Published : Feb 12, 2025, 03:19 PM ISTUpdated : Feb 12, 2025, 03:48 PM IST
ಚಿತ್ರದುರ್ಗದ ಹಳ್ಳಿ ಹುಡುಗಿ ಗಗನಾ ಭಾರಿ ಜೀ ಕನ್ನಡದ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಆರಂಭದಲ್ಲಿ ಸರಳವಾಗಿದ್ದ ಗಗನಾ ಈಗ ಸ್ಟೈಲಿಶ್ ಆಗಿ ಬದಲಾಗಿದ್ದಾರೆ. ಇದೆಲ್ಲದರ ಹಿಂದಿನ ಕೈ ಯಾವುದು ಗೊತ್ತಾ?
ಚಿತ್ರದುರ್ಗದ ಹಳ್ಳಿ ಹುಡುಗಿ ಗಗನಾ ಭಾರಿ ಕಳೆದೆರಡು ವರ್ಷಗಳಿಂದ ಜೀ ಕನ್ನಡ ಕಿರುತೆರೆ ವೇದಿಕೆಯ ಮೂಲಕ ಇದೀ ಕನ್ನಡನಾಡಿನ ಜನತೆಗೆ ವಪರಿಚಿತವಾಗಿದ್ದಾಳೆ. ಆದರೆ, ನಾವು ಆರಂಭದಲ್ಲಿ ನೋಡಿದ್ದ ಗಗನಾ ಭಾರಿ ಇವಳೇನಾ ಎನ್ನುವಷ್ಟರಮಟ್ಟಿಗೆ ಇದೀಗ ಬದಲಾವಣೆ ಆಗಿದ್ದಾಳೆ. ಗಗನಾಳ ಡ್ರೆಸ್, ಸ್ಟೈಲ್, ಲುಕ್ ಹಾಗೂ ಫ್ಯಾಷನ್ ನೋಡಿದ್ರೆ ಯಾರೋ ಸೆಲೆಬ್ರಿಟಿ ಕಂಡಂತೆ ಕಾಣುತ್ತಿದ್ದಾಳೆ.
27
ಕಾಮಿಡಿ ಕಿಲಾಡಿಗಳು, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಮಹಾನಟಿ, ಹಳ್ಳಿ ಹೈದ ಪ್ಯಾಟೆಗ್ ಬಂದ ಸೇರಿ ಹಲವು ಕಾರ್ಯಕ್ರಮಗಳಲ್ಲಿ ನೂರಾರು ಪ್ರತಿಭೆಗಳು ಕನ್ನಡ ನಾಡಿಗೆ ಪರಿಚಿತರಾಗಿದ್ದಾರೆ. ಅದೇ ರೀತಿ ಜೀ ಕನ್ನಡ ಕಿರುತೆರೆಯ ಮಹಾನಟಿ ಕಾರ್ಯಕ್ರಮದ ಮೂಲಕ ನಾಡಿಗೆ ಪರಿಚಿತವಾದ ಹುಡುಗಿ ಆಗಿದ್ದಾರೆ.
37
ಗಗನ ಭಾರಿ ಎಂದಾಕ್ಷಣ ಯಾರೀ ಹುಡುಗಿ ಮಾತಿನ ಮಲ್ಲಿ ಎಂದು ಸುಲಭವಾಗಿ ಹೇಳಬಹುದು. ಆರಂಭದಲ್ಲಿ ಹಳ್ಳಿ ಹುಡುಗಿ ಲುಕ್‌ನಲ್ಲಿದ್ದ ಗಗನ ಭಾರಿ ಯಾವುದೇ ವೇದಿಕೆಯ ಮೇಲೆ ಮೈಕ್ ಕೊಟ್ಟರೂ ತಲೆಗೂ ನಾಲಿಗೆಗೂ ಕನೆಕ್ಷನ್ ಇಲ್ಲದೆ ಬಾಯಿಗೆ ಬಂದಿದ್ದನ್ನೆಲ್ಲಾ ಮುಕ್ತವಾಗಿ ಹೇಳಿಬಿಡುತ್ತಿದ್ದಳು. ಇದು ತುಂಬಾ ಓವರ್ ಎನಿಸಿದರೂ ಆಕೆಯ ಮಾತಿನಲ್ಲಿದ್ದ ಮುಗ್ದತೆ ಮಾತ್ರ ಎಲ್ಲರನ್ನೂ ಆಕೆಗೆ ಅಭಿಮಾಣಿಗಳು ಆಗುವಂತೆ ಮಾಡಿತ್ತು.
ಒಂದು ಸಣ್ಣ ಹಳ್ಳಿ ಅಥವಾ ಪಟ್ಟಣದಲ್ಲಿ ಓದಿ ಬೆಳೆದ ಸಾಮಾನ್ಯ ಹುಡುಗಿಯರಂತೆ ಇದ್ದ ಗಗನಾ ಭಾರಿಯನ್ನು ನೋಡಿದರೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕು. ಕಿರುತೆರೆಯ ರಿಯಾಲಿಟಿ ಶೋಗಳು ಮಾತ್ರವಲ್ಲದೇ ಧಾರಾವಾಹಿ, ಸಿನಿಮಾ ಇತ್ಯಾದಿ ವೇದಿಕೆಗಳ ಮೂಲಕ ಎತ್ತರೆತ್ತರಕ್ಕೆ ಬೆಳೆಯಬೇಕು ಎಂದು ಕನ್ನಡಿಗರು ಮುಕ್ತ ಮನಸ್ಸಿನಿಂದ ಹಾರೈಸುತ್ತಿದ್ದಾರೆ.
