ಬಿಗ್‌ಬಾಸ್ ಸೀಸನ್ 12ರ ಪ್ರೋಮೋದಲ್ಲಿ ನಿರೂಪಕ ಸುದೀಪ್, ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಒಂದು ಪದ ಬಳಸಿದ್ದಾರೆ. ಈ ಪದ ಬಳಕೆಯು ವೀಕ್ಷಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸುದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಯಾಗಿರುವ ರಕ್ಷಿತಾ ಶೆಟ್ಟಿ ತಮ್ಮದೇ ಶೈಲಿಯಲ್ಲಿ ಆಡುತ್ತಿದ್ದಾರೆ. ಹಾಗಾಗಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದುವ ಮೂಲಕ ಫಿನಾಲೆ ಸಮೀಪಕ್ಕೆ ರಕ್ಷಿತಾ ಶೆಟ್ಟಿ ತಲುಪಿದ್ದಾರೆ. ಭಾಷೆಯ ಹಿಡಿತವಿಲ್ಲದ ಕಾರಣ ರಕ್ಷಿತಾ ಶೆಟ್ಟಿ ಅವರಿಗೆ ಸಂಪೂರ್ಣವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂಬುವುದು ಮನೆಯ ಸದಸ್ಯರ ಮಾತಾಗಿದೆ.
25
ವೀಕ್ಷಕರಿಂದಲೇ ತೀವ್ರ ಅಸಮಾಧಾನ
ಇಂದು ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ರಕ್ಷಿತಾ ಶೆಟ್ಟಿ ಅವರನ್ನು ಕುರಿತು ಸುದೀಪ್ ಬಳಕೆ ಮಾಡಿದ ಪದಕ್ಕೆ ಬಿಗ್‌ಬಾಸ್ ವೀಕ್ಷಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರೋಮೋ ವಿಡಿಯೋಗೆ ಕಮೆಂಟ್ ಮೂಲಕ ಸುದೀಪ್ ಅವರ ಬಾಯಲ್ಲಿ ಈ ಮಾತು ಬರಬಾರದಿತ್ತು ಎಂದು ಸುಮತಿ ಕಮೆಂಟ್ ಮಾಡಿದ್ದಾರೆ.
35
ಪದ ಬಳಕೆ ಕುರಿತು ಚರ್ಚೆ
ಈ ಹಿಂದೆ ರಕ್ಷಿತಾ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಧ್ರುವಂತ್, ಉರೀತಾ ಇದೆಯಾ ಎಂಬ ಪದ ಬಳಕೆ ಮಾಡಿದ್ದರು. ಈ ಪದ ಬಳಕೆಯನ್ನು ಮಾಳು ತೀವ್ರವಾಗಿ ಖಂಡಿಸಿದ್ದರು. ಇದೇ ರೀತಿ ಈ ಬಾರಿಯ ಸೀಸನ್‌ನಲ್ಲಿ ಪದ ಬಳಕೆಯ ಕುರಿತು ವೀಕೆಂಡ್ ಸಂಚಿಕೆಯಲ್ಲಿಯೂ ಸುದೀರ್ಘವಾಗಿ ಸುದೀಪ್ ಚರ್ಚೆ ನಡೆಸಿದ್ದಾರೆ. ಇದೀಗ ಸುದೀಪ್ ಅವರೇ ಉರೀತಾ ಇದೆ ಎಂಬ ಪದ ಬಳಕೆ ಮಾಡಿರೋದನ್ನು ಕಂಡು ಕೆಲ ವೀಕ್ಷಕರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಉರಿಯುತ್ತೆ ಅಂತ ಸುದೀಪ್ ಹೇಳೋದು ಸರಿ ಇಲ್ಲ. ಈ ಸೀಸನ್‌ನಲ್ಲಿ ಸುದೀಪ್ ಅವರ ಒಂದು ಪಂಚಾಯಿತಿಯೂ ಚೆನ್ನಾಗಿಲ್ಲ ಎಂದು ಮೋಹನ್ ಕುಮಾರ್ ಎಂಬವರು ಕಮೆಂಟ್ ಮಾಡಿದ್ದಾರೆ. ಸುಮತಿ ಕೆಮ್ಮಣ್ಣು ಎಂಬವರು, ಸುದೀಪ್ ರಕ್ಷಿತಾ ಬಗ್ಗೆ ಹೇಳಿದ ಮಾತು ಸರಿಯಲ್ಲ. ಅದು ಡ್ಯಾಮೇಜ್ ಮಾಡುವ ಮಾತು. ಅವಳು ಹಾಗೆ ಇದ್ದರು ಕೂಡ ಸುದೀಪ್ ಬಾಯಲ್ಲಿ ಆ ಪದ ಬರಬಾರದಿತ್ತು ಎಂದು ಹೇಳಿದ್ದಾರೆ. ಇದೇ ರೀತಿಯಲ್ಲಿ ಹಲವು ಕಮೆಂಟ್‌ಗಳು ಬಂದಿವೆ.
ಸುದೀಪ್ ಕುರಿತು ಬೇಸರ ವ್ಯಕ್ತಪಡಿಸಿದ್ದಕ್ಕೆ ಅವರ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಒಂದು ಪದ ನೂರಾರು ಅರ್ಥವನ್ನು ನೀಡುತ್ತವೆ. ನಾವು ಯಾವಾಗ ಮತ್ತು ಎಲ್ಲಿ ಆ ಪದ ಬಳಸಿದ್ದೇವೆ ಎಂಬುದರ ಮೇಲೆ ಅರ್ಥವನ್ನು ವ್ಯಾಖ್ಯಾನಿಸಬಹುದು. ಇದು ತಮಾಷೆಯಲ್ಲಿ ಹೇಳಿದ್ದು, ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.