ಮದುವೆಯ ಸಂಭ್ರಮದ ಕ್ಷಣಗಳ ಫೋಟೊ ಹಂಚಿಕೊಂಡ ನಟಿ ಮೇಘನಾ ಶಂಕರಪ್ಪ

Published : Feb 12, 2025, 05:35 PM ISTUpdated : Feb 13, 2025, 10:25 AM IST

ಸೀತಾ ರಾಮ ಧಾರಾವಾಹಿ ನಟಿ ಮೇಘನಾ ಶಂಕರಪ್ಪ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಸುಂದರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀವು ನೋಡಿ ಸಂಭ್ರಮದ ಕ್ಷಣಗಳ ಫೋಟೊಗಳನ್ನು.   

PREV
19
ಮದುವೆಯ ಸಂಭ್ರಮದ ಕ್ಷಣಗಳ ಫೋಟೊ ಹಂಚಿಕೊಂಡ ನಟಿ ಮೇಘನಾ ಶಂಕರಪ್ಪ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಸೀತಾರಾಮದಲ್ಲಿ ಪ್ರಿಯಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಮೇಘನಾ ಶಂಕರಪ್ಪ (Meghana Shankarappa) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
 

29

ಸೀತಾ ರಾಮ ಸೀರಿಯಲ್ ನಲ್ಲಿ ಕ್ಯೂಟ್ ಆಗಿ ತನ್ನ ಬಬ್ಲಿ ಪಾತ್ರದ ಮೂಲಕ ಗಮನ ಸೆಳೆದ ನಟಿ ಮೇಘನಾ, ಇವರು ಸೀರಿಯಲ್ ನಲ್ಲಿ ಅಶೋಕ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಜೋಡಿಯನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. 
 

39

ಇದೀಗ ನಟಿ ರಿಯಲ್ ಆಗಿ ವೈವಾಹಿಕ ಜೀವನಕ್ಕೆ (married life) ಕಾಲಿಟ್ಟಿದ್ದಾರೆ. ಮೇಘನಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮದುವೆಯ ಸುಂದರ ಕ್ಷಣಗಳ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಮದುವೆಯ ಪ್ರತಿಯೊಂದು ಸಂಭ್ರಮದ ಕ್ಷಣಗಳು ಸಹ ಸೆರೆಯಾಗಿದೆ. 
 

49

ಮೇಘನಾ ತಮ್ಮ ಮದುವೆ ಸಂಭ್ರಮದ ವಿವಿಧ ಫೋಟೊಗಳನ್ನು ನಟಿ ಅಭಿಮಾನಿಗಳ ಜೊತೆ ಶೇರ್ ಮಾಡುತ್ತಲೇ ಇದ್ದರು. ಅರಶಿನ ಶಾಸ್ತ್ರದ ಫೋಟೊ, ಮೆಹೆಂದಿ ಶಾಸ್ತ್ರದ ಫೊಟೊಗಳನ್ನು ಸಹ ಹಂಚಿಕೊಂಡಿದ್ದರು. 
 

59

ಮೇಘನಾ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಇವರು ಇಂಜಿನಿಯರ್ ಆಗಿರುವ ಜಯಂತ್ ಜೊತೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನಲ್ಲಿ ಮದುವೆ ಅದ್ಧೂರಿಯಾಗಿ ನಡೆದಿದ್ದು, ಕಿರುತೆರೆಯ ತಾರೆಯರು ಮದುವೆಗೆ ಆಗಮಿಸಿ ಸಂಭ್ರಮಿಸಿದ್ದರು. 
 

69

ಮೇಘನಾ ಗೋಲ್ಡನ್ ಬಣ್ಣದ ಸೀರೆ, ಬ್ಲೌಸ್, ಜ್ಯುವೆಲ್ಲರಿಯಲ್ಲಿ ಸಖತ್ ಆಗಿ ಮಿಂಚಿದರೆ, ಇವರ ಪತಿ ಜಯಂತ್ ಕೂಡ ಗೋಲ್ಡನ್ ಬಣ್ಣದ ಪಂಚೆ, ಶಲ್ಯದಲ್ಲಿ ಕಾಣಿಸಿಕೊಂಡಿದ್ದಾರೆ. 
 

79

ಮೇಘನಾ ಮತ್ತು ಜಯಂತ್ ಒಂದಿಷ್ಟು ಪ್ರಿ ವೆಡ್ಡಿಂಗ್ ಫೋಟೊ ಶೂಟ್ (pre wedding photoshoot), ವಿಡಿಯೋ ಕೂಡ ಮಾಡಿದ್ದು, ಅದನ್ನು ಕೂಡ ಜನ ಇಷ್ಟಪಟ್ಟಿದ್ದರು. ಇಬ್ಬರ ಜೋಡಿ ಚೆನ್ನಾಗಿದೆ ಎಂದು ಹಾರೈಸಿದ್ದರು. 
 

89

ಇದೀಗ ಮೇಘನಾ ತಮ್ಮ ಮದುವೆ ಆಲ್ಬಂ ಶೇರ್ ಮಾಡಿದ್ದು, ಮದುವೆಯ ಉಡುಗೆಯಲ್ಲಿ ಜೋಡಿಗಳು, ಮೆಹೆಂದಿ ಫೋಟೊ, ಧಾರೆ ಫೋಟೊ, ದಿಬ್ಬಣದ ಫೋಟೊಗಳನ್ನು ಮೇಘನಾ ಶೇರ್ ಮಾಡಿದ್ದಾರೆ. 
 

99

ಮದುವೆಯ ಫೋಟೊಗಳನ್ನು ನೋಡಿ, ಅಭಿಮಾನಿಗಳು ನಟಿಯ ಹೊಸ ಜೀವನಕ್ಕೆ ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನದಲ್ಲಿ ಶುಭಾಶಯಗಳು, ಯಾವಾಗಲೂ ಹೀಗೆ ಖುಷಿಯಾಗಿರಿ ಎಂದು ಹಾರೈಸಿದ್ದಾರೆ. 
 

Read more Photos on
click me!

Recommended Stories