57
ಆದರೆ, ಅದೇ ಹಳೆಯ ಹಳ್ಳಿ ಹುಡುಗಿ ಗಗನ ಭಾರಿ ಇದೀಗ ತುಂಬಾ ಸ್ಟೈಲಿಶ್ ಆಗಿದ್ದಾರೆ. ಅದು ಕೂಡ ಯಾರೋ ದೊಡ್ಡ ಸಸೆಲೆಬ್ರಿಟಿ ಕುಟುಂಬದವರಂತೆ ಕಾಣಿಸುತ್ತಿದ್ದಾಳೆ. ನೋಡುವುದಕ್ಕೆ ಹೀರೋಯಿನ್‌ನಂತೆ ಕಾಣುತ್ತಿದ್ದು, ಸಿನಿಮಾ ಆಫರ್‌ಗಳು ಸಿಕ್ಕಿದರೂ ಆಶ್ಚರ್ಯಪಡಬೇಕಿಲ್ಲ. ಹಳ್ಳಿ ಹುಡ್ಗೀರಂತೆ ಸಿಂಪಲ್ ಚೂಡಿದಾರ್, ಸೀರೆ, ಲೆಹೆಂಗಾ, ಲಂಗಾ-ದಾವಣಿಯಲ್ಲಿ ಮಿಂಚುತ್ತಿದ್ದ ಗಗನ ಭಾರಿ ಇದೀಗ ಫುಲ್ ಸ್ಟೈಲಿಶ್ ಆಗಿ ಡ್ರೆಸ್ ಧರಿಸುತ್ತಿದ್ದಾರೆ. ಹೀಗಾಗಿ, ಇವಳೇನಾ ಹಳ್ಳಿ ಹುಡುಗಿ ಗಗನಾ ಎಂಬಷ್ಟು ಬದಲಾವಣೆ ಆಗಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮಹಾನಟಿ ರಿಯಾಲಿಟಿ ಶೋನಲ್ಲಿ 3ನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ ಭಾರಿ ತನ್ನ ಮಾತುಗಳಿಂದಲೇ ನಾಡಿನ ಜನತೆಯ ಮನ ಗೆದ್ದಿದ್ದರು. ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಳು. ಇದಾದ ನಂತರ ಜೀ ಎಂಟರ್‌ಟೇನರ್ಸ್ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿದ್ದಳು. ಇತ್ತೀಚೆಗೆ ಸರಿಗಮಪ ಮಹಾಮನರಂಜನೆ ಕಾರ್ಯಕ್ರಮದ ವೇದಿಕೆಯಲ್ಲಿಯೂ ಕಾಣಿಸಿಕೊಂಡಿದ್ದರು.
77
ಚಿತ್ರದುರ್ಗದಲ್ಲಿ ಜೀ ಕನ್ನಡ ಕಿರುತೆರೆಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದ ವೀಕ್ಷಣೆಗೆ ಬಂದಿದ್ದ ಗಗನ ಭಾರಿ ಇದೀಗ ಜೀ ಕನ್ನಡ ವಾಹಿನಿಯ ಪ್ರಮುಖ ತಾರೆಯರಲ್ಲಿ ಒಬ್ಬರಾಗಿದ್ದಾಳೆ. ಅನುಶ್ರೀ ಅಕ್ಕ ಯಾವಾವ ಕಾರ್ಯಕ್ರಮಗಳಿಗೆ ಆಂಕರ್ ಆಗುತ್ತಾರೋ ಆ ಎಲ್ಲ ಜೀ ವಾಹಿನಿ ಕಾರ್ಯಕ್ರಮಗಳಲ್ಲಿ ನಾನೂ ಸ್ಪರ್ಧಿ ಆಗಿರುತ್ತೇನೆ ಎಂದು ಹೇಳಿದ್ದಳು. ಗಗನಾ ಆಸೆಯಂತೆ ಜೀ ವಾಹಿನಿಯ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಗಗನ ಭಾಗವಹಿಸುತ್ತಿದ್ದಾರೆ. ಹಳ್ಳಿ ಹುಡುಗಿಯಿಂದ ಸ್ಟೈಲಿಶ್ ಐಕಾನ್ ಆಗಲು ಜೀ ಕನ್ನಡ ವಾಹಿನಿ ಅವಕಾಶಗಳು ಹಾಗೂ ಆಂಕರ್ ಅನುಶ್ರೀ ಕಾರಣವೆಂದರೂ ಒಂದರ್ಥದಲ್ಲಿ ತಪ್ಪಾಗಲಾರದು..