ ಪ್ಲ್ಯಾನ್‌ ಇವರೇ ರೆಡಿ ಮಾಡಿದ್ದಾರಂತೆ.
 

 

36

ಪ್ರಿ ವೆಡ್ಡಿಂಗ್‌ ಫೋಟೋಶೂಟ್‌
ತಿಂಗಳುಗಳ ಹಿಂದೆಯೇ ಚೈತ್ರಾ ವಾಸುದೇವನ್‌ ಅವರು ಪ್ಯಾರೀಸ್‌ನಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದ ಫೋಟೋ, ವಿಡಿಯೋ ಶೇರ್‌ ಮಾಡಿದ್ದರು. ಆ ಬಳಿಕ ಅವರು ತಾವು ಮದುವೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದರು. ಅದಾಗಿ ನಾಲ್ಕು ದಿನಗಳ ಬಳಿಕ ತಾವು ಯಾರನ್ನು ಮದುವೆ ಆಗುತ್ತಿದ್ದೇವೆ ಎಂದು ತಿಳಿಸಿ, ಫೋಟೋ ರಿವೀಲ್‌ ಮಾಡಿದ್ದರು.

46

ಹುಡುಗ ಯಾರು?
ಈ ಹಿಂದೆ ಚೈತ್ರಾ ಅವರು ಉದ್ಯಮಿಯೋರ್ವರನ್ನು ಮದುವೆಯಾಗಿದ್ದರು. ನಾಲ್ಕು ವರ್ಷಗಳ ಕಾಲ ಅವರು ಜೀವನ ಸರಿ ಹೋಗತ್ತೆ ಅಂತ ಕಾದಿದ್ದರು. ಸಮಸ್ಯೆ ಬಗೆಹರಿದಿಲ್ಲ ಎಂದಾಗ ಅವರು ಡಿವೋರ್ಸ್‌ ತಗೊಂಡಿದ್ದರು. “ನನ್ನ ಜೀವನ ಹೀಗಾಯ್ತು ಅಂತ ಅಪ್ಪ-ಅಮ್ಮನಿಗೆ ಬೇಸರ ಇದೆ” ಎಂದು ಚೈತ್ರಾ ಮನನೊಂದುಕೊಂಡು ಹೇಳಿದ್ದರು. ಅಂದಹಾಗೆ ಚೈತ್ರಾ ವಾಸುದೇವನ್‌ ಈಗ ಉದ್ಯಮಿ ಜಗದೀಪ್‌ ಅವರನ್ನು ಮದುವೆಯಾಗುತ್ತಿದ್ದಾರೆ.
 

56

ಲವ್‌ ಮ್ಯಾರೇಜ್‌
ಈ ಹಿಂದೆ ಅರೇಂಜ್‌ ಮ್ಯಾರೇಜ್‌ ಮಾಡಿಕೊಂಡಿದ್ದ ಚೈತ್ರಾ ವಾಸುದೇವನ್‌ ಈಗ ಲವ್‌ ಮ್ಯಾರೇಜ್‌ ಮಾಡಿಕೊಳ್ತಿದ್ದಾರೆ. ಕೆಲಸದ ನಿಮಿತ್ತ ಜಗದೀಪ್‌ ಅವರು ಚೈತ್ರಾಗೆ ಫೋನ್‌ ಮಾಡಿದ್ದರು. ಆನಂತರ ಚೈತ್ರಾ ಕೆಲಸ ಜಗದೀಪ್‌ಗೆ ಇಷ್ಟ ಆಯ್ತು. ಆ ನಂತರ ಈ ಜೋಡಿ ಮಧ್ಯೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿತ್ತು. ಈ ಬಗ್ಗೆ ಚೈತ್ರಾ ಅವರೇ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. 

66

ನಿರೂಪಣೆ, ಇವೆಂಟ್‌ ಮ್ಯಾನೇಜ್‌ಮೆಂಟ್‌
ಚೈತ್ರಾ ವಾಸುದೇವನ್‌ ಅವರು ನಿರೂಪಕಿಯಾಗಿದ್ದು, ಕೆಲ ಶೋಗಳ ನಿರೂಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರು ಕಾಲೇಜು ಸಮಯದಿಂದಲೂ ಅನೇಕ ವೇದಿಕೆಗಳ ನಿರೂಪಣೆ ಮಾಡಿದ್ದರು. ಇನ್ನು ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿ ಹೊಂದಿರುವ ಅವರು ಅನೇಕ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಈ ಮೂಲಕ ಅವರು ಬೆಳೆಯುವುದರ ಜೊತೆಗೆ ಇನ್ನೂ ಅನೇಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ. 

Read more Photos on
click me!

Recommended Stories