ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಸೌಂದರ್ಯಾ ಶೆಟ್ಟಿ, ಈ ಹಿಂದೆ ಸ್ಪ್ಲಿಟ್ಸ್ ವಿಲ್ಲಾ ಶೋನಲ್ಲಿ ನಿರೂಪಕಿ ಸನ್ನಿ ಲಿಯೋನ್ ಮುಂದೆ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ನಾಲ್ಕು ವರ್ಷಗಳ ಸಂಬಂಧ ಹಾಳಾಗಿದ್ದೇಕೆ ಎಂಬುದನ್ನು ಖುಷಿಯಾಗಿ ಸೌಂದರ್ಯಾ ಹೇಳಿಕೊಂಡಿದ್ದರು.
ಬಿಗ್‌ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿಯಾಗಿರುವ ಕರಾವಳಿ ಚೆಲುವೆ ಸೌಂದರ್ಯಾ ಶೆಟ್ಟಿ, ಈ ಹಿಂದೆ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದರು. ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಂದೆಯೇ ತಮ್ಮ ಪ್ರೀತಿಯ ವಿಚಾರವನ್ನು ಸೌಂದರ್ಯಾ ಶೆಟ್ಟಿ ತಿಳಿಸಿದ್ದರು. ಈ ವಿಡಿಯೋವನ್ನು ಸೌಂದರ್ಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ.
25
Splitsvilla X6, MTV Roadies ರಿಯಾಲಿಟಿ ಶೋ
ಕರಾವಳಿಯ ಸೌಂದರ್ಯಾ ಶೆಟ್ಟಿ, ರೂಪದರ್ಶಿ, ಡ್ಯಾನ್ಸರ್, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಮಾದಕ ಚೆಲುವೆ ಸನ್ನಿ ಲಿಯೋನ್ ನಿರೂಪಣೆಯ Splitsvilla X6 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಮಿಂಚು ಹರಿಸಿದ್ದರು. ಇದರ ಜೊತೆ ಎಂಟಿವಿ ವಾಹಿನಿಯ ಜನಪ್ರಿಯ ಶೋ, MTV Roadiesನಲ್ಲಿ ಸೌಂದರ್ಯಾ ಶೆಟ್ಟಿ ಕಾಣಿಸಿಕೊಂಡಿದ್ದರು.
35
ಬಿಗ್‌ಬಾಸ್ ಸ್ಪರ್ಧಿ
ಕನ್ನಡ ಕಿರುತೆರೆಗೆ ಸೌಂದರ್ಯಾ ಶೆಟ್ಟಿ ಹೊಸ ಪರಿಚಯವಾದ್ರೂ ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಯಾಗುವಂತೆ ಸೌಂದರ್ಯಾ ಅವರ ಹಳೆಯ ವಿಡಿಯೋಗಳು ಮತ್ತೊಮ್ಮೆ ವೈರಲ್ ಆಗುತ್ತಿವೆ. ಇನ್‌ಸ್ಟಾಗ್ರಾಂನಲ್ಲಿ 6.9 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಸೌಂದರ್ಯಾ, Splitsvilla ಶೋನಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ನಿರೂಪಕಿ ಸನ್ನಿ ಲಿಯೋನ್ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದರು.
ನಾನು ನಾಲ್ಕು ವರ್ಷ ಓರ್ವನನ್ನು ಡೇಟ್ ಮಾಡಿದ್ದೆ. ಅವನೊಂದಿಗೆ ಡೇಟ್ ಚೆನ್ನಾಗಿಯೇ ಇತ್ತು. ಆದ್ರೆ ಅವನು ನನ್ನ ವಿಚಾರದಲ್ಲಿ Possessive ಆಗಿದ್ದನು. ನೀನು ನನ್ನವಳು, ಬೇರೆಯವರೊಂದಿಗೆ ಮಾತನಾಡಬಾರದು ಅಂತ ಹೇಳುತ್ತಿದ್ದಾರೆ. ಆದ್ರೆ ನಾನು ಫ್ರೀ ಬರ್ಡ್, ನನಗೆ ಫ್ರೀಡಂ ಬೇಕಿತ್ತು. ಹಾಗಾಗಿ ಬ್ರೇಕಪ್ ಆಯ್ತು. ಕಳೆದ ಒಂದು ವರ್ಷದಿಂದ ನಾನು ಸಿಂಗಲ್. ನೋ ಮೆನ್ ಇನ್ ಮೈ ಲೈಫ್. ಈಗ ಸ್ಪ್ಲಿಟ್ಸ್ ವಿಲ್ಲಾದಲ್ಲಿ ಯಾರಾದ್ರೂ ಸಿಗ್ತಾರಾ ನೋಡೋಣ ಎಂದು ಹೇಳಿಕೊಂಡಿದ್ದಾರೆ.
55
ದಿಪ್ತಾಂಶು ಸೈನಿ ಪಾರ್ಟನರ್
Splitsvilla ಶೋನಲ್ಲಿ ಸೌಂದರ್ಯಾ ಅವರಿಗೆ ಮಾಡೆಲ್ ದಿಪ್ತಾಂಶು ಸೈನಿ ಪಾರ್ಟನರ್ ಆಗಿದ್ದರು. ಇಬ್ಬರ ಜೊತೆಯಾಟ ಮತ್ತು ಕೆಮಿಸ್ಟ್ರಿ ಸಖತ್ ವರ್ಕೌಟ್ ಆಗಿತ್ತು. ಈ ಶೋ ಮುಕ್ತಾಯದ ಬಳಿಕ ನಾನು ಹೊರಗೆ ಬೇರೆಯವರೊಂದಿಗೆ ಡೇಟ್ ಮಾಡುತ್ತಿರೋ ವಿಷಯವನ್ನು ದಿಪ್ತಾಂಶು ಹೇಳಿಕೊಂಡಿದ್ದರು. ಈ ಸಂಬಂಧ ದಿಪ್ತಾಂಶು ಅವರನ್ನು ಸೌಂದರ್ಯಾ ಶೆಟ್ಟಿ ಸಾರ್ವಜನಿಕವಾಗಿ ಪ್ರಶ್ನೆ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